ತಮ್ಮ ಮದುವೆಯನ್ನು ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಏನೇನೋ ಹೊಸ ಹೊಸ ಕಾನ್ಸೆಪ್ಟ್ ನೊಂದಿಗೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ, ಪ್ರೀ-ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಇದೀಗ ಮೋರಿಗೂ ಕಾಲಿಟ್ಟಿದೆ ಪ್ರಿ ವೆಡ್ಡಿಂಗ್ ಕಾನ್ಸೆಪ್ಟ್.
ತಮ್ಮ ಮದುವೆಯ ಸುಂದರ ಗಳಿಗೆಯನ್ನು ಸದಾ ಕಾಲ ನೆನಪಿನಲ್ಲುಳಿಯುವಂತೆ ಮಾಡಲು ವಿಭಿನ್ನ ರೀತಿಯ ಫೋಟೋ ಶೂಟ್ (photo shoot) ಮಾಡಿಸುತ್ತಾರೆ. ಮದ್ವೆ ಫೋಟೋ ಶೂಟ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಎಲ್ಲವನ್ನೂ ಮಾಡಿಸ್ತಿದ್ದಾರೆ. ಅದರಲ್ಲೂ ಇತ್ತೀಚೆಗಂತೂ ಜನ ಏನೇನೋ ಚಿತ್ರ ವಿಚಿತ್ರ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
26
ಅರೆ ಬೆತ್ತಲಾಗಿ ಫೋಟೋ ಶೂಟ್, ಕೆಸರಿನಲ್ಲಿ ಫೋಟೋ ಶೂಟ್, ನೀರಿನಲ್ಲಿ ಫೋಟೋ ಶೂಟ್, ಗದ್ದೆಯಲ್ಲಿ, ಗ್ರಾಮೀನ್ ಗೆಟಪ್, ಸಂತೆಯಲ್ಲಿ, ಮರ್ಡರ್ ನಡೆದಂತೆ ಹೀಗೆ ವಿಚಿತ್ರ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ವೈರಲ್ (viral photo shoot) ಆಗುವಂತೆ ಮಾಡುತ್ತಿದ್ದಾರೆ.
36
ಇದೀಗ ಹೊಸದೊಂದು ಫೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ (social media) ಸಖತ್ ವೈರಲ್ ಆಗ್ತಿದೆ. ಇದರಲ್ಲಿ ಜೋಡಿಗಳು ಆಕಾಶದಲ್ಲೂ ಅಲ್ಲ, ಗದ್ದೆಯಲ್ಲೂ ಅಲ್ಲ, ವಿಚಿತ್ರ ಜೊತೆಗೆ ಗಲೀಜು ಎನಿಸುವಂತೆ ಮೋರಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.
46
ಕಳೆದ ಬಾರಿ ಫಿಲಿಪೈನ್ಸ್ ನ ಜೋಡಿಗಳಿಬ್ಬರು ಕೆಸರು ಗದ್ದೆಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಸಖತ್ ವೈರಲ್ ಆಗಿತ್ತು. ಅಲ್ಲಿ ಇಬ್ಬರೂ ಸಹ ಕೃಷಿಕ ಕುಟುಂಬದಿಂದ ಬಂದಿರೋದರಿಂದ ವ್ಯವಸಾಯದ ಬಗ್ಗೆ ಹೆಚ್ಚು ಮಹತ್ವ ನೀಡಲು ಗದ್ದೆಯಲ್ಲಿ, ಕೆಸರನ್ನು ಮೈಗೆ ಅಂಟಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದರು. ಆದರೆ ಈ ಜೋಡಿ ಅದಕ್ಕೂ ಒಂದು ಹೆಜ್ಜೆ ಮುಂದೆ ಬಂದಿದೆ.
56
ಕಸ, ಪ್ಲಾಸ್ಟಿಕ್ , ತ್ಯಾಜ್ಯಗಳು ರಾಶಿ ತುಂಬಿದ ಮೋರಿಯಂತಹ ಜಾಗದಲ್ಲಿ ಜೋಡಿಗಳು ವಿಭಿನ್ನ ಭಂಗಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಇದನ್ನು ಮಾಡಿರಬಹುದು, ಅಥವಾ ಜನರಿಗೆ ಅರಿವು ನೀಡುವ ನಿಟ್ಟಿನಲ್ಲೂ ಮಾಡಿರಬಹುದು. ಒಟ್ಟಾರೆಯಾಗಿ ಈ ಫೋಟೋ ಶೂಟ್ ಇದೀಗ ವೈರಲ್ (viral photoshoot) ಆಗುತ್ತಿದೆ.
66
ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುತ್ತಿರುವ ಈ ಫೋಟೋ ಶೂಟ್ ಮಾಡಿಸಿರೋರು ಯಾರು? ಎಲ್ಲಿಯವರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಫೋಟೊಗೆ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನು ಬರುತ್ತಿವೆ. ಇನ್ನು ಈ ಕಣ್ಣುಗಳಿಂದ ಏನೇನು ನೋಡಬೇಕೋ? ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಕೆಲವರು, ಇವರ ವೈವಾಹಿಕ ಜೀವನ ಮೋರಿಯಂತೆ ಆಗದಿರಲಿ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.