ಕಾಮಾಸಕ್ತಿ ಹೆಚ್ಚಿಸಿ, ಲೈಂಗಿಕ ಜೀವನ ಸುಧಾರಿಸೋ ಯೋಗ ಭಂಗಿ!

Published : Apr 03, 2024, 05:59 PM IST

ಯೋಗ ನಿಮ್ಮ ಒಟ್ಟಾರೆ ದೈಹಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದು ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  

PREV
112
ಕಾಮಾಸಕ್ತಿ ಹೆಚ್ಚಿಸಿ, ಲೈಂಗಿಕ ಜೀವನ ಸುಧಾರಿಸೋ ಯೋಗ ಭಂಗಿ!

ಯೋಗದ (Yogasan)ಪ್ರಯೋಜನಗಳು ಅಸಂಖ್ಯಾತ. ಪ್ರಾಚೀನ ಕಾಲದಿಂದಲೂ, ಭಾರತದಲ್ಲಿ ಅದರ ದೈಹಿಕ (Physical Activity), ಮಾನಸಿಕ (Mental Health) ಮತ್ತು ಆಧ್ಯಾತ್ಮಿಕ ಗುಣಲಕ್ಷಣಗಳ (Spiritual Characters) ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಶತಮಾನಗಳಿಂದ ಯೋಗಿಗಳನ್ನು ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಮುಕ್ತಗೊಳಿಸುತ್ತಿದೆ. ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಎಂಬ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಹಾರ್ಮೋನ್ ನಮ್ಮ ದೇಹದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ.
 

212

ನೀವು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೆ, ನಿಮ್ಮ ದೇಹದ ಪ್ರತಿಯೊಂದು ಭಾಗದ ಬಗ್ಗೆ ನೀವು ತಿಳಿದುಕೊಳ್ಳಲು ಪ್ರಾರಂಭಿಸುತ್ತೀರಿ ಎಂಬುದರಲ್ಲಿ ಸಂದೇಹವಿಲ್ಲ. ಯೋಗವು ನಿಮ್ಮ ಲೈಂಗಿಕ ಜೀವನದಲ್ಲಿ ಸಹ ಹೆಚ್ಚಿನ ಆನಂದವನ್ನು ಉಂಟುಮಾಡುವ ಅಂಶವಾಗುತ್ತದೆ ಅನ್ನೋದು ಗೊತ್ತಾ? ಆದರೆ ಲೈಂಗಿಕತೆಯ ಬಗ್ಗೆ ಮಾತನಾಡುವಾಗ, ಎಲ್ಲಾ ಯೋಗ ಭಂಗಿಗಳು ಒಂದೇ ಆಗಿರುವುದಿಲ್ಲ. ಅದಕ್ಕಾಗಿಯೇ ಲೈಂಗಿಕ ಜೀವನವನ್ನು (Sex life) ಉತ್ತಮಗೊಳಿಸುವ 5 ಯೋಗ ಭಂಗಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 
 

312

ಸೇತುಬಂಧ ಸರ್ವಾಂಗಾಸನ 
ಸೇತುಬಂಧ ಸರ್ವಾಂಗಾಸನವು ನಿಮ್ಮ ಪೆಲ್ವಿಕ್ ಸ್ನಾಯುಗಳನ್ನು (pelvic muscles) ಬಲಪಡಿಸುತ್ತದೆ ಇದರಿಂದ ನೀವು ಲೈಂಗಿಕ ಕ್ರಿಯೆ ಸಮಯದಲ್ಲಿ ನೋವು ಮತ್ತು ಆಯಾಸವನ್ನು ಅನುಭವಿಸುವುದಿಲ್ಲ. ಲೈಂಗಿಕ ಕ್ರಿಯೆಯನ್ನು ಸಂಪೂರ್ಣವಾಗಿ ಎಂಜಾಯ್ ಮಾಡಲು ಇದು ಸಹಾಯ ಮಾಡುತ್ತೆ. 

412

ವಿಧಾನ

ನಿಮ್ಮ ಬೆನ್ನಿನ ಮೇಲೆ ಮಲಗಿ.
ಪಾದಗಳು ನೆಲದ ಮೇಲಿರಲಿ, ಮೊಣಕಾಲಿನವರೆಗೂ ಕಾಲುಗಳನ್ನು ಎತ್ತಿ.
ನಿಮ್ಮ ತೋಳುಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಬೆರಳುಗಳನ್ನು ಚಾಚಿ.
ನಿಮ್ಮ ಸೊಂಟವನ್ನು ನೆಲದಿಂದ ಮೇಲಕ್ಕೆತ್ತಿ,  ನಿಮ್ಮ ಭುಜಗಳು ಮತ್ತು ತಲೆಯನ್ನು ನೆಲದ ಮೇಲೆ ಇರಿಸಿ.
ಈ ಭಂಗಿಯಲ್ಲಿ 5 ಸೆಕೆಂಡುಗಳ ಕಾಲ ಇರಿ.
ನಿಧಾನವಾಗಿ ಕೆಳಗಿಳಿಯಿರಿ.

512

ಏಕಪಾದ ರಾಜಕಪೋತಾಸನ
ಈ ಆಸನವು ನಿಮ್ಮ ಸ್ನಾಯುಗಳನ್ನು ತೆರೆಯುತ್ತದೆ ಮತ್ತು ನಿಮ್ಮ ನಮ್ಯತೆಯನ್ನು ಹೆಚ್ಚಿಸುತ್ತದೆ. ನೀವು ಈ ಆಸನವನ್ನು ನಿಯಮಿತವಾಗಿ ಮಾಡಿದರೆ, ನೀವು ಹೊಸ ಲೈಂಗಿಕ ಭಂಗಿಯನ್ನು(sex position) ಟ್ರೈ ಮಾಡುವ ಸಾಮರ್ಥ್ಯ ಪಡೆಯಬಹುದು. ಈ ಆಸನ ನಿಮ್ಮ ಸೊಂಟದ ಸ್ನಾಯುಗಳನ್ನು ತೆರೆಯುತ್ತದೆ ಮತ್ತು ಅವುಗಳನ್ನು ಶಕ್ತಿಯಿಂದ ತುಂಬುತ್ತದೆ.

612

ವಿಧಾ
ನೆಲದ ಮೇಲೆ ಕುಳಿತುಕೊಳ್ಳಬೇಕು
ನಿಮ್ಮ ಬಲಗಾಲನ್ನು ನಿಮ್ಮ ದೇಹದ ಮುಂದೆ ತನ್ನಿ ಇದರಿಂದ ನಿಮ್ಮ ಕೆಳಗಿನ ಕಾಲು ನಿಮ್ಮ ದೇಹಕ್ಕೆ 90 ಡಿಗ್ರಿ ಕೋನದಲ್ಲಿರುತ್ತದೆ.
ನಿಮ್ಮ ಎಡ ಪಾದವನ್ನು ಹಿಂದಕ್ಕೆ ಇರಿಸಿ, ನಿಮ್ಮ ಅಂಗಾಲುಗಳನ್ನು ಹಿಂದಕ್ಕೆ ಮತ್ತು ಕಾಲ್ಬೆರಳುಗಳನ್ನು ಹಿಂದಕ್ಕೆ ಇರಿಸಿ.
ಉಸಿರನ್ನು ಹೊರಹಾಕಿ ಮತ್ತು ಮುಂದೆ ಸಾಗಿ, ನಿಮ್ಮ ದೇಹದ ತೂಕವನ್ನು (body weight) ಬದಲಾಯಿಸಿ. ನಿಮ್ಮ ತೋಳುಗಳಿಂದ ನಿಮ್ಮ ತೂಕವನ್ನು ಬೆಂಬಲಿಸಿ. ಇದು ಅಹಿತಕರವಾಗಿದ್ದರೆ, ನಿಮ್ಮ ಸೊಂಟದ ಮಟ್ಟವನ್ನು ಕಾಪಾಡಿಕೊಳ್ಳಲು ಕಂಬಳಿ ಅಥವಾ ದಿಂಬನ್ನು ನಿಮ್ಮ ಬಲ ಸೊಂಟದ ಕೆಳಗೆ ಇರಿಸುವ ಮೂಲಕ ಮಡಚಲು ಪ್ರಯತ್ನಿಸಿ.
ಎರಡು ಬದಿಗಳಲ್ಲಿ ಈ ಆಸನ ಟ್ರೈ ಮಾಡಬೇಕು. 
 

712

ನೌಕಾಸನ
ಇದು ಮತ್ತೊಂದು ಪೆಲ್ವಿಕ್ ಸ್ನಾಯು ಬಲದ ಆಸನ. ಇದು ಆರಂಭಿಕ ಯೋಗ ಮಾಡೋರಿಗೆ ಉತ್ತಮ ಮತ್ತು ಆರಂಭದಲ್ಲಿ ತ್ರಾಣವನ್ನು ಸೃಷ್ಟಿಸುವಲ್ಲಿ ಇದು ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಲೈಂಗಿಕತೆಯ ಸಮಯದಲ್ಲಿ ಈ ಆಸನದಿಂದ ಹೆಚ್ಚಿನ ಲಾಭ ಇದೆ. 

812

ನೆಲದ ಮೇಲೆ ಕುಳಿತುಕೊಳ್ಳಿ
ನಿಮ್ಮ ಮೊಣಕಾಲುಗಳನ್ನು ಮೇಲಕ್ಕೆತ್ತಿ ಮತ್ತು ಹಿಮ್ಮಡಿಗಳನ್ನು ಸೊಂಟದಿಂದ 1.5 ರಿಂದ 2 ಅಡಿ ದೂರದಲ್ಲಿ ಸಮತಟ್ಟಾಗಿ ಇರಿಸಿ.
ನಿಮ್ಮ ಮೊಣಕಾಲುಗಳನ್ನು ನಿಮ್ಮ ಕೈಗಳಿಂದ ಲಘುವಾಗಿ ಹಿಡಿದುಕೊಳ್ಳಿ, ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳಿ ಮತ್ತು ಸ್ವಲ್ಪ ಹಿಂದಕ್ಕೆ ಬಾಗಿ.
ನಿಮ್ಮ ಮುಂಡವನ್ನು ಮೇಲಕ್ಕೆತ್ತಿ ಮತ್ತು ನಿಮ್ಮ ಸೊಂಟ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಪರಸ್ಪರ ಸಂಕುಚಿತಗೊಳಿಸಿ ಇದರಿಂದ ಮುಖ್ಯ ಸ್ನಾಯುಗಳು ಸಹ ವ್ಯಾಯಾಮ ಮಾಡುತ್ತವೆ.
 

912

ಧನುರಾಸನ  
ನೀವು ದೈಹಿಕ ಸಮತೋಲನವನ್ನು (body balance) ಸಾಧಿಸಲು ಬಯಸಿದರೆ ಈ ಭಂಗಿ ಅದ್ಭುತವಾಗಿದೆ. ಅಷ್ಟೇ ಅಲ್ಲ, ಇದು ಸೊಂಟದ ಚಲನಶೀಲತೆಯನ್ನು ಹೆಚ್ಚಿಸುತ್ತದೆ, ಮುಂಡ ಮತ್ತು ಭುಜದ ಸ್ನಾಯುಗಳನ್ನು ತೆರೆಯುತ್ತದೆ ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ನಿಮ್ಮ ಹೃದಯವನ್ನು ಬಲಪಡಿಸಲು ನೀವು ವ್ಯಾಯಾಮವನ್ನು ಹುಡುಕುತ್ತಿದ್ದರೆ, ಖಂಡಿತವಾಗಿಯೂ ಇದನ್ನು ಒಮ್ಮೆ ಪ್ರಯತ್ನಿಸಿ.

1012
yoga asanas

ನೆಲದ ಮೇಲೆ ಮಲಗಿಕೊಳ್ಳಬೇಕು. 
ಹೊಟ್ಟೆಯಿಂದ ಕೆಳಗಿನ ಭಾಗವನ್ನು ನಿಧಾನವಾಗಿ ಮೇಲಕ್ಕೆತ್ತಬೇಕು, ಕಾಲುಗಳನ್ನು ಬಾಗಿಸಬೇಕು. 
ಕೈಗಳನ್ನು ಭುಜದಿಂದ ನೇರವಾಗಿ ಹಿಂದಕ್ಕೆ ತಂದು ಕಾಲುಗಳನ್ನು ಹಿಡಿದುಕೊಳ್ಳಬೇಕು. 
ಧನುಷ್ ನ ಆಕಾರದಲ್ಲಿ ಸ್ವಲ್ಪ ಸಮಯ ಹಾಗೆಯೇ ಉಳಿಯಬೇಕು. 

1112

ಶವಾಸನ
ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಲೈಂಗಿಕ ಜೀವನವನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ, ಆದ್ದರಿಂದ ಸೆಶನ್ ನ ಕೊನೆಯಲ್ಲಿ ಈ ಸಹಜ ಯೋಗ ಭಂಗಿಯು (Shavasana) ಧ್ಯಾನ, ವಿಶ್ರಾಂತಿ ಮತ್ತು ನಮ್ಮ ದೇಹದಲ್ಲಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1212

ನಿಮ್ಮ ಕಾಲುಗಳನ್ನು ವಿಸ್ತರಿಸಿ ಮತ್ತು ಅಂಗೈಗಳನ್ನು ಮುಂದಕ್ಕೆ ಮುಖ ಮಾಡಿ ನಿಮ್ಮ ಬೆನ್ನಿನ ಮೇಲೆ ಮಲಗಿ.
ನಿಮ್ಮ ಉಸಿರಾಟದ ಬಗ್ಗೆ ಗಮನ ಕೊಡಿ.
ನಿಮ್ಮ ಮುಖದಿಂದ ಬೆರಳುಗಳು ಮತ್ತು ಕಾಲ್ಬೆರಳುಗಳವರೆಗೆ ನಿಮ್ಮ ದೇಹದ ಪ್ರತಿಯೊಂದು ಭಾಗವನ್ನು ವಿಶ್ರಾಂತಿಗೊಳಿಸಿ.
ಈ ಭಂಗಿಯನ್ನು ನಿಮಗೆ ಬೇಕಾದಷ್ಟು ಕಾಲ ವಿಶ್ರಾಂತಿ ಪಡೆಯಬಹುದು.

Read more Photos on
click me!

Recommended Stories