ವೈವಾಹಿಕ ಜೀವನವನ್ನು (Married Life) ಸಂತೋಷದಿಂದ ಕಳೆಯಬೇಕು ಅನ್ನೋದಾದ್ರೆ, ನೀವು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಕಲಿಯಬೇಕು. ಒಬ್ಬರಿಗೊಬ್ಬರ ಅರ್ಥ ಮಾಡಿಕೊಂಡು, ಅವರು ಇದ್ದಂತೆ ಸ್ವೀಕರಿಸಿಕೊಂಡು ಬಂದ್ರೆ ದಾಂಪತ್ಯ ಜೀವನ ಮಧುರವಾಗಿರುತ್ತೆ. ಅದಕ್ಕಾಗಿ ನೀವು ಸಣ್ಣ ಸಣ್ಣ ಹೆಜ್ಜೆ ಇಡಬೇಕು. ನಿಮ್ಮ ಸಣ್ಣ ಪ್ರಯತ್ನಗಳಿಂದ ಸಂಗಾತಿಯ ಹೃದಯ ಗೆಲ್ಲೋದು ಹೇಗೆ ನೋಡೋಣ.
ಯಾವುದೇ ಸಂಬಂಧದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ತುಂಬಾ ಮುಖ್ಯ ಈ ಎರಡೂ ವಿಷಯಗಳು ಸಂಬಂಧವನ್ನು ಬಲಪಡಿಸುತ್ತವೆ, ವಿಶೇಷವಾಗಿ ಗಂಡ ಮತ್ತು ಹೆಂಡತಿ ನಡುವಿನ ಸಂಬಂಧದಲ್ಲಿ ಪ್ರೀತಿ (Love), ನಂಬಿಕೆ (Trust) ತುಂಬಾನೆ ಮುಖ್ಯ.. ಪ್ರೇಮ ವಿವಾಹದಲ್ಲಿ (Love Marriage), ದಂಪತಿಗಳು ಒಬ್ಬರನ್ನೊಬ್ಬರು ಪರಸ್ಪರ ಮೊದಲೇ ತಿಳಿದಿದ್ದರೆ, ಸಮಸ್ಯೆಗಳು ಇರೋದಿಲ್ಲ. ಆದರೆ ಅರೇಂಜ್ ಮ್ಯಾರೇಜ್ (Arranged Marriage) ನಲ್ಲಿ ಪರಸ್ಪರ ತಿಳಿದುಕೊಳ್ಳಲು, ಅರ್ಥಮಾಡಿಕೊಳ್ಳಲು ಮತ್ತು ಪ್ರೀತಿ ಹೆಚ್ಚಿಸಲು ಸಾಕಷ್ಟು ಸಮಯ ಬೇಕಾಗುತ್ತೆ. ನಿಮ್ಮದೂ ಕೂಡ ಅರೇಂಜ್ ಮ್ಯಾರೇಜ್ ಆಗಿದ್ರೆ. ಈ ರೀತಿ ಸಣ್ಣ, ಪುಟ್ಟ ವಿಷಯಗಳ ಮೂಲಕ ಸಂಗಾತಿಯ ಹೃದಯ ಗೆಲ್ಲಬಹುದು.
ಮೌನಗಳನ್ನು ಅರ್ಥಮಾಡಿಕೊಳ್ಳಿ ((know their silence)
ನಿಮ್ಮ ಸಂಗಾತಿಯು ಯಾವಾಗಲೂ ಇರೋದಕ್ಕಿಂತ ಹೆಚ್ಚು ಶಾಂತವಾಗಿದ್ದರೆ, ಪದೇ ಪದೇ ಪ್ರಶ್ನೆಗಳನ್ನು ಕೇಳುವ ಮೂಲಕ ಅವರಿಗೆ ಕಿರಿಕಿರಿ ಉಂಟುಮಾಡಬೇಡಿ, ಬದಲಿಗೆ ಸ್ವಲ್ಪ ಸಮಯದವರೆಗೆ ಅವರಿಗೆ ಒಂಟಿಯಾಗಿರಲು ಬಿಡಿ. ಅವರ ಮೌನ, ದುಃಖದ ಅರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಐ ಲವ್ ಯು ಹೇಳೋದು ಮುಖ್ಯ (say I love you)
ಈ ಮೂರು ಪದಗಳು ನಿಜವಾಗಿಯೂ ಮ್ಯಾಜಿಕ್ ಮಾಡುತ್ತವೆ. ಸಂಗಾತಿಯು ನಿಮಗಾಗಿ ಏನನ್ನಾದರೂ ಮಾಡಿದರೆ, ಅವರಿಗೆ ಥ್ಯಾಂಕ್ಯೂ ಹೇಳುವ ಬದಲು ಐ ಲವ್ ಯೂ ಅಂತ ಹೇಳಿ. ಇದನ್ನ ಹೇಳಲು ಯಾವುದೇ ವಿಶೇಷ ಸಂದರ್ಭಕ್ಕಾಗಿ ಕಾಯುವ ಅಗತ್ಯವಿಲ್ಲ, ನಿಮಗೆ ಮನಸಾದಾಗಲೆಲ್ಲಾ ಐ ಲವ್ ಯೂ ಎಂದೆನ್ನಬಹುದು.
ತಪ್ಪು ಮಾಡಿದ್ರೆ, ಅದನ್ನ ಒಪ್ಪಿಕೊಳ್ಳಿ (accept your mistakes)
ಪ್ರೀತಿಯಲ್ಲಿ ಸ್ವಲ್ಪ ಕೋಪ, ಜಗಳ ಅಗತ್ಯ, ಆದರೆ ಈ ಸಂಘರ್ಷವು ಸಂಬಂಧದಲ್ಲಿ ಅಂತರವು ಹೆಚ್ಚಾಗಲು ಪ್ರಾರಂಭಿಸುವಷ್ಟು ದೀರ್ಘವಾಗಬಾರದು, ಆದ್ದರಿಂದ ನಿಮ್ಮ ನಡುವೆ ಜಗಳವಾದರೆ ಮತ್ತು ತಪ್ಪು ನಿಮ್ಮದಾಗಿದ್ದರೆ, ಯಾವುದೆ ಹಿಂಜರಿಕೆಯಿಲ್ಲದೆ ಕ್ಷಮೆಯಾಚಿಸಿ. ಇದರಿಂದ ಯಾರೂ ಚಿಕ್ಕವರಾಗೋದಿಲ್ಲ. ಇದು ನಿಮ್ಮ ಪ್ರೀತಿಯನ್ನು ತೋರಿಸುತ್ತೆ.
ಅಡುಗೆ ಮಾಡಿ ಮತ್ತು ತಿನ್ನಿಸಿ
ಸಂಗಾತಿ ಯಾವಾಗಲೂ ನಿಮಗಾಗಿ ಅಡುಗೆ ಮಾಡಿ ಆಹಾರ ನೀಡುತ್ತಿದ್ರೆ, ಈ ಬಾರಿ ನೀವು ಅವರಿಗಾಗಿ ಏನಾದರೂ ಮಾಡಿ. ಅವರಿಗೆ ಇಷ್ಟವಾದ ತಿಂಡಿಯನ್ನು ನೀವು ತಯಾರು ಮಾಡೋ ಮೂಲಕ ಅವರಿಗೆ ಸರ್ವ್ ಮಾಡಿ. ಇದರಿಂದ ನೀವು ಅವರಿಗಾಗಿ ಏನು ಬೇಕಾದರೂ ಮಾಡಬಲ್ಲಿರಿ ಅನ್ನೋದನ್ನು ಅವರಿಗೆ ಮನವರಿಕೆ ಮಾಡಬಹುದು.
ಬೆನ್ನೆಲುಬಾಗಿ
ಸಂಬಂಧದಲ್ಲಿ ಸಂಗಾತಿಯ ಬೆಂಬಲ ಬಹಳ ಮುಖ್ಯ. ದೈಹಿಕ ಬೆಂಬಲದ ಜೊತೆಗೆ, ಮಾನಸಿಕ ಬೆಂಬಲವೂ ಬಹಳ ಮುಖ್ಯ. ಇದು ಸಂಗಾತಿಯ ಬಗ್ಗೆ ನೀವು ಯೋಚಿಸುತ್ತೀರಿ ಎಂದು ಭಾವಿಸುವಂತೆ ಮಾಡುತ್ತದೆ ಮತ್ತು ಈ ಆಲೋಚನೆಯು ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.