ಲವ್ ಮಾಡಿದ್ದೀರಿ. ಪೋಷಕರು ಒಪ್ತಾ ಇಲ್ಲವೆಂದರೆ ಹೀಗ್ ಟ್ರೈ ಮಾಡಿ

First Published | Feb 19, 2024, 4:31 PM IST

ಪ್ರೇಮ ವಿವಾಹಕ್ಕಾಗಿ ಪೋಷಕರನ್ನು ಮನವೊಲಿಸುವುದು ತುಂಬಾ ಕಷ್ಟದ ಕೆಲಸ ಅಲ್ವಾ? ನೀವು ಸಹ ಇಂತಹ ಒಂದು ಸಂಧಿಗ್ಧ ಸ್ಥಿತಿಯಲ್ಲಿದ್ದರೆ, ನಾವಿಲ್ಲಿ ಹೇಳೋ ಈ ಸಲಹೆಯ ಮೂಲಕ ಪ್ರೇಮ ವಿವಾಹಕ್ಕಾಗಿ ಪೋಷಕರನ್ನು ಸುಲಭವಾಗಿ ಒಪ್ಪಿಸಬಹುದು.  
 

ಭಾರತದಲ್ಲಿ ಪ್ರೇಮ ವಿವಾಹ ಅಥವಾ ಲವ್ ಮ್ಯಾರೇಜ್ (love marriage) ಅನ್ನೋದು ಇನ್ನೂ ದೊಡ್ಡ ವಿಷಯವಾಗಿಯೇ ಪರಿಗಣಿಸಲಾಗಿದೆ. ಜನರು ಹೆಚ್ಚಾಗಿ ವಿವಾಹಿತ ದಂಪತಿಗೆ ನೀವು  ಲವ್ ಮ್ಯಾರೇಜ್ ಆಗಿರೋದಾ ಅಥವಾ ಅರೇಂಜ್ ಮ್ಯಾರೇಜ್ ಆಗಿರೋದ ಎಂದು ಕೇಳುತ್ತಾರೆ. ಭಾರತದಲ್ಲಿ, ವಿವಾಹವು ಕೇವಲ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವಲ್ಲ, ಎರಡು ಕುಟುಂಬಗಳ ನಡುವೆ ಎಂದು ನಂಬಲಾಗಿದೆ.ಹ ಹೀಗಿರೋವಾಗ ಕಪಲ್ಸ್  ಪ್ರೇಮ ವಿವಾಹಕ್ಕೆ ತಮ್ಮ ಕುಟುಂಬ ಸದಸ್ಯರ ಮನ ಒಲಿಸಲು ಪ್ರಯತ್ನಿಸಲೇಬೇಕಾಗುತ್ತೆ. ಅದಕ್ಕಾಗಿ ಅವರು ತುಂಬಾ ಶ್ರಮಿಸಬೇಕಾಗುತ್ತದೆ. ಮನೆಯವರು ಮದುವೆಗೆ ಒಪ್ಪುತ್ತಾರೋ? ಇಲ್ಲವೋ ಎನ್ನುವ ಯೋಚನೆ ಕೂಡ ತಲೆಯಲ್ಲಿ ಕಾಡೋದು ಶುರುವಾಗುತ್ತೆ. 
 

ಲವ್ ಮಾಡಿರೋ ಅನೇಕ ಜನರು ತಮ್ಮ ಪ್ರೇಮಿಯನ್ನು ಮದುವೆಯಾಗಲು ಹೆತ್ತವರ ಮನವೊಲಿಸಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಸಹ ಪ್ರೇಮ ವಿವಾಹವನ್ನು ಮಾಡಲು ಬಯಸಿದರೆ ಮತ್ತು ಇದಕ್ಕಾಗಿ ನಿಮ್ಮ ಹೆತ್ತವರ ಒಪ್ಪಿಗೆ ಬಯಸಿದರೆ, ನೀವು ಈ ಸಲಹೆಗಳನ್ನು ಅನುಸರಿಸಬಹುದು. ಇದರಿಂದ ನಿಮ್ಮ ಪೋಷಕರು ಬೇಗ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ. 
 

Tap to resize

ಬೌಂಡರಿ ಬ್ರೇಕ್ ಮಾಡಿ (break the boundry)
ಪ್ರತಿ ಮಗುವು ತನ್ನ ಹೆತ್ತವರನ್ನು ತುಂಬಾ ಪ್ರೀತಿಸುತ್ತಾರೆ, ಆದರೆ ಅನೇಕ ಮನೆಗಳಲ್ಲಿ ಅನೇಕ ರೀತಿಯ ಕಮ್ಯೂನಿಕೇಶನ್ ಬೌಂಡರಿಗಳಿರುತ್ತವೆ. ಈ ಕಾರಣದಿಂದಾಗಿ ಪೋಷಕರು ಮತ್ತು ಮಕ್ಕಳ ನಡುವೆ ದೊಡ್ಡ ಅಂತರ (Communication Gap) ರೂಪುಗೊಳ್ಳುತ್ತದೆ.  ಪ್ರೇಮ ವಿವಾಹಕ್ಕಾಗಿ ನಿಮ್ಮ ಹೆತ್ತವರ ಮನವೊಲಿಸಲು ನೀವು ಬಯಸಿದರೆ, ನೀವು ಈ ಗಡಿಗಳನ್ನು ಮುರಿಯಲೇಬೇಕು ಮತ್ತು ಪೋಷಕಾರ ಜೊತೆ ಉತ್ತಮ ಸ್ನೇಹ (Freindship with Parents) ಹೊಂದಬೇಕು. ನಿಮ್ಮ ಹೆತ್ತವರೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಿರಿ ಮತ್ತು ಸಂಗಾತಿಯ ಆಗಮನದ ನಂತರವೂ ಅವರ ಸಂಬಂಧವು ಒಂದೇ ಆಗಿರುತ್ತದೆ ಎಂದು ಅವರಿಗೆ ಮನವರಿಕೆ ಮಾಡಿ. 
 

ಮದುವೆ ಬಗ್ಗೆ ಮಾತುಕತೆ
ಪೋಷಕರೊಂದಿಗಿನ ಸಂವಹನ ಗಡಿಗಳನ್ನು ಮುರಿದ ನಂತರ, ನಿಮ್ಮ ಮದುವೆಯ (Marriage)ವಿಷ್ಯ ಅಂದ್ರೆ ಪ್ರೇಮದ ವಿಷಯದ ಬಗ್ಗೆ ಪೋಷಕರ ಜೊತೆ ಮಾತನಾಡಿ. ಅವರು ಯಾವ ರೀತಿಯ ಸೊಸೆ ಅಥವಾ ಅಳಿಯ ಬಯಸುತ್ತಾರೆ ಎಂದು ಕಂಡು ಹಿಡಿಯಲು ಪ್ರಯತ್ನಿಸಿ. ಈ ಸಮಯದಲ್ಲಿ, ನೀವು ಯಾವ ರೀತಿಯ ವ್ಯಕ್ತಿಯನ್ನು ಇಷ್ಟಪಡುತ್ತೀರಿ ಎಂದು ಅವರಿಗೆ ಹೇಳೊದನ್ನು ಮರೆಯಬೇಡಿ. ನೀವು ನಿಮ್ಮ ಪದಗಳನ್ನು ಬುದ್ಧಿವಂತಿಕೆಯಿಂದ ಬಳಸುವುದು ಮುಖ್ಯ. 

ಪೋಷಕರಲ್ಲಿ ಒಬ್ಬರ ವಿಶ್ವಾಸ ಗೆಲ್ಲಿರಿ
ಈಗ ಪೋಷಕರ ಜೊತೆ ಮಾತುಕತೆ ಚೆನ್ನಾಗಿಯೇ ಇದೆ ಎಂದು ತಿಳಿದ ಬಳಿಕ, ನಿರ್ಧಾರ ತೆಗೆದುಕೊಳ್ಳಿ ನಿಮ್ಮ ಹೆತ್ತವರಲ್ಲಿ ಯಾರು ನಿಮ್ಮ ಮಾತಿಗೆ ಒಪ್ಪಿಗೆ ಸೂಚಿಸಲು ತಯಾರಿದ್ದಾರೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋದು ಮುಖ್ಯ. ಇಬ್ಬರೂ ನಿಮ್ಮ ಮಾತಿಗೆ ಒಪ್ಪಿಗೆ ಸೂಚಿಸುವವರಾಗಿದ್ದರೆ, ಇದಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ. ಸಾಧ್ಯವಾದರೆ ಒಬ್ಬ ಪೋಷಕರನ್ನು ನಿಮ್ಮ ಪರವಾಗಿ ಇರುವಂತೆ ಮಾಡಿ, ಅವರಿಗೆ ನಿಮ್ಮ ಸಂಗಾತಿಯನ್ನು ಪರಿಚಯಿಸಿ. 

ಬಂಧುಗಳ ಸಹಾಯ ಪಡೆಯಿರಿ
ಈಗ, ಎಲ್ಲಾ ಸಂಬಂಧಿಕರು (Relatives) ಪ್ರೇಮ ವಿವಾಹ ವಿರೋಧಿಸುವುದಿಲ್ಲ.ಪ್ರೇಮ ವಿವಾಹಕ್ಕೆ ಬೆಂಬಲಿಸುವ ಕೆಲವರ ವಿಶ್ವಾಸ ತೆಗೆದುಕೊಳ್ಳೋದು ಮುಖ್ಯ. ವಿಶೇಷವಾಗಿ ನಿಮ್ಮ ಪೋಷಕರು ಗೌರವಿಸುವ, ಅವರಿಗಿಂತ ಹಿರಿಯ ವ್ಯಕ್ತಿಗಳ ಮನ ಒಲಿಸಿ. ಇದು ಅಜ್ಜಿ ಅಥವಾ ದೊಡ್ಡ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಆಗಿರಬಹುದು. ಅದೃಷ್ಟವು ನಿಮ್ಮ ಪರವಾಗಿದ್ದರೆ, ಅವರು ನಿಮ್ಮ ಹೆತ್ತವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರೆ 

ನಿಮ್ಮ ಸಂಗಾತಿಯನ್ನು ಭೇಟಿ ಮಾಡಿಸಿ
ಈಗ ನೀವು ನಿಮ್ಮ ಸಂಗಾತಿಯನ್ನು ಕುಟುಂಬಕ್ಕೆ ಪರಿಚಯಿಸಬೇಕಾದ ಸಂದರ್ಭ ಬರುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗಾತಿಗೆ ಮೊದಲೇ ನೀಡಲು ಮರೆಯಬೇಡಿ. ಆ ರೀತಿ ಮಾಡಿದ್ರೆ, ಎಲ್ಲರ ಜೊತೆ ಯಾವ ರೀತಿ ವರ್ತಿಸಬಹುದು ಅನ್ನೋದು ಸಂಗಾತಿಗೆ ಸುಲಭವಾಗಿ ತಿಳಿಯುತ್ತೆ. ಇದರಿಂದ ನಿಮ್ಮ ಸಂಗಾತಿಯನ್ನು ಮನೆಮಂದಿ ಕೂಡ ಇಷ್ಟಪಡುತ್ತಾರೆ. 

Latest Videos

click me!