ಪೆನ್ (Pen) ಹಿಡಿಯುವ ಶೈಲಿಯಿಂದ ನಿಮ್ಮ ವ್ಯಕ್ತಿತ್ವವನ್ನು ಕಂಡುಹಿಡಿಯುವುದು ತುಂಬಾ ಸುಲಭ ಎಂದು ನಿಮಗೆ ತಿಳಿದಿದ್ಯಾ? ಇದು ಮಾತ್ರವಲ್ಲ, ನೀವು ಪೆನ್ ಹಿಡಿಯುವ ವಿಧಾನವು ನಿಮ್ಮ ಸ್ವಭಾವದ ಬಗ್ಗೆ ಸಾಕಷ್ಟು ಹೇಳುತ್ತೆ. ನೀವು ಎಂತವರು? ಜೀವನದಲ್ಲಿ ಏನು ಮಾಡ್ತೀರಾ? ಅನ್ನೋದನ್ನೆಲ್ಲಾ ಈ ಪೆನ್ ಹಿಡಿಯುವ ಸ್ಟೈಲ್ ಹೇಳುತ್ತೆ. ಅವುಗಳ ಬಗ್ಗೆ ತಿಳಿಯೋಣ.
ಒಬ್ಬ ವ್ಯಕ್ತಿ ಎಷ್ಟು ಬುದ್ಧಿವಂತ (Intelligent) ಮತ್ತು ಅವನು ತನ್ನ ಜೀವನವನ್ನು ಹೇಗೆ ಬದುಕಲು ಬಯಸುತ್ತಾನೆ ಎಂಬುದನ್ನು ಸಹ ನೀವು ಕಂಡುಹಿಡಿಯಬಹುದು. ಪೆನ್ ಹಿಡಿಯುವ ಶೈಲಿ ಮೂಲಕ ನೀವು ಒಬ್ಬರ ಬಗ್ಗೆ ಸಾಕಷ್ಟು ಕಲಿಯಬಹುದು. ಇದು ಅನೇಕ ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಅದು ಹೇಗೆಂದು ತಿಳಿಯೋಣ.
ಪೆನ್ ಹಿಡಿಯುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು(Personality) ತಿಳಿದುಕೊಳ್ಳಿ
ತೋರುಬೆರಳು ಮತ್ತು ಹೆಬ್ಬೆರಳು
ತೋರುಬೆರಳು ಮತ್ತು ಹೆಬ್ಬೆರಳಿನ ಸಹಾಯದಿಂದ ಪೆನ್ನನ್ನು ಮಧ್ಯದಿಂದ ಹಿಡಿದರೆ, ವ್ಯಕ್ತಿ ಸಂಪೂರ್ಣವಾಗಿ ಹೊಸ ಆಲೋಚನೆಯ ವ್ಯಕ್ತಿ ಎಂದು ಅರ್ಥ. ಆತ ಬಹುಮುಖ ಪ್ರತಿಭೆಯೂ ಹೌದು. ಆತನ ವ್ಯಕ್ತಿತ್ವವು ಸಾಕಷ್ಟು ನಿಗೂಢವಾಗಿದೆ ಎಂದರ್ಥ.
ಹೆಬ್ಬೆರಳು ಮತ್ತು ಎಲ್ಲಾ ಬೆರಳುಗಳು
ಒಬ್ಬ ವ್ಯಕ್ತಿ ತನ್ನ ಹೆಬ್ಬೆರಳು ಮತ್ತು ಎಲ್ಲಾ ಬೆರಳುಗಳ ಸಹಾಯದಿಂದ ಪೆನ್ ಹಿಡಿದರೆ, ಆತ ಸಾಕಷ್ಟು ವಿಶ್ವಾಸಾರ್ಹವಾದ ವ್ಯಕ್ತಿ ಎಂದು ಅರ್ಥ. ಅಲ್ಲದೇ ಅವನನ್ನು ಕುರುಡಾಗಿ ನಂಬಬಹುದು. ಅವನು ತುಂಬಾ ಮಹತ್ವಾಕಾಂಕ್ಷೆಯವನು ಮತ್ತು ಯಾವುದರ ಬಗ್ಗೆಯೂ ಹೆಚ್ಚು ಯೋಚಿಸುತ್ತಾನೆ(Thinking) ಎಂದರ್ಥ.
ತೋರುಬೆರಳು ಮತ್ತು ಮಧ್ಯದ ಬೆರಳು
ಯಾರಾದರೂ ತಮ್ಮ ತೋರುಬೆರಳು ಮತ್ತು ಮಧ್ಯದ ಬೆರಳಿನಿಂದ ಪೆನ್ ಹಿಡಿದರೆ, ಅಂತಹ ಜನರ ಸ್ವಭಾವ ಕ್ಷಮಿಸುವಂತದ್ದು(Forgive). ದೊಡ್ಡ ತಪ್ಪಿಗೆ ಅವರು ಯಾರನ್ನಾದರೂ ಸುಲಭವಾಗಿ ಕ್ಷಮಿಸುತ್ತಾರೆ. ಅಂತಹ ಜನರು ನಕಾರಾತ್ಮಕತೆಯಿಂದ ದೂರವಿರುತ್ತಾರೆ ಮತ್ತು ಸಮಾಜವನ್ನು ಆನಂದಿಸಲಿದ್ದಾರೆ.
ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳು
ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳಿನಿಂದ ಪೆನ್ ಹಿಡಿಯುವವರು ಸ್ವಭಾವತಃ ತುಂಬಾ ದಯಾಪರರು. ಅವರು ಯಾರಿಗೂ ನೋವುಂಟು ಮಾಡೋದಿಲ್ಲ. ಆದರೆ, ಅಂತಹ ಜನರು ಬೇಗನೆ ಉತ್ಸುಕರಾಗುತ್ತಾರೆ ಮತ್ತು ವಿಷಯಗಳ ಬಗ್ಗೆ ಕೋಪಗೊಳ್ಳುವುದು(Angry) ಅವರ ಅಭ್ಯಾಸವಾಗಿದೆ. ಈ ರೀತಿಯಾಗಿ, ನೀವು ಒಬ್ಬರ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಅವರ ಪೆನ್ ಹಿಡಿಯುವ ಶೈಲಿಯಿಂದ ಕಂಡುಹಿಡಿಯಬಹುದು.