ಬೆಸ್ಟ್ ಫ್ರೆಂಡ್ ಮೇಲೆ ಪ್ರೀತಿ ಹುಟ್ತಿದೆಯಾ? ತಿಳಿದುಕೊಳ್ಳುವುದು ಹೇಗೆ?

First Published | May 18, 2021, 6:17 PM IST

ಪ್ರತಿಯೊಂದೂ ಸಂಬಂಧಕ್ಕೂ ತನ್ನದೇ ಆದ ಘನತೆ ಮತ್ತು ನಿರೀಕ್ಷೆಗಳಿವೆ. ಬೆಸ್ಟ್ ಫ್ರೆಂಡ್‌ನೊಂದಿಗಿನ ಸಂಬಂಧ ತುಂಬಾ ಆಳವಾಗಿರಬಹುದು, ಬೆಸ್ಟ್ ಫ್ರೆಂಡ್ಸ್ ಹುಡುಗ ಮತ್ತು ಹುಡುಗಿಯಾಗಿದ್ದರೆ ಆವಾಗ ಈ ಸಂಬಂಧದಲ್ಲಿ, ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ನಿಮಗೂ ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ಪ್ರೀತಿ ಹುಟ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಈ ಇದನ್ನೊಮ್ಮೆ ಓದಿ.
 

ಶಾರುಕ್ ಖಾನ್ ಹಾಗೂ ಕಾಜೋಲ್ ಅಭಿನಯದ ಚಿತ್ರ 'ಕುಚ್ ಕುಚ್ ಹೋತಾ ಹೈ' ಚಿತ್ರದ ಮೂಲಕ ಪ್ರೀತಿಯ ಎರಡನೇ ಹೆಸರು ಸ್ನೇಹ ಎಂಬುದು ತಿಳಿದೇ ಇರಬೇಕು. ತಮ್ಮ ಬೆಸ್ಟ್ ಫ್ರೆಂಡ್ ಮೇಲೂ ಕೂಡ ಪ್ರೀತಿ ಹುಟ್ಟಿಕೊಳ್ಳಬಹುದು ಎಂಬುದರ ಅರಿವು ಜನರಲ್ಲಿ ಈ ಚಿತ್ರ ಮೂಡಿಸುತ್ತದೆ. ಗೆಳೆತನದ ಸಂಬಂಧ ತುಂಬಾ ವಿಶೇಷವಾಗಿರುತ್ತದೆ ಹಾಗೂ ಪರಸ್ಪರ ಹತ್ತಿರ ಬರಲು ಇದರಲ್ಲಿ ಹೆಚ್ಚು ಸಮಯಾವಕಾಶ ಬೇಕಾಗುವುದಿಲ್ಲ.
undefined
ಗೆಳೆಯನ ಜೊತೆಗೂ ಪ್ರೀತಿಯಾಗಬಹುದುಹಲವು ಪ್ರೀತಿಯಿಂದ ತುಂಬಿದ ಸಂಬಂಧಗಳು ಸ್ನೇಹದ ಮುದ್ರೆಯೋತ್ತಿದ ಕಾರಣ ಅರ್ಧಕ್ಕೇನಿಂತುಹೋಗುತ್ತವೆ. ಸ್ನೇಹ ಸಂಬಂಧದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಇಡಲು ಜನರು ಹಿಂಜರಿಯುತ್ತಾರೆ. ಕಲವರಂತೂ ತಮ್ಮ ಭಾವನೆಗಳನ್ನು ತಿಳಿದುಕೊಳ್ಳುವುದೇ ಇಲ್ಲ. ಇನ್ನುಳಿದವರಲ್ಲಿ ಗೆಳೆತನದಲ್ಲಿ ಬಿರುಕು ಉಂಟಾಗಬಹುದೆಂಬ ಭಯ ಕಾಡುತ್ತದೆ. ಗೆಳೆತನದ ಸಂಬಂಧ ಪ್ರೀತಿಗೆ ತಿರುಗಲು ಹೆಚ್ಚಿನ ಸಮಯಾವಕಾಶ ಬೇಕಾಗುವುದಿಲ್ಲ
undefined

Latest Videos


ಖುಷಿಯಾಗಿರಿಸಲು ಪ್ರಯತ್ನಿಸುವುದುಪ್ರತಿಯೊಂದೂ ಸಂಬಂಧಕ್ಕೂ ಕೆಲವು ಮಿತಿಗಳಿವೆ. ಸ್ನೇಹಕ್ಕೂ ಕೂಡ ತನ್ನದೇ ಆದ ಮಿತಿ ಇದೆ. ಉತ್ತಮ ಸ್ನೇಹಿತನ ಸಂತೋಷಕ್ಕಾಗಿಏನನ್ನೂ ಬೇಕಾದರೂ ಮಾಡಲು ಸಿದ್ಧರಿದ್ದೀರಾ?
undefined
ನಿಮ್ಮ ಸ್ನೇಹಿತನನ್ನು ನೀವು ನೋಯಿಸಬಾರದು ಅಥವಾ ಯಾರು ನೋಯಿಸಬಾರದು ಎಂದು ಬಯಸುವಿರಾ? ಹೌದು ಎಂದಾದರೆ, ಒಂದು ಕ್ಷಣ ಕೈಯನ್ನು ಹೃದಯದ ಮೇಲೆ ಇರಿಸಿ ನಿಮಗೆ ನೀವೇ ಕೇಳಿಕೊಳ್ಳಿ. ಬಹುಶಃ ನೀವು ಅವರನ್ನು ಪ್ರೀತಿಸುತ್ತಿರಬಹುದು.
undefined
ಇತರೆ ಸ್ನೇಹಿತರಿಂದ ಉರಿಯುವುದುನಾವು ಯಾರನ್ನಾದರೂ ಪ್ರೀತಿಸಿದಾಗ, ಆ ವ್ಯಕ್ತಿ ಬೇರೆ ವ್ಯಕ್ತಿಯ ಜೊತೆಗೆ ಮಾತನಾಡುವುದನ್ನು ಇಷ್ಟಪಡುವುದಿಲ್ಲ. ಇದೊಂದು ತರಹದ ಜೆಲಸಿನೆಸ್ ಎಂದೇ ಹೇಳಬಹುದು. ಇದು ಸಾಮಾನ್ಯ ಕೂಡ.
undefined
ಒಂದು ವೇಳೆ ನಿಮಗೂನಿಮ್ಮ ಬೆಸ್ಟ್ ಫ್ರೆಂಡ್ ಇತರರೊಂದಿಗೆ ಮಾತನಾಡುವುದು ಇಷ್ಟವಾಗುತ್ತಿಲ್ಲ ಎಂದೆನೆಸಿದರೆ, ಅದರ ಅರ್ಥವೇನು ಎಂಬುದನ್ನು ಹೃದಯಕ್ಕೆ ಕೇಳಿ. ಏನಾದರೊಂದು ಉತ್ತರ ಬಂದೆ ಬರುತ್ತದೆ.
undefined
ಜೊತೆಗಿಲ್ಲದಿದ್ದರೂ ಕೂಡ ಜೊತೆಗಿರುವ ಭಾವನೆನಾವು ಯಾರೊಂದಿಗಾದರೂ ಹೆಚ್ಚು ಸಮಯ ಕಳೆಯುವಾಗ ಅಥವಾ ಅವನೊಂದಿಗೆ ಬಾಂಧವ್ಯವನ್ನು ಹೊಂದಿರುವಾಗ, ಅವನು ಸುತ್ತಮುತ್ತ ಇಲ್ಲದಿದ್ದಾಗಲೂ ನಾವು ಅವನ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ.
undefined
ಅವರ ಬಗ್ಗೆ ಯೋಚಿಸುವುದರಿಂದ ಹಾಗೂ ಮಾತನಾಡುವುದರಿಂದ ಹೃದಯಕ್ಕೆ ಆನಂದ ಸಿಗುತ್ತದೆ. ಒಂದು ವೇಳೆ ನಿಮ್ಮ ವಿಷಯದಲ್ಲಿಯೂ ಕೂಡ ಇದೆ ನಡೆಯುತ್ತಿದ್ದರೆ, ನಿಮ್ಮ ಪ್ರೀತಿಯ ದೋಣಿಯ ಪಯಣ ಕೂಡ ಆರಂಭಗೊಂಡಿದೆ ಎಂದು ತಿಳಿದುಕೊಳ್ಳಿ.
undefined
ಈ ಎಲ್ಲಾ ಸಂಕೇತಗಳು ನಿಮ್ಮಲ್ಲಿ ನಿಮಗೆ ಕಾಣಿಸುತ್ತಿದ್ದರೆ ಬೆಸ್ಟ್ ಫ್ರೆಂಡ್ ಮುಂದೆ ಪ್ರೀತಿಯನ್ನು ವ್ಯಕ್ತಪಡಿಸಲು ತಡಮಾಡಬೇಡಿ. ಒಂದು ವೇಳೆ ನೀವು ಮಾಡಲು ಹೊರಟಿರುವ ಪ್ರಪೋಸ್‌ನಿಂದ ಗೆಳೆತನದ ಸಂಬಂಧ ಪ್ರಭಾವಿತಗೊಳ್ಳಬಹುದು ಎಂಬ ಭಯ ಕಾಡುತ್ತಿದ್ದರೆ, ಅದನ್ನು ಬಚ್ಚಿಟ್ಟು ಕೂಡ ಯಾವುದೇ ಲಾಭವಾಗುವುದಿಲ್ಲ.
undefined
click me!