ಸಂಗಾತಿಯಲ್ಲಿ ಈ ಗುಣಗಳಿದ್ರೆ ಹುಷಾರಾಗಿರಿ… ಇಲ್ಲಾಂದ್ರೆ ಜೀವನ ಸೈಕೋ ಜಯಂತ್ ಮದ್ವೆಯಾದ ಚಿನ್ನುಮರಿಯಂತಾಗುತ್ತೆ!

First Published | Nov 26, 2024, 3:41 PM IST

ಆರಂಭದಲ್ಲಿ ಒಂದೇ ಒಂದು ಸಣ್ಣ ತಪ್ಪು ಇಲ್ಲದ, ಅತಿ ವಿನಯವಂತ ಹುಡುಗ ಎನಿಸಿಕೊಂಡವರು ಜಯಂತ್, ಆದರೆ ಮದುವೆಯಾದ ನಂತ್ರ ಜಾಹ್ನವಿಗೆ ತನ್ನ ಗಂಡ ಸೈಕೋ ಅನ್ನೋದು ಗೊತ್ತಾಗ್ತಿದೆ. ನಿಮ್ಮ ಪಾಡು ಜಾಹ್ನವಿ ಪಾಡು ಆಗಬಾರದು ಎಂದಾದರೆ ನೀವು ಹುಷಾರಾಗಿರಿ. 
 

'ಸೈಕೋಪಾತ್' (psychopath) ಎಂಬ ಪದವನ್ನು ನೀವು ಅನೇಕ ಬಾರಿ ಕೇಳಿರಬಹುದು. ಅಪರಾಧ ಸಂಬಂಧಿತ ಸುದ್ದಿಗಳಲ್ಲಿ ಇದನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತೆ. ಅಷ್ಟೇ ಯಾಕೆ ಲಕ್ಷ್ಮೀ ನಿವಾಸ ಧಾರಾವಾಹಿಯ ಜಯಂತ್ ಕೂಡ ಒಂಥರಾ ಸೈಕೋಪಾತ್.  ಆದರೆ ನೀವು ಎಂದಾದರೂ ನಿಮ್ಮ ವೈಯಕ್ತಿಕ ಜೀವನದಲ್ಲಿ ಅಂತಹ ವ್ಯಕ್ತಿಯನ್ನು ನೋಡಿದ್ದೀರಾ? ಇಲ್ಲ ಎಂದು ನೀವು ಹೇಳಬಹುದು. ಆದರೆ ನಿಮಗೆ ಯಾರಲ್ಲಾದರೂ, ಅದರಲ್ಲೂ ಮುಖ್ಯವಾಗಿ ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ರೆ ನೀವು ಎಚ್ಚೆತ್ತುಕೊಳ್ಳೋದು ತುಂಬಾನೆ ಮುಖ್ಯ. 
 

ಯಾವುದೇ ಸಂಬಂಧದಲ್ಲಿ, ಪ್ರೀತಿ, ನಂಬಿಕೆ ಮತ್ತು ಗೌರವವನ್ನು ಹೊಂದಿರುವುದು ತುಂಬಾನೆ ಮುಖ್ಯ. ನಿಮ್ಮ ಸಂಬಂಧದಲ್ಲಿ ಏನೋ ಸರಿಯಾಗಿಲ್ಲ ಎಂದು ನೀವು ಭಾವಿಸಿದರೆ, ಆದರೆ ಇಲ್ಲ ಎಲ್ಲಾ ಸರಿ ಇದೆ, ನನಗೆ ಹಾಗೆ ಅನಿಸುತ್ತೆ ಎಂದು ನೀವು ನಂಬಿಕೊಂಡಿದ್ದರೆ, ಅದು ನಿಮ್ಮ ನಂಬಿಕೆಯ ವಿಚಾರವಾಗಿದೆ. ಒಂದು ವೇಳೆ ನಿಮ್ಮ ಸಂಗಾತಿಯಲ್ಲಿ ಅಪನಂಬಿಕೆ, ಸ್ವಾರ್ಥ, ಆಕ್ರಮಣಶೀಲತೆ ಮೊದಲಾದ ಗುಣಗಳಿದ್ರೆ, ಎಚ್ಚರವಾಗಿದ್ರೆ, ಅವರೊಂಥರ ಸೈಕೋ ಪಾತ್ ಆಗಿರ್ತಾರೆ. ಅಂದ್ರೆ ಜಯಂತ್ (Lakhsmi Nivasa Jayanth) ನಂತೆ ಚಿನ್ನುಮರಿ ನನಗಷ್ಟೇ ಬೇಕು, ಆಕೆಯ ಪ್ರೀತಿ ನನಗಷ್ಟೇ ಸೀಮಿತ, ಆಕೆ ನನ್ನ ಜೊತೆ ಮಾತನಾಡಬೇಕು ಎಂದು ಅಂದುಕೊಳ್ಳುವ ಗುಣವೇ, ಅದರ ಜೊತೆಗೆ ಆಕ್ರಮಣಕಾರಿ ಮನೋಭಾವ ಹೊಂದಿರುವುದೇ ಸೈಕೋಪಾತ್.
 

Tap to resize

ಅದೇ ರೀತಿ, ನಿಮ್ಮ ಸಂಗಾತಿಯು ಮಾನಸಿಕವಾಗಿ ಸ್ಥಿಮಿತ ಇಲ್ಲದೇ ಇರುವಂತೆ ಮಾಡುತ್ತಿದ್ದಾರೆಯೇ ಎಂದು ನೀವು ತಿಳಿದುಕೊಳ್ಳಬೇಕು. ಇದನ್ನು ಅರ್ಥಮಾಡಿಕೊಳ್ಳಲು, ನೀವು ಮೊದಲು ಮನೋರೋಗಿಯ ಬಗ್ಗೆ ತಿಳಿದುಕೊಳ್ಳಬೇಕು, ಅವರ ಅಭ್ಯಾಸಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ನೀವು ನಿಮ್ಮ ಸಂಗಾತಿಯ ಬಗ್ಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಪರಾಧ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧ ಪದ ಸೈಕೋಪಾತ್, ಈ ಪದವು ಸಂಬಂಧದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ಆದ್ದರಿಂದ, ಈಗಲೇ ನಿಮ್ಮ ಸಂಗಾತಿಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಶುರು ಮಾಡಿ. 
 

ನೋವು ಮಾಡ್ತಾರೆ, ಆದರೆ ಪಶ್ಚಾತ್ತಾಪ ಪಡೋದಿಲ್ಲ 
ಮನೋರೋಗಿಗಳು ಯಾರನ್ನಾದರೂ ನೋಯಿಸಬಹುದು, ಆದರೆ ಅವರು ತಮ್ಮ ಕೃತ್ಯಗಳಿಗೆ ಎಂದಿಗೂ ಪಶ್ಚಾತ್ತಾಪ ಪಡೋದಿಲ್ಲ. ಆರ್ಥಿಕವಾಗಿ ನಷ್ಟ ಮಾಡೋದು, ದೈಹಿಕವಾಗಿ ನೋಯಿಸೋದು, ಮಾನಸಿಕವಾಗಿ ಹಿಂಸಿಸೋದು ಇದೆಲ್ಲವೂ ಅವರ ಗುಣವಾಗಿರುತ್ತೆ. ಅವರಿಗೆ ಯಾವುದೇ ರೀತಿಯ ಅನುಕಂಪ ಇರೋದಿಲ್ಲ. ಹೀಗಿರೋವಾಗ, ನಿಮ್ಮ ಸಂಗಾತಿಯು ತಾನು ತಪ್ಪು ಮಾಡಿದ್ದೇನೆ ಅನ್ನೋದನ್ನ ತಿಳಿದ ನಂತರವೂ, ಅದಕ್ಕೆ ವಿಷಾಧಿಸದಿದ್ದರೆ ಆತ ಸೈಕೋ ಅನ್ನೋದನ್ನ ತಿಳಿಯಿರಿ.

ಹೃದಯಗಳನ್ನು ಗೆಲ್ಲಲು ನಿಮ್ಮನ್ನ ಕಾಪಿ ಮಾಡ್ತಾರೆ
'ಸೈಕೋಪಾತ್ಸ್ ಅಂಡ್ ಲವ್' ಲೇಖಕಿ ಅಡೆಲೀನ್ ಬರ್ಚ್ ಪ್ರಕಾರ, ಮನೋರೋಗಿಗಳು ಸಂಗಾತಿಯ ಹೃದಯಗಳನ್ನು ಗೆಲ್ಲಲು ಅವರನ್ನ ಅನುಕರಿಸಲು ಪ್ರಾರಂಭಿಸುತ್ತಾರೆ. ಅವರು ನಿಮ್ಮಂತೆಯೇ ಆಗುತ್ತಾರೆ, ನಿಮ್ಮಂತೆಯೇ ಆಯ್ಕೆಗಳನ್ನು ಮಾಡ್ತಾರೆ. ಇದನ್ನು ಮಾಡುವ ಮೂಲಕ, ಅವರು ನಿಮ್ಮ ದೃಷ್ಟಿಯಲ್ಲಿ ಪರ್ಫೆಕ್ಟ್ ವ್ಯಕ್ತಿಯಾಗಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ, ಅವರು ಅಸೂಯೆ, ಅನುಮಾನ ಪಿಶಾಚಿಯೂ ಆಗಿರುತ್ತಾರೆ. ಜೊತೆಗೆ ನಿಮ್ಮನ್ನ ಕಂಟ್ರೋಲ್ ಮಾಡೋದಕ್ಕೆ ಪ್ರಯತ್ನಿಸ್ತಾರೆ. 

ಮನೋರೋಗಿಗಳಿಗೆ ಸ್ನೇಹಿತರೇ ಕಡಿಮೆ
ಮನೋರೋಗಿಗಳು ತಮ್ಮ ಬಗ್ಗೆ ಮತ್ತು ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಯೋಚಿಸುತ್ತಾರೆ, ಆದ್ದರಿಂದ ಅವರು ಬೇರೆ ಯಾರೊಂದಿಗೂ ಹೊಂದಿಕೊಳ್ಳುವುದಿಲ್ಲ, ಅಥವಾ ಅವರಿಗೆ ಹೆಚ್ಚಿನ ಸ್ನೇಹಿತರಿರೋದಿಲ್ಲ. ದೀರ್ಘ ಮತ್ತು ಆರೋಗ್ಯಕರ ಸಂಬಂಧವನ್ನು (healthy relationship) ಕಾಪಾಡಿಕೊಳ್ಳುವುದು ಅವರಿಗೆ ಕಷ್ಟ. ಅವರು ಯಾರೊಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ, ಯಾಕಂದ್ರೆ ಅವರಿಗೆ ಇತರರ ಮೇಲೆ ಅಧಿಕಾರ ಬೇಕು. ಅವರು ತಮ್ಮ ಸ್ವಂತ ಲಾಭಕ್ಕಾಗಿ ತಮ್ಮ ಸಂಗಾತಿಗೆ ಸುಳ್ಳು ಹೇಳುತ್ತಾರೆ ಮತ್ತು ಅವರನ್ನು ನೋಯಿಸುತ್ತಾರೆ.
 

ಇವರನ್ನ ಗುರುತಿಸುವುದು ಸ್ವಲ್ಪ ಕಷ್ಟ.
ಮನೋರೋಗಿಗಳನ್ನು ಗುರುತಿಸುವುದು ಕಷ್ಟ. ವಾಸ್ತವವಾಗಿ, ಈ ಜನರು ಇತರರ ಹೃದಯಗಳನ್ನು ಹೇಗೆ ಗೆಲ್ಲಬೇಕೆಂದು ತಿಳಿದಿದ್ದಾರೆ ಮತ್ತು ಸುಳ್ಳು ಸಹಾನುಭೂತಿಯನ್ನು ತೋರಿಸುವಲ್ಲಿಯೂ ನಿಪುಣರಾಗಿದ್ದಾರೆ. ಅವರ ವಿಶೇಷತೆಯೆಂದರೆ ಮಾತುಗಾರಿಕೆ. ತಮ್ಮ ಮಾತಿನಿಂದಲೇ ಇನ್ನೊಬ್ಬರನ್ನ ಸೆಳೆಯುವ ಗುಣ ಹೊಂದಿರ್ತಾರೆ.  ಇನ್ನೊಬ್ಬ ವ್ಯಕ್ತಿ ಇಷ್ಟಪಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಬುದ್ಧಿವಂತರಾಗಿ ಕಾಣಬಹುದು.  ಆದರೆ ಯಾರಾದ್ರೂ ಅತಿಯಾದ ವಿನಯತೆ, ಅತಿಯಾದ ಒಳ್ಳೆಯತನ ತೋರಿಸಿದ್ರೆ ಅದನ್ನ ನಂಬೋದಕ್ಕೆ ಹೋಗ್ಬೇಡಿ

Latest Videos

click me!