ಇಷ್ಟಪಡೋರ ವ್ಯಕ್ತಿತ್ವದ ಬಗ್ಗೆ ತಿಳಿಬೇಕಾ? ಹಾಗಿದ್ರೆ ಅವರಿಷ್ಟದ ಕಲರ್ ಯಾವ್ದು ಕೇಳಿ…

Published : Jul 22, 2023, 05:51 PM IST

ಪ್ರತಿಯೊಂದು ಬಣ್ಣವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಈ ಬಣ್ಣಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತವೆ. ಜೀವನದಲ್ಲಿ ನೀವು ಮಾಡುವ ಎಲ್ಲಾ ವಿಷಯಗಳು ಬಣ್ಣದೊಂದಿಗೆ ಸಂಬಂಧ ಹೊಂದಿದೆ.  

PREV
111
ಇಷ್ಟಪಡೋರ ವ್ಯಕ್ತಿತ್ವದ ಬಗ್ಗೆ ತಿಳಿಬೇಕಾ? ಹಾಗಿದ್ರೆ ಅವರಿಷ್ಟದ ಕಲರ್ ಯಾವ್ದು ಕೇಳಿ…

ನಿಯಾನ್, ನೀಲಿ, ಕೆಂಪು ಇತ್ಯಾದಿ ವಿವಿಧ ಬಣ್ಣಗಳಿಗೆ ನಾವೆಲ್ಲರೂ ಆಕರ್ಷಿತರಾಗುತ್ತೇವೆ. ಆದರೆ ನಿಮ್ಮ ನೆಚ್ಚಿನ ಬಣ್ಣವು ನಿಮ್ಮ ವ್ಯಕ್ತಿತ್ವ ಸ್ವಲ್ಪ ಮಟ್ಟಿಗೆ ನಿರ್ಧರಿಸುತ್ತದೆ ನಿಮ್ಮ ಸ್ನೇಹಿತ ಅಥವಾ ಇನ್ನಿತರ ಯಾವುದೇ ವ್ಯಕ್ತಿಯ ನೆಚ್ಚಿನ ಬಣ್ಣ ಯಾವುದು ಎಂದು ಕಂಡು ಹಿಡಿಯೋ ಮೂಲಕ, ಅವರ ವ್ಯಕ್ತಿತ್ವದ ಬಗ್ಗೆ ತಿಳಿಯಿರಿ. 

211

ನೇರಳೆ ಬಣ್ಣ (purple)
ನೇರಳೆ ಬಣ್ಣಕ್ಕೆ ಆಕರ್ಷಿತರಾಗಿದ್ದರೆ, ಜೀವನದಲ್ಲಿ ಭಾವನಾತ್ಮಕ ಭದ್ರತೆಯನ್ನು ಬಯಸುವ ವ್ಯಕ್ತಿ. ನೀವು ಸ್ವಲ್ಪ ಮಟ್ಟಿಗೆ ಉತ್ತಮ ವ್ಯಕ್ತಿ ಮತ್ತು ಪರಿಪೂರ್ಣತಾವಾದಿ. ಜೊತೆಗೆ ಅದ್ಭುತ ಅಂತಃಪ್ರಜ್ಞೆ ಹೊಂದಿರುವ ವ್ಯಕ್ತಿ.

311

ಕಪ್ಪು (black)
ಕಪ್ಪು ಬಣ್ಣವನ್ನು ಇಷ್ಟ ಪಡೋರು ತಮ್ಮ ಗೌಪ್ಯತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಇವರು ವಿನಮ್ರರಾಗಿರುತ್ತಾರೆ ಮತ್ತು ಈ ಬಣ್ಣವು ಘನತೆಯನ್ನು ಸಂಕೇತಿಸುತ್ತದೆ. ಈ ಬಣ್ಣ ಇಷ್ಟ ಪಡೋರು ಸ್ವಯಂ ನಿಯಂತ್ರಣವನ್ನು ಹೊಂದಿರುತ್ತಾರೆ ಮತ್ತು ಸರಿಯಾದ ರೀತಿಯಲ್ಲಿ ಕೆಲಸಗಳನ್ನು ಮಾಡಲು ಸಾಕಷ್ಟು ಒತ್ತುನೀಡುವ ವ್ಯಕ್ತಿ ಇವರು.  

411

ಕೆಂಪು (Red)
ಇವರು ತುಂಬಾ ಏಕಾಗ್ರತೆ ಮತ್ತು ದೃಢತೆ ಹೊಂದಿರೋ ಜನ. ಇವರು ಹುಟ್ಟಿನಿಂದಲೇ ನಾಯಕರಾಗಿರುತ್ತಾರೆ. ಜೊತೆಗೆ ಎಲ್ಲಾ ಕಡೆಗಳಲ್ಲೂ ಗೌರವವನ್ನು ಸಂಪಾದಿಸುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತೆ.

511

ಗ್ರೇ (Gray)
ಬೂದು ಬಣ್ಣ ಇಷ್ಟ ಪಡೋರು ಶಾಂತ ಸ್ವಭಾವದವರು. ಈ ವ್ಯಕ್ತಿಯು ನಡತೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ತಮ್ಮ ಸ್ವಂತ ವ್ಯವಹಾರವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಇಷ್ಟಪಡುತ್ತಾರೆ.

611

ಬಿಳಿ (White)
ಬಿಳಿ ಬಣ್ಣವನ್ನು ಇಷ್ಟಪಡೋರು ಪರ್ಫೆಕ್ಟ್ ಆಗಿರಲು ಇಷ್ಟಪಡ್ತಾರೆ. ಇವರು ಸೆಲ್ಫ್ ಕಂಟ್ರೋಲ್ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ. ರಿಸರ್ವ್ಡ್ ವ್ಯಕ್ತಿ ಆಗಿರೋದರಿಂದ ಹೆಚ್ಚಿನ ಜನ ಇವರ ಬಗ್ಗೆ ತಪ್ಪಾಗಿ ತಿಳಿಯುತ್ತಾರೆ. ಇವರು ತುಂಬಾ ಬುದ್ಧಿವಂತರಾಗಿರ್ತಾರೆ.

711

ಗುಲಾಬಿ (Pink)
ಗುಲಾಬಿ ಬಣ್ಣವನ್ನು ಇಷ್ಟಪಡುವ ಜನರು ತಮಾಷೆ ಮತ್ತು ಕಾಳಜಿಯುಳ್ಳ ವ್ಯಕ್ತಿ. ಗುಲಾಬಿ ಪ್ರಿಯರು ತುಂಬಾ ದಯಾಪರರು. ಅವರಿಗೆ, ಶಾಂತಿ ಮುಖ್ಯ. ಜೊತೆಗೆ ಜೀವನ ಹೇಗೆ ಸಾಗುತ್ತೆ, ಅದರ ರೀತಿಯಲ್ಲಿ ಜೀವನವನ್ನು ಇಷ್ಟಪಡುವ ಜನ ಇವರು.

811

ಗಾಢ ನೀಲಿ (Dark Blue)
ನೀಲಿ ಪ್ರಿಯರು ಸ್ನೇಹಿತರಿಗಾಗಿ ಏನೂ ಮಾಡಲು ಬೇಕಾದರೂ ತಯಾರಿರುವ ವ್ಯಕ್ತಿ. ಈ ಜನರು ನಂಬಿದವರನ್ನು ಕೈ ಬಿಡೋದಿಲ್ಲ. ಅವರನ್ನು ಹೆಚ್ಚಾಗಿ ವಿಶ್ವಾಸಾರ್ಹ, ಭರವಸೆಗೆ ಬದ್ಧನಾದ ವ್ಯಕ್ತಿ ಎಂದು ನಂಬಲಾಗಿದೆ. 

911

ಕಿತ್ತಳೆ (orange)
ಕಿತ್ತಳೆ ಬಣ್ಣ ಇಷ್ಟಪಡೋರು ಆಶಾವಾದಿಗಳು. ಜೀವನದಲ್ಲಿ ಎಷ್ಟೇ ಒತ್ತಡ ಬಂದರೂ ಸಹ ಇವರು ಎದೆಗುಂದೋದಿಲ್ಲ. ಧೈರ್ಯವಾಗಿ ಎದುರಿಸುತ್ತಾರೆ. ಈ ಜನರು ಸಾಮಾಜಿಕ ಜೀವಿಗಳು ಮತ್ತು ಆಗಾಗ್ಗೆ ಸಮಸ್ಯೆಗಳನ್ನು ಪರಿಹರಿಸಲು ಜನರು ಇವರ ಬಳಿಯೇ ಬರುತ್ತಾರೆ.

1011

ಹಸಿರು (green)
ಹಸಿರು ಬಣ್ಣಕ್ಕೆ ಆಕರ್ಷಿತರಾದ ಜನರು ಹಸಿರು ಮತ್ತು ಪ್ರಕೃತಿ ಪ್ರೇಮಿಯಾಗಿರ್ತಾರೆ.ಸಮಯಕ್ಕೆ ಬದ್ಧರಾಗಿ ಕೆಲಸ ಮಾಡೋರು ಇವರು. ಅವರು ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ ಮತ್ತು ದೊಡ್ಡ ಕನಸುಗಳನ್ನು ಕಾಣುವ ಜನರು ಇವರು.

1111

ಹಳದಿ (Yellow)
ಹಳದಿ ಬಣ್ಣ ಪ್ರಿಯರು ಎಂದಿಗೂ ನಾಕಾರಾತ್ಮಕವಾಗಿ ಯೋಚನೆ ಮಾಡೋದಿಲ್ಲ. ಅವರು ಸ್ವಭಾವತಃ ಧನಾತ್ಮಕರಾಗಿದ್ದಾರೆ. ಇವರು ಹೆಚ್ಚು ಜನರೊಂದಿಗೆ ಬೆರೆಯೋದಿಲ್ಲ, ಆದರೆ ತಮ್ಮ ಸಣ್ಣ ಸರ್ಕಲ್ ನಲ್ಲೇ ಸಂತೋಷವಾಗಿರುತ್ತಾರೆ. 

click me!

Recommended Stories