ನೀವು ಈ ರೀತಿ ಇದ್ರೆ, ಜನ ನಿಮಗೆ ಫಿದಾ ಆಗ್ಬಿಡ್ತಾರೆ! ಬೇರೆಯವರನ್ನು ಆಕರ್ಷಿಸೋದೊಂದು ಕಲೆ!

First Published | Dec 21, 2023, 5:39 PM IST

ಮೊದಲನೆಯದಾಗಿ, ಜನರು ದೈಹಿಕ ಸೌಂದರ್ಯವನ್ನು ನೋಡುತ್ತಾರೆ, ಆದರೆ ಈ ಕಾರಣದಿಂದಾಗಿ, ಒಬ್ಬರು ಯಾರೊಂದಿಗೂ ದೀರ್ಘಕಾಲ ಇರಲು ಸಾಧ್ಯವಿಲ್ಲ. ನೀವು ಆಂತರಿಕ ಆಕರ್ಷಣೆಯನ್ನು ಹೊಂದಿರುವಾಗ, ಜನರು ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಮತ್ತು ನಿಮ್ಮನ್ನು ಹೊಗಳಲು ಬಯಸುತ್ತಾರೆ ಎಂಬುದನ್ನು ನೆನಪಿನಲ್ಲಿಡಿ.
 

ಕ್ರ್ಯಾಶ್ ಡಯಟ್ (crash diet) ಮತ್ತು ಸಿಕ್ಸ್ ಪ್ಯಾಕ್ ವ್ಯಾಯಾಮಗಳನ್ನು ಮರೆತು ಬಿಡಿ, ಏಕೆಂದರೆ ನಿಮ್ಮ ವ್ಯಕ್ತಿತ್ವದಿಂದಾಗಿ ಜನರು ನಿಮ್ಮತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ವ್ಯಕ್ತಿತ್ವ ಹೆಚ್ಚು ಆಕರ್ಷಕವಾಗಿದ್ದರೆ, ಹೆಚ್ಚು ಜನರು ನಿಮ್ಮ ಸುತ್ತಲೂ ಇರಬೇಕೆಂದು ಬಯಸುತ್ತಾರೆ. ಅಂತಹ ವ್ಯಕ್ತಿತ್ವವು ಹೆಚ್ಚಾಗಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುವ ಸಣ್ಣ ವಿಷಯಗಳಿಂದ ಮಾಡಲ್ಪಟ್ಟಿದೆ. ನೀವು ಸಹ ತುಂಬಾ ಆಕರ್ಷಕವಾಗಲು ಬಯಸಿದರೆ, ತಕ್ಷಣ ಇಲ್ಲಿ ಉಲ್ಲೇಖಿಸಲಾದ ಸಲಹೆಗಳನ್ನು ಅನುಸರಿಸಲು ಪ್ರಾರಂಭಿಸಿ.

ಮುಕ್ತವಾಗಿ ನಗಿ 
ನಿಮ್ಮ ನಗು (laugh with your heart) ಇತರರನ್ನು ನಿಮ್ಮತ್ತ ಆಕರ್ಷಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ನಿಮ್ಮ ತುಟಿಯಂಚಲ್ಲಿ ಮೂಡುವ ನಗು ಮಾತ್ರವಲ್ಲ, ಕಣ್ಣುಗಳ ಹೊಳಪನ್ನು ಸಹ ಒಳಗೊಂಡಿರುತ್ತದೆ. ಅದು ನಿಮ್ಮನ್ನು ನೋಡುವವರು ನಿಮ್ಮತ್ತ ಆಕರ್ಷಿತವಾಗುವಂತೆ ಮಾಡುತ್ತದೆ. 

Tap to resize

ನಿಜವಾದ ನಗು ಸಾಂಕ್ರಮಿಕದಂತೆ ಕೆಲಸ ಮಾಡುತ್ತೆ, ಅಂದರೆ ಅದು, ಸಂತೋಷವನ್ನು ಹರಡುತ್ತದೆ ಮತ್ತು ಬೇಗ ಬೆರೆಯಲು ಸಹಾಯ ಮಾಡುತ್ತೆ. ನಗುವಾಗ ನಿಮ್ಮ ಮುಂದೆ ಇದ್ದವರ ಬಗ್ಗೆ ಗೌರವ ಇರಲಿ ಹಾಗೂ ಐ ಕಾಂಟಾಕ್ಟ್  (eye contact) ಸಹ ಇರಲಿ, ಇದರಿಂದ ನಿಮ್ಮ ವ್ಯಕ್ತಿತ್ವ ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತೆ. 
 

ಹೃದಯ ಏನು ಹೇಳುತ್ತೆ ಅದನ್ನೇ ಮಾಡಿ (hear your heart)
ಸಾಮಾನ್ಯವಾಗಿ, ಜನರು ತಮ್ಮ ಹೃದಯದ ಮಾತನ್ನು ಕೇಳಲು ಹಿಂಜರಿಯುತ್ತಾರೆ. ಆದರೆ ವಾಸ್ತವದಲ್ಲಿ, ಹೃದಯದ ಮಾತು ಕೇಳಿ ಕೆಲಸ ಮಾಡುವವರು ಮಾತ್ರ ಗುಂಪಲ್ಲಿ ಮತ್ತೊಬ್ಬರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಂತಹ ಜನರು ತುಂಬಾ ಆಕರ್ಷಕವಾಗಿರುತ್ತಾರೆ, ಜನರು ಬಯಸದಿದ್ದರೂ ಸಹ ಆ ವ್ಯಕ್ತಿಯ ಕಡೆ ವಾಲುತ್ತಾರೆ. 

ಹೃದಯದಲ್ಲಿ ಸಹಾನುಭೂತಿ ಇರಲಿ
ದಯೆಯ ಪ್ರಜ್ಞೆಯನ್ನು ಹೊಂದಿರುವುದು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಸುಂದರಗೊಳಿಸುತ್ತದೆ. ಪ್ರತಿಯೊಬ್ಬರೂ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಜನರನ್ನು ಪ್ರೀತಿಸುತ್ತಾರೆ. ಏಕೆಂದರೆ ಇಂದಿನ ಕಾಲದಲ್ಲಿ, ಅಂತಹ ಜನರ ಸಂಖ್ಯೆ ತುಂಬಾ ಕಡಿಮೆ.

ಹೊಸ ವಿಷಯ ಕಲಿಯಿರಿ (learn new things)
ನಿಮ್ಮೊಳಗಿನ ಕುತೂಹಲವು ನಿಮ್ಮನ್ನು ಶ್ರೇಷ್ಠ ಮತ್ತು ಆಕರ್ಷಕ ಮನುಷ್ಯನನ್ನಾಗಿ ಮಾಡಬಹುದು. ಆದ್ದರಿಂದ ಹೊಸ ವಿಷಯಗಳನ್ನು ಕಲಿಯಿರಿ, ಎಲ್ಲವನ್ನು ಅನುಭವಿಸಿ. ಹೀಗೆ ಮಾಡೋದರಿಂದ ನಿಮ್ಮ ಸುತ್ತಲು ಇರುವ ಜನರ ಜೊತೆ ಹಂಚಿಕೊಳ್ಳಲು ಸಾಕಷ್ಟು ವಿಷಯಗಳು ನಿಮ್ಮ ಬಳಿ ಇರುತ್ತೆ. 

ಮನಸ್ಸು ಬಿಚ್ಚಿ ಮಾತನಾಡಿ
ನಿಮ್ಮ ವ್ಯಕ್ತಿತ್ವದತ್ತ ಎಲ್ಲರೂ ಆಕರ್ಷಿತರಾಗಬೇಕು ಎಂದಾದರೆ ನೀವು ಮನಸ್ಸು ಬಿಚ್ಚಿ ಮಾತನಾಡಿ, ಜನರಿಗೆ ಸಹಾಯ ಮಾಡಿ. ಹೊಸ ಹೊಸ ಜನರನ್ನು ಸ್ನೇಹಿತರನ್ನಾಗಿ ಮಾಡಿ. ಇದರಿಂದ ಖಂಡಿತವಾಗಿಯೂ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. 

Latest Videos

click me!