ಅರೇಂಜ್ ಮ್ಯಾರೇಜ್ (arranged marriage) ನಲ್ಲಿ ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾ ಕಷ್ಟದ ಕೆಲಸ ಏಕೆಂದರೆ ಅದು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅರೇಂಜ್ ಮ್ಯಾರೇಜ್ ಗಳಲ್ಲಿ, ಹುಡುಗ ಮತ್ತು ಹುಡುಗಿಗಿಂತ ಕುಟುಂಬದವರೇ ಎಲ್ಲದಕ್ಕೂ ಮಧ್ಯೆ ಬರುತ್ತಾರೆ. ಭಾರತದಲ್ಲಿ, ಕೆಲವೊಂದು ಅರೇಂಜ್ ಮ್ಯಾರೇಜ್ ಗಳಲ್ಲಿ ಹುಡುಗನಿಗಿಂತ ಆತನ ಕುಟುಂಬವು ಹುಡುಗಿಯನ್ನು ಇಷ್ಟಪಡೋದು ಮುಖ್ಯ. ಇದರ ನಂತರ, ಹುಡುಗ, ಹುಡುಗಿ ನೋಡಿದ್ರೆ ಮದುವೆ ಫಿಕ್ಸ್ ಆಗೋಯ್ತು.