ಅವಿವಾಹಿತೆಯಾಗಿ ಮಕ್ಕಳಿಗೆ ತಾಯಿಯಾದ ನಂತರದ ತೊಳಲಾಟದ ಬಗ್ಗೆ ಹೇಳಿಕೊಂಡ ನಟಿ

First Published | Dec 22, 2023, 1:11 PM IST

ಸುಶ್ಮಿತಾ ಸೇನ್ ಬಾಲಿವುಡ್‌ನ ತುಂಬಾ ಚೆಂದದ ನಟಿಯರಲ್ಲಿ ಒಬ್ಬರು. 1994ರಲ್ಲಿ ವಿಶ್ವ ಸುಂದರಿ ಕಿರೀಟ ಅಲಂಕರಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದವರು. ಇದರ ಜೊತೆಗೆ ತಮ್ಮ 21ರ ಹರೆಯದಲ್ಲಿ ಮಗುವೊಂದನ್ನು ದತ್ತು ಪಡೆಯಲು ಮುಂದಾಗಿ ಇಡೀ ಸಿನಿಮಾ ರಂಗವನ್ನೇ ಅಚ್ಚರಿಗೆ ದೂಡಿದವರು

ಸುಶ್ಮಿತಾ ಸೇನ್ ಬಾಲಿವುಡ್‌ನ ತುಂಬಾ ಚೆಂದದ ನಟಿಯರಲ್ಲಿ ಒಬ್ಬರು. 1994ರಲ್ಲಿ ವಿಶ್ವ ಸುಂದರಿ ಕಿರೀಟ ಅಲಂಕರಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದವರು. ಇದರ ಜೊತೆಗೆ ತಮ್ಮ 21ರ ಹರೆಯದಲ್ಲಿ ಮಗುವೊಂದನ್ನು ದತ್ತು ಪಡೆಯಲು ಮುಂದಾಗಿ ಇಡೀ ಸಿನಿಮಾ ರಂಗವನ್ನೇ ಅಚ್ಚರಿಗೆ ದೂಡಿದವರು.


24 ಹರೆಯದಲ್ಲಿ ಮೊದಲ ಮಗುವನ್ನು ದತ್ತು ಪಡೆದು ಕೋಟ್ಯಾಂತರ ಜನ ಅಭಿಮಾನಿಗಳ  ಹೃದಯದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿದವರು . ಮಕ್ಕಳ ದತ್ತು ಪಡೆಯುವ ಮೂಲಕ ಅವಿವಾಹಿತರಾಗಿಯೇ ತಾಯಿಯಾಗುವ ತಮ್ಮ ನಿರ್ಧಾರದಿಂದಾಗಿ ಭಾರತದ ಕಾನೂನನ್ನು ಎದುರು ಹಾಕಿಕೊಂಡು ಜಯಿಸಿದವರು. 

Tap to resize

ನಂತರ ಎದುರಾದ ಎಲ್ಲಾ ಅಡ್ಡಿ ಆತಂಕಗಳನ್ನು ಸಲೀಸಾಗಿ ನಿಭಾಯಿಸಿದವರು. ಇಂತಹ ದಿಟ್ಟ ಮಹಿಳೆ ಸುಶ್ಮಿತಾ ಸೇನ್‌ ಈಗ ಮಕ್ಕಳಿಗಾಗಿ ಏರ್‌ಪೋರ್ಟ್‌ ಸಿಬ್ಬಂದಿಯೊಂದಿಗೆ ಕಿತ್ತಾಡಿದ ಘಟನೆಯೊಂದನ್ನು ಈಗ ನೆನಪಿಸಿಕೊಂಡಿದ್ದಾರೆ.  ತನ್ನ ದತ್ತು ಮಕ್ಕಳಿಗೆ ಪಾಸ್‌ಪೋರ್ಟ್‌ ಮಾಡಿಸಿಕೊಳ್ಳುವ ವೇಳೆ  ಎದುರಾದ ಸಂಕಷ್ಟವನ್ನು ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಹೇಳಿಕೊಂಡಿದ್ದಾರೆ.

ಪಾಸ್ಪೋರ್ಟ್ ತಯಾರಿ ವೇಳೆ ಇಬ್ಬರು ಪೋಷಕರ ಹೆಸರು ಕಡ್ಡಾಯ. ಆದರೆ ದತ್ತು ಪಡೆದ ಮಕ್ಕಳಿಗೆ ಅಪ್ಪನನ್ನು ಹುಡುಕುವುದೆಲ್ಲಿಂದ? ಭಾರತದಲ್ಲಿ ಅಪ್ಪನ ಹೆಸರಿಲ್ಲದೇ ಯಾವುದೇ ಕಾನೂನಾತ್ಮಕ ವೈಯಕ್ತಿಕ ದಾಖಲೆಗಳನ್ನು ಸಿದ್ಧಪಡಿಸಲಾಗದು. ಅದರಲ್ಲೂ ಪಾಸ್‌ಪೋರ್ಟ್‌ಗಂತೂ ಅಪ್ಪನ ಹೆಸರು ಬೇಕೆ ಬೇಕು. ಹೀಗಾಗಿ ಮಕ್ಕಳಿಗೆ ಪಾಸ್‌ಪೋರ್ಟ್ ಮಾಡುವುದಕ್ಕೆ ನಾನು ಬಹಳ ಕಷ್ಟಪಟ್ಟೆ ಎಂಬುದನ್ನು ಸುಶ್ಮಿತಾ ನೆನಪು ಮಾಡಿಕೊಂಡಿದ್ದಾರೆ. 

ಬರೀ ಪಾಸ್‌ಪೋರ್ಟ್‌ ಮಾಡುವುದಕ್ಕಷ್ಟೇ ಈ ನಟಿಗೆ ಕಷ್ಟವಾಗಿಲ್ಲ, ಪ್ರತಿಸಲವೂ ಏರ್‌ಪೋರ್ಟ್‌ಗೆ ಮಕ್ಕಳನ್ನು ಕರೆದೊಯ್ದಗಲೆಲ್ಲಾ ಅವರು ಅಪ್ಪನ ಹೆಸರು ಕೇಳುತ್ತಾರೆ. ನಾನು ಅಮ್ಮ ಮಾತ್ರ ಇರುವೆ ಎಂದು ಹೇಳುತ್ತೇನೆ. ಅವರು ಇದೆಲ್ಲಾ ಇಲ್ಲಿ ನಡೆಯುವುದಿಲ್ಲ ಎಂದು ಹೇಳುತ್ತಾರೆ ಎಂದು ಸುಶ್ಮಿತಾ ಸೇನ್ ಹೇಳಿಕೊಂಡಿದ್ದಾರೆ. 
 

Sushmita Sen

ಇದಾದ ನಂತರ ಸುಶ್ಮಿತಾ ಸೇನ್ ಮತ್ತೆ ಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ನ್ಯಾಯಾಧೀಶರು ಸುಶ್ಮಿತಾ ಪರವಾಗಿ ಪತ್ರವೊಂದನ್ನು ನೀಡಿದ್ದರು.  ಅಪ್ಪನ ಸ್ಥಾನ ಇರುವ ಜಾಗದಲ್ಲಿ ಅಮ್ಮನ ಹೆಸರನ್ನು ಹಾಕದೇ ಹೋದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ಪತ್ರ ಅದಾಗಿತ್ತು. ಕೋರ್ಟ್‌ನ ಈ ಪತ್ರದಿಂದ ನಾನೆಷ್ಟು ಖುಷಿ ಪಟ್ಟೆ ಎಂಬುದನ್ನು ವಿವರಿಸಲಾಗದು ಎಂದು ಹೇಳಿಕೊಂಡಿದ್ದಾರೆ ಸುಶ್ಮಿತಾ ಸೇನ್. 

2000ನೇ ಇಸವಿಯಲ್ಲಿ ಓರ್ವ ಅವಿವಾಹಿತ ಹೆಣ್ಣಾಗಿ ಮಗುವೊಂದನ್ನು ದತ್ತು ಪಡೆಯುವುದಕ್ಕಾಗಿ ಸುಶ್ಮಿತಾ ಸೇನ್ ನ್ಯಾಯಾಂಗ ಹೋರಾಟ ನಡೆಸಿದ್ದರು. 2000ನೇ ಇಸವಿಗೂ ಮೊದಲು ತಮ್ಮ 24ರ ಹರೆಯದಲ್ಲಿ ಹೆಣ್ಣು ಮಗುವೊಂದನ್ನು ದತ್ತು ಪಡೆಯಲು ಸುಶ್ಮಿತಾ ಸೇನ್ ಮುಂದಾಗಿದ್ದರು. 

ಆದರೆ ಆ ವೇಳೆ ಈ ಮಹತ್ವದ ಕಾರ್ಯಕ್ಕೆ ಅಡ್ಡಿಯಾಗಿದ್ದು, ಆಕೆ ಇನ್ನು ಮದುವೆಯಾಗದೇ ಇರುವುದು, ಯೌವ್ವನ ಜೊತೆಗಿರುವುದು ಹಾಗೂ ಆಕೆ ದೈಹಿಕವಾಗಿ ಮಕ್ಕಳನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು. ಈ ವಿಚಾರವಾಗಿ ಟ್ವಿಂಕಲ್ ಖನ್ನಾ ಜೊತೆಗೆ ನಡೆಸಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ  ಸುಶ್ಮಿತಾ ಸೇನ್ ತನ್ನ ತಂದೆ ಆ ಸಂದರ್ಭದಲ್ಲಿ ತನಗೆ ಹೇಗೆ ಬೆನ್ನೆಲುಬಾಗಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. 

sushmita sen

ನ್ಯಾಯಾಲಯದಲ್ಲಿ ನ್ಯಾಯಾಧೀಶರು ಸುಶ್ಮಿತಾ ಅವರ ತಂದೆ ಸುಬೀರ್ ಸೇನ್ ಅವರಿಗೆ, " ಒಂದು ವೇಳೆ ನೀವು ನಿಮ್ಮ ಮಗಳು ಮಗುವನ್ನು ದತ್ತು ಪಡೆದ ನಂತರ ನಿಮ್ಮ ಮಗಳ ಮದುವೆಯ ಬಗ್ಗೆ ಚಿಂತೆಗೀಡಾದರೆ ಹೇಗಿರುತ್ತದೆ" ಎಂದು ಕೇಳಿದ್ದಲ್ಲದೇ ಮತ್ತು 'ನಿಮ್ಮ ಮಗಳ ಈ ನಿರ್ಧಾರ ನಿಮಗೆ ಒಪ್ಪಿಗೆಯೇ ಎಂದು ಕೇಳಿದ್ದರು. 

ಈ ವೇಳೆ ಪ್ರತಿಕ್ರಿಯಿಸಿದ ಅವರು ತಾನು ತನ್ನ ಮಗಳನ್ನು ಕೇವಲ ಒಬ್ಬರ ಹೆಂಡತಿಯ ಪಾತ್ರವನ್ನು ಮಾತ್ರ ನಿರ್ವಹಿಸುವಂತೆ ಬೆಳೆಸಿಲ್ಲ' ಎಂದು ಪ್ರತಿಕ್ರಿಯಿಸಿದ್ದರಂತೆ.

ಅವಳು ಈ ಮಾತೃತ್ವವನ್ನು ಆರಿಸಿಕೊಂಡಿದ್ದಾಳೆ ಮತ್ತು ಅದನ್ನು ಆಕೆ ಫಾಲೋ ಮಾಡುತ್ತಾಳೆ ಎಂದು ನನಗೆ ಅನಿಸಿದೆ ಎಂದು ಹೇಳಿದರಂತೆ ಸುಶ್ಮಿತಾ ತಂದೆ

Latest Videos

click me!