ದಾಂಪತ್ಯದಲ್ಲಿ ಹಣಕಾಸಿನ ಯೋಜನೆಗಳು ಹೇಗಿರ್ಬೇಕು , ಸೇವಿಂಗ್ಸ್ ಮಾಡೋದು ಹೇಗೆ?

First Published | Jul 22, 2023, 4:15 PM IST

ದಂಪತಿಗಳು ಎಷ್ಟೇ ಆತ್ಮೀಯರಾಗಿದ್ದರೂ ಸಣ್ಣಪುಟ್ಟ ವಿಚಾರಗಳಲ್ಲಿ ಜಗಳವಾಗುವುದು ಸಹಜ, ಅಂತಹ ವಿಷಯಗಳಲ್ಲಿ ಹಣಕಾಸಿನ ಯೋಜನೆಗಳು ಪ್ರಮುಖ ಪಾತ್ರವಹಿಸುತ್ತವೆ. ಹಣ ನಿರ್ವಹಣೆಯನ್ನು ಹೇಗೆ ಮಾಡಬೇಕೆಂದು ತಿಳಿದುಕೊಂಡರೆ ಜಗಳವಾಗೋದು ತಪ್ಪುತ್ತೆ.

ದಾಂಪತ್ಯದಲ್ಲಿ ಪತಿ-ಪತ್ನಿ ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸುವುದು ತುಂಬಾ ಮುಖ್ಯ. ಅದರಲ್ಲೂ ಹಣಕಾಸಿನ ವಿಚಾರದಲ್ಲಂತೂ ಸರಿಯಾದ ಹೊಂದಾಣಿಕೆಯಿರಬೇಕು. ಹಣದ ವಿಚಾರದಲ್ಲಿ ಪತಿ ಪತ್ನಿಯಿಂದ ಮತ್ತು ಪತಿ ಪತ್ನಿಯಿಂದ ಸಂಪೂರ್ಣ ವಿಶ್ವಾಸ ಗಳಿಸಬೇಕು.

ಇಬ್ಬರೂ ಕುಳಿತು ಪರಸ್ಪರ ಅರ್ಥ ಮಾಡಿಕೊಳ್ಳುವ ಮೂಲಕ ಹಣಕಾಸಿನ ಸಮಸ್ಯೆಯನ್ನು ನಿವಾರಿಸಬಹುದು. ನಾವು ಪಡೆಯುತ್ತಿರುವ ಆದಾಯ ಮತ್ತು ನಾವು ಖರ್ಚು ಮಾಡುವ ವೆಚ್ಚ ಎಷ್ಟು ಎಂಬುದನ್ನು ಚರ್ಚೆ ಮಾಡಬೇಕು.

Latest Videos


ಯಾವೆಲ್ಲ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಇಬ್ಬರೂ ಒಂದು ಗ್ರಹಿಕೆಗೆ ಬಂದು ಯೋಜನೆ ಅನುಸರಿಸಿದರೆ ಕುಟುಂಬ ಆರ್ಥಿಕವಾಗಿ ಸಮೃದ್ಧಿ ಸಾಧಿಸುತ್ತದೆ. ಹಣಕಾಸಿನ ವಿಷಯಗಳಲ್ಲಿ ಪತಿ-ಪತ್ನಿಯ ನಡುವೆ ಯಾವಾಗಲೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ.

ಹಣದ ಬಗ್ಗೆ ನಿಮ್ಮ ಸಂಗಾತಿಗೆ ಸುಳ್ಳು ಹೇಳುವುದು, ಅವರಿಗೆ ಮೋಸ ಮಾಡುವುದು ಮಾಡಬಾರದು. ಯೋಜನೆಗಳಿಗೆ ಅನುಗುಣವಾಗಿ ವೆಚ್ಚಗಳು ಏರುಪೇರಾದಾಗ ನಿಮ್ಮ ಸಂಗಾತಿಗೆ ಸರಿಯಾದ ಸಲಹೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವುದು ಒಳ್ಳೆಯದು.

ಇಬ್ಬರೂ ಸಂಗಾತಿಗಳು ಅಂತಹ ಸಾಮರ್ಥ್ಯದ ಕೊರತೆಯಿರುವಾಗ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ. ಇಂದಿನ ಖರ್ಚುಗಳಿಗಿಂತ ಭವಿಷ್ಯಕ್ಕಾಗಿ ಹಣವನ್ನು ಉಳಿಸುವುದು ಮುಖ್ಯ ಎಂಬುದು ಒಂದು ತಿಳುವಳಿಕೆಯಾಗಿದೆ. ಏಕೆಂದರೆ ನಾಳೆ ನಮ್ಮ ದೇಹ ಹಣ ಗಳಿಸಲು ಸಹಕರಿಸದೇ ಇರಬಹುದು.

ಹಣದ ವಿಚಾರದಲ್ಲಿ ಪರಸ್ಪರ ವಾದ ಮಾಡುವ ಬದಲು ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ತಿಳುವಳಿಕೆಯೊಂದಿಗೆ ಯೋಜನೆಗಳನ್ನು ರೂಪಿಸಿಕೊಳ್ಳಿ. ಈ ಬಗ್ಗೆ ಪರಸ್ಪರ ಚರ್ಚಿಸುವುದರಿಂದ ಆರ್ಥಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಇಬ್ಬರೂ ಹತ್ತಿರವಾಗುತ್ತೀರಿ.

click me!