No Fault Divorce ಅಂದ್ರೇನು? ಕಾರಣ ಇಲ್ಲದೇಯೂ ಗಂಡ-ಹೆಂಡ್ತಿ ಬೇರೆ ಆಗ್ಬಹುದಾ?

First Published | Jul 20, 2023, 3:03 PM IST

ನೋ ಫಾಲ್ಟ್ ಡಿವೋರ್ಸ್ ಬಗ್ಗೆ ನೀವು ಕೇಳಿದ್ದೀರಾ? ಇಬ್ಬರ ನಡುವೆ ಡಿವೋರ್ಸ್ ನೀಡಲು ಯಾವುದೇ ಬಲವಾದ ಕಾರಣ ಇಲ್ಲದೇ ಇದ್ದರೂ ಸಹ ಡಿವೋರ್ಸ್ ನೀಡಬಹುದು. ಇದರ ಬಗ್ಗೆ ತಿಳಿಯೋಣ. 
 

ಹೆಚ್ಚಿನ ದೇಶಗಳಲ್ಲಿ, ವಿಚ್ಛೇದನವು ಫಾಲ್ಟ್ ಥಿಯರಿಯನ್ನು (fault theory) ಆಧರಿಸಿದೆ. ಪತಿ ಅಥವಾ ಪತ್ನಿ ಯಾರಾದರೂ ಒಬ್ಬರು ತಪ್ಪು, ಮೋಸ ಅಥವಾ ಮಾನಸಿಕ-ದೈಹಿಕ ಹಿಂಸೆಯನ್ನು ನೀಡಿದ್ರೆ ಡಿವೋರ್ಸ್ ನೀಡಬಹುದು. ಆದರೆ ಅನೇಕ ದೇಶಗಳು ಈಗ ದೋಷರಹಿತ ವಿಚ್ಛೇದನಗಳನ್ನು ಅಳವಡಿಸಿಕೊಳ್ಳುತ್ತಿವೆ ಅಂದರೆ ನೋ ಫಾಲ್ಟ್ ಡಿವೋರ್ಸ್. ಇದರಲ್ಲಿ, ಪತಿ -ಪತ್ನಿ ನಡುವೆ ಯಾವುದೇ ಬಲವಾದ ಕಾರಣವಿಲ್ಲದೆಯೂ ಡಿವೋರ್ಸ್ ನೀಡಬಹುದು.

ಪ್ರಪಂಚದಾದ್ಯಂತ ವಿಚ್ಛೇದನದ (divorce) ಪ್ರಮಾಣ ತುಂಬಾ ಹೆಚ್ಚಾಗಿದೆ. ಅಮೆರಿಕದಲ್ಲಿಯೇ ವರ್ಷದಲ್ಲಿ ಸುಮಾರು 4.5 ಮಿಲಿಯನ್ ಮದುವೆಗಳಾಗುತ್ತವೆ, ಅದರಲ್ಲಿ 50 ಪ್ರತಿಶತದಷ್ಟು ವಿಚ್ಛೇದನದ ಕೊನೆಗೊಳ್ಳುತ್ತೆ. ವಿಚ್ಛೇದನದ ಈ ಪ್ರಕ್ರಿಯೆ ಬಹಳ ದೀರ್ಘವಾಗಿದೆ. ಕೆಲವೊಮ್ಮೆ ಒಬ್ಬರನ್ನೊಬ್ಬರನ್ನು ಹಲವು ವಿಷಯಗಳಿಗೆ ಧೂಷಿಸುತ್ತಾ, ಡಿವೋರ್ಸ್ ನಿಡುತ್ತಾರೆ. ಇದೀಗ ಕೆಲವು ದೇಶಗಳಲ್ಲಿ ನೋ ಫಾಲ್ಟ್ ಡಿವೋರ್ಸ್ (no fault theory) ಚಾಲ್ತಿಯಲ್ಲಿದೆ. ಇದರಲ್ಲಿ, ಯಾರೂ ಯಾರ ಮೇಲೂ ದೋಷಾರೋಪ ಮಾಡುವಂತಿಲ್ಲ. ಕೇಸ್ ಬೇಗನೆ ಕೊನೆಗೊಳ್ಳುತ್ತೆ.

Tap to resize

ಸೋವಿಯತ್ ಯೂನಿಯನ್ ಅಂದರೆ ರಷ್ಯಾದಲ್ಲಿ ಆರಂಭ
ನೋ ಫಾಲ್ಟ್ ಡಿವೋರ್ಸ್ ಜಗತ್ತಿಗೆ ಹೊಸದಾಗಿರಬಹುದು, ಆದರೆ ಇದು ರಷ್ಯಾದಲ್ಲಿ 100 ವರ್ಷಗಳಿಗಿಂತ ಚಾಲ್ತಿಯಲ್ಲಿದೆ. ಬೋಲ್ಷೆವಿಕ್ ಕ್ರಾಂತಿಯು 1917 ರಲ್ಲಿ ನಡೆಯಿತು. ವ್ಲಾಡಿಮಿರ್ ಲೆನಿನ್ ಅದರ ನಾಯಕರಾಗಿದ್ದರು, ಅವರು ದೇಶವನ್ನು ಆಧುನೀಕರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಅದಕ್ಕೂ ಮೊದಲು, ರಷ್ಯಾದ ಆರ್ಥೊಡಾಕ್ಸ್ ಚರ್ಚ್ ಮದುವೆ ಮತ್ತು ಡಿವೋರ್ಸ್ ನೋಡಿಕೊಳ್ಳುತ್ತಿತ್ತು. ಆ ಸಂದರ್ಭದಲ್ಲಿ ವಿಚ್ಛೇದನ ನೀಡಲೇಬಾರದು ಎಂದು ಹೇಳಲಾಗುತ್ತಿತ್ತು, ದಂಪತಿ ತುಂಬಾ ಅಸಂತುಷ್ಟರಾಗಿದ್ದರೂ ಡಿವೋರ್ಸ್ ನೀಡುವಂತಿರಲಿಲ್ಲ. ದೈಹಿಕ ಹಿಂಸೆ (physical abuse), ಹಲ್ಲೆ, ಮೋಸದಂತಹ ಗಂಭೀರ ಸಂದರ್ಭದಲ್ಲಿ ಮಾತ್ರ ಡಿವೋರ್ಸ್ ನೀಡಲಾಗುತ್ತಿತ್ತು.

ಬೋಲ್ಷೆವಿಕ್ ಕ್ರಾಂತಿಯ ನಂತರ, ಮದುವೆಯ ಧಾರ್ಮಿಕ ಪರದೆ ತೆಗೆದುಹಾಕಲಾಯಿತು. ಆಗಲೂ ಮದುವೆ ಅನ್ನೋದು ತುಂಬಾನೆ ಪವಿತ್ರವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಷ್ಟವಿಲ್ಲದಿದ್ದರೂ ಸಂಗಾತಿ ಜೊತೆ ಉಳಿಯಬೇಕು ಎಂದು ಯಾರೂ ಹೇಳುತ್ತಿರಲಿಲ್ಲ. ದಂಪತಿ ರಷ್ಯಾದ ನೋಂದಣಿ ಕಚೇರಿಗೆ (registrar office) ಹೋಗಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸುತ್ತಿದ್ದರು. ಮೂರು ದಿನಗಳಲ್ಲಿ, ಇನ್ನೊಂದು ಪಾರ್ಟಿಗೆ ನೋಟಿಸ್ ಕಳುಹಿಸಲಾಗುತ್ತಿತ್ತು, ಜೊತೆಗೆ ತ್ವರಿತ ನಿರ್ಧಾರ ಸಹ ತೆಗೆದುಕೊಳ್ಳಲಾಗುತ್ತಿತ್ತು. 
 

ಮಕ್ಕಳ ಜವಾಬ್ಧಾರಿ ಅಮ್ಮನಿಗೆ
ಅಂದಿನ ಕಾಲದಲ್ಲಿ ಡಿವೋರ್ಸ್ ಆದ ಬಳಿಕ ದಂಪತಿಗೆ ಮಕ್ಕಳಿದ್ದರೆ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ತಾಯಿಗೆ ಬರುತ್ತಿತ್ತು. ತಂದೆ ಅದನ್ನು ಬೆಂಬಲಿಸುತ್ತಾರೋ ಇಲ್ಲವೋ, ಅನ್ನೋದು ಅವರಿಗೆ ಬಿಟ್ಟಿತ್ತು. ನ್ಯಾಯಾಲಯವು ಅದರಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ಜೋಸೆಫ್ ಸ್ಟಾಲಿನ್ ಅಧಿಕಾರಕ್ಕೆ ಬಂದ ನಂತರ, ವಿಚ್ಛೇದನದ ಆಧುನಿಕ ವ್ಯವಸ್ಥೆಯನ್ನು ನಿಷೇಧಿಸಿದರು.

ನೋ ಫಾಲ್ಟ್ ಡಿವೋರ್ಸ್
ಪ್ರತಿ ದೇಶದಲ್ಲಿ, ವಿಚ್ಛೇದನ ಪಡೆಯಲು ಒಂದು ಕಾರಣವಿದೆ. ನ್ಯಾಯಾಲಯವು ಆ ಕಾರಣವನ್ನು ಕೇಳಿ, ಇಬ್ಬರನ್ನು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಕೌಟುಂಬಿಕ ನ್ಯಾಯಾಲಯ ಮಧ್ಯಪ್ರವೇಶಿಸುತ್ತದೆ. ಇದರ ನಂತರವೂ, ಇಬ್ಬರ ನಡುವೆ ಯಾವುದೂ ಸರಿಯಾಗದೆ ಇದ್ದರೆ,  ನಂತರ ವಿಚ್ಚೇದನ ಪಡೆಯಬಹುದು. . ಆದರೆ ನೋ ಫಾಲ್ಟ್ ಡಿವೋರ್ಸ್ ನಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ.  ಇದರಿಂದ ಹಲ್ಲೆ, ಮೋಸ, ಹಿಂಸೆ ಬಗ್ಗೆ ಯಾವುದೇ ಕಾರಣವನ್ನು ಪತಿ -ಪತ್ನಿ ನೀಡಬೇಕಾಗಿಲ್ಲ. ಇಬ್ಬರ ನಡುವೆ ಸಂಬಂಧ ಸತ್ತಿದೆ ಎಂದು ಹೇಳಿದರೆ ಸಾಕಾಗುತ್ತೆ.  

ವಿಚ್ಛೇದನದ ಈ ವಿಧಾನವನ್ನು ಯಾಕೆ ಮುಖ್ಯ?
ಹೆಚ್ಚಿನ ದೇಶಗಳಲ್ಲಿ, ವಿಚ್ಛೇದನವು ಫಾಲ್ಟ್ ಥಿಯರಿಯನ್ನು ಆಧರಿಸಿದೆ. ಪತಿ ಅಥವಾ ಪತ್ನಿಯಿಂದ ತಪ್ಪಾಗಿದೇ ಎಂದು ಸಾಬೀತಾಗದ ಹೊರತು ಡಿವೋರ್ಸ್ ನೀಡಲಾಗೋದಿಲ್ಲ. ಈ ಪ್ರಕ್ರಿಯೆಯಿಂದಾಗಿ, ಅನೇಕ ಬಾರಿ ಜನರು ಸುಳ್ಳು ಪುರಾವೆಗಳನ್ನು ಹುಡುಕುತ್ತಾರೆ, ಆ ಮೂಲಕ ಡಿವೋರ್ಸ್ ಪಡೆದುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಎರಡೂ ಕಡೆಯವರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಮಕ್ಕಳನ್ನು ಸಹ ಅದರೊಳಗೆ ಎಳೆಯಲಾಗುತ್ತದೆ. ಅದಕ್ಕಾಗಿಯೆ ಸದ್ಯ ಅನೇಕ ದೇಶಗಳು ನೋ ಫಾಲ್ಟ್ ಡಿವೋರ್ಸ್ ಸಿದ್ಧಾಂತವನ್ನು ಫಾಲೋ ಮಾಡುತ್ತಿವೆ.

ನೋ ಫಾಲ್ಟ್ ಡಿವೋರ್ಸ್ ನಿಂದ ಅಪಾಯ ಇದೆಯೇ?
ನೋ ಫಾಲ್ಟ್ ಡಿವೋರ್ಸ್‌ನಿಂದಾಗಿ ಮಹಿಳೆಯರಿಗೆ ಹೆಚ್ಚು ಸಮಸ್ಯೆ ಉಂಟಾಗಿದೆ.  ನೋ ಫಾಲ್ಟ್ ಡಿವೋರ್ಸ್ ಅನುಸರಿಸುವ ದೇಶಗಳಲ್ಲಿ ವಿಚ್ಛೇದನ ಹೆಚ್ಚಾಗಿದೆಯೇ ಎಂಬುದರ ಬಗ್ಗೆ ಪ್ರಸ್ತುತ ಯಾವುದೇ ಅಧ್ಯಯನ ನಡೆದಿಲ್ಲ, ಆದರೆ ಮಹಿಳೆಯರಿಗಿಂತ ಪುರುಷರು ಹೆಚ್ಚು ವಿಚ್ಛೇದನ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಇದರಿಂದ ಪುರುಷರು ಮಕ್ಕಳ ಹೆಚ್ಚಿನ ಜವಾಬ್ಧಾರಿಯನ್ನು ಮಹಿಳೆಯರ ಮೇಲೆ ಹೊರೆಸಿ, ತಾವು ಸುಮ್ಮನಿದ್ದು ಬಿಡುತ್ತಾರೆ. ಇನ್ನು ಈ ಡಿವೋರ್ಸ್‌ನಿಂದ ಮಹಿಳೆಯರಿಗೆ ಹೆಚ್ಚು ಒಂಟಿತನ ಕಾಡುತ್ತಿದೆ. 

ಭಾರತದಲ್ಲಿ ಡಿವೋರ್ಸ್ ಸಿಸ್ಟಮ್ ಹೇಗಿದೆ? (Divorce system in India)
ಎರಡೂ ಪಾರ್ಟಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಒಪ್ಪುವುದು ಅವಶ್ಯಕ. ಇದರ ನಂತರವೂ, ನ್ಯಾಯಾಲಯ ಅವರಿಬ್ಬರಿಗೂ ಸ್ವಲ್ಪ ಸಮಯ ನೀಡುತ್ತದೆ, ಇದರಿಂದ ಅವರು ರಾಜಿ ಮಾಡಿಕೊಳ್ಳಬಹುದು. ಇದು ಸಂಭವಿಸದಿದ್ದರೆ, ಅಥವಾ ಈಗಾಗಲೇ ದೀರ್ಘಕಾಲದವರೆಗೆ ಬೇರೆ ಬೇರೆಯಾಗಿದ್ದರೆ, ಡಿವೋರ್ಸ್ ನೀಡಲು ಒಪ್ಪಿಗೆ ನೀಡುತ್ತೆ. ಈ ಪ್ರಕ್ರಿಯೆ ತುಂಬಾ ನಿಧಾನಗತಿಯಲ್ಲಿ ಸಾಗುತ್ತದೆ. ಆದರೆ ನೋ ಫಾಲ್ಟ್ ಡಿವೋರ್ಸ್ ಮೂರು ತಿಂಗಳಲ್ಲಿ ಇತ್ಯರ್ಥವಾಗುತ್ತೆ. 

Latest Videos

click me!