ಮೂಡ್‌ ಬಂದಾಗೆಲ್ಲಾ ಅಲ್ಲ..ಯಾವಾಗೆಲ್ಲ ಲೈಂಗಿಕ ಕ್ರಿಯೆ ನಡೆಸಬಾರದು ತಿಳ್ಕೊಳ್ಳಿಳ್ಳಿ

First Published | Apr 22, 2023, 6:08 PM IST

ಲೈಂಗಿಕ ಕ್ರಿಯೆ ಎಂಬುದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಮಕ್ಕಳನ್ನು ಮಾಡಿಕೊಳ್ಳಲು ಮಾತ್ರವಲ್ಲ ಆರೋಗ್ಯಕ್ಕೂ ಸೆಕ್ಸ್ ಅತೀ ಅಗತ್ಯ. ಆದರೆ ಮೂಡ್ ಬಂದಾಗಲ್ಲೆಲ್ಲಾ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳುವುದಲ್ಲ. ಹಾಗಿದ್ರೆ ಯಾವಾಗೆಲ್ಲಾ ಲೈಂಗಿಕ ಕ್ರಿಯೆ ಮಾಡಬಾರದು. ಇಲ್ಲಿದೆ ಮಾಹಿತಿ.

ಲೈಂಗಿಕ ಸಂಭೋಗವು ಮಾನವ ಜೀವನದ ಪ್ರಮುಖ ಅಂಶವಾಗಿದೆ. ಅದಕ್ಕಾಗಿಯೇ ಲೈಂಗಿಕ ಶಿಕ್ಷಣದ ಅಗತ್ಯ ಪ್ರತಿಯೊಬ್ಬರಿಗೂ ಅಗತ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ಲೈಂಗಿಕತೆಯ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳ ಬಗ್ಗೆ ತಿಳಿದಿರಬೇಕಾದುದು ಅತ್ಯಗತ್ಯ.

ಲೈಂಗಿಕ ಕ್ರಿಯೆ ನಡೆಸಬೇಕಾದ ಸಮಯ, ನಡೆಸಬಾರದ ಸಮಯ ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ಇದು ಸೆಕ್ಸ್‌ನಲ್ಲಿ ಉತ್ತಮ ಅನುಭವವನ್ನು ನೀಡುತ್ತದೆ. ಮಾತ್ರವಲ್ಲ ಅನಾರೋಗ್ಯಕರ ಲೈಂಗಿಕ ಸಂಭೋಗದಿಂದ ಉಂಟಾಗುವ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Latest Videos


​ಗರ್ಭಾವಸ್ಥೆಯಲ್ಲಿ ಸಂಭೋಗಿಸುವಾಗ ಕಾಳಜಿ ವಹಿಸಿ
ಗರ್ಭಾವಸ್ಥೆಯಲ್ಲಿ ನೀವು ಲೈಂಗಿಕತೆಯನ್ನು ಹೊಂದಲು ಬಯಸಿದರೆ ವೈದ್ಯಕೀಯವಾಗಿ ಯಾವುದೇ ತಪ್ಪಿಲ್ಲ. ಈ ಅವಧಿಯಲ್ಲಿ ಅನೇಕ ದಂಪತಿಗಳು ಲೈಂಗಿಕತೆಯನ್ನು ಆನಂದಿಸುತ್ತಾರೆ. ಆದರೆ ಗರ್ಭಕಂಠ, ಜರಾಯು, ಲೈಂಗಿಕವಾಗಿ ಹರಡುವ ರೋಗಗಳ ಇತಿಹಾಸದಂತಹ ಹಲವಾರು ಅಂಶಗಳು ಭ್ರೂಣಕ್ಕೆ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ ಈ ಬಗ್ಗೆ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ

ಬಿಕಿನಿ ವ್ಯಾಕ್ಸ್ ಮಾಡಿದ್ದಾಗ ಲೈಂಗಿಕತೆಯನ್ನು ಹೊಂದಬೇಡಿ​
ಬಿಕಿನಿ ವ್ಯಾಕ್ಸ್ ನಂತರ ತಕ್ಷಣವೇ ಸಂಭೋಗಿಸುವುದು ವ್ಯಾಕ್ಸಿಂಗ್ ಪ್ರಕ್ರಿಯೆಯಲ್ಲಿ ಜನನಾಂಗಗಳ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಹಾನಿಗೊಳಿಸುತ್ತದೆ. ಇದು ನಿಮಗೆ ಉತ್ತಮ ಲೈಂಗಿಕತೆಯ ಭಾವನೆಯನ್ನು ನೀಡಬಹುದು ಆದರೆ ತಜ್ಞರ ಪ್ರಕಾರ ನಿಮ್ಮ ಚರ್ಮವು ಗುಣವಾಗಲು ಸಮಯ ನೀಡಬೇಕು. ಅದಕ್ಕಾಗಿ ಬಿಕಿನಿ ವ್ಯಾಕ್ಸ್ ನಂತರ ಕನಿಷ್ಠ ಒಂದು ದಿನವಾದರೂ ಸಂಭೋಗಿಸಬಾರದು.

​ರಕ್ಷಣೆ ಇಲ್ಲದಿದ್ದರೆ ಲೈಂಗಿಕ ಕ್ರಿಯೆ ಮಾಡಬೇಡಿ​
ಕಾಂಡೋಮ್‌ನಂತಹ ಉತ್ತಮ ರಕ್ಷಣೆಯನ್ನು ಹೊಂದಿಲ್ಲದಿದ್ದರೆ ಲೈಂಗಿಕತೆಯಿಂದ ದೂರವಿರಿ. ಕಾಂಡೋಮ್‌ಗಳು ನಿಮ್ಮನ್ನು ಅನಗತ್ಯ ಗರ್ಭಧಾರಣೆಯಿಂದ ರಕ್ಷಿಸುವುದಲ್ಲದೆ, ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

ಹೆರಿಗೆಯಾದ ತಕ್ಷಣ ಲೈಂಗಿಕ ಕ್ರಿಯೆ ಬೇಡ
ಮಗುವಿಗೆ ಜನ್ಮ ನೀಡಿದ ನಂತರ ಕೆಲವು ತಿಂಗಳುಗಳ ವರೆಗೆ ಕಾಯುವುದು ಉತ್ತಮ. ಅನೇಕ ವೈದ್ಯರು ಮಗುವಿನ ಜನನದ ನಂತರ ಒಂದು ತಿಂಗಳು ಅಥವಾ ಎರಡು ತಿಂಗಳವರೆಗೆ ಕಾಯಲು ಸಲಹೆ ನೀಡುತ್ತಾರೆ. ಸರಿಯಾದ ಅಂತರವನ್ನು ಕಂಡುಕೊಳ್ಳಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹೆರಿಗೆ ಮತ್ತು ಲೈಂಗಿಕತೆಯ ನಡುವೆ ಅಂತರವನ್ನು ಇಟ್ಟುಕೊಳ್ಳುವುದು ದೇಹವು ಹೆರಿಗೆಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

UTIಯಿಂದ ಚೇತರಿಸಿಕೊಳ್ಳುತ್ತಿರುವಾಗ​
ಮೂತ್ರನಾಳದ ಸೋಂಕುಗಳು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತವೆ. ನೀವು ಇತ್ತೀಚೆಗೆ ಮೂತ್ರನಾಳದ ಸೋಂಕನ್ನು ಹೊಂದಿದ್ದರೆ ಮತ್ತು ಅದರಿಂದ ಚೇತರಿಸಿಕೊಂಡಿದ್ದರೆ, ಇನ್ನೂ ಕೆಲವು ದಿನಗಳವರೆಗೆ ಲೈಂಗಿಕತೆಯಿಂದ ದೂರ ಇರಲು ಸಲಹೆ ನೀಡಲಾಗುತ್ತದೆ. ಯಾಕೆಂದರೆ ಮೂತ್ರನಾಳದ ಸೋಂಕು ಇದ್ದಾಗ ಲೈಂಗಿಕತೆ ನಡೆಸಿದ್ರೆ ಅದು ನಿಮ್ಮ ಸಂಗಾತಿಗೂ ಇದು ಬರಬಹುದು.

click me!