ದಿನ ಕಳೆದಂತೆ ದಾಂಪತ್ಯದಲ್ಲಿ ಬಿರುಕು ಹೆಚ್ಚುತ್ತಿದ್ಯಾ? ಹಾಗಿದ್ರೆ ಇವಿಷ್ಟು ಮಾಡಿ!

First Published | Nov 13, 2023, 5:07 PM IST

ಕೆಲವೊಂದು ಸಂಬಂಧಗಳು ದಿನ ಕಳೆದಂತೆ ಹೆಚ್ಚು ಹತ್ತಿರವಾಗುವ ಬದಲು ದೂರಾಗುತ್ತಾ ಹೋಗುತ್ತವೆ. ಅದಕ್ಕೆ ಕಾರನ ಜೋಡಿಗಳ ನಡುವೆ ಮೂಡುವ ಈ ಸಾಮಾನ್ಯ ವಿಷಯಗಳೇ ಆಗಿರುತ್ತೆ. ಇವುಗಳನ್ನು ಸರಿಪಡಿಸಲು ಏನು ಮಾಡಬಹುದು. ಅನ್ನೋದನ್ನು ತಿಳಿಯೋಣ. 

ಸಂಬಂಧಗಳನ್ನು (relationship) ಬೆಳೆಸುವುದು ಎಷ್ಟು ಕಷ್ಟವೋ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ, ಜನರ ಜೀವನವು ವೇಗವಾಗಿ ಬದಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಬದಲಾವಣೆಗಳು ಅವರ ಸಂಬಂಧಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ, ಈ ಕಾರಣದಿಂದಾಗಿ ಸಂಬಂಧದಲ್ಲಿ ಅಂತರಗಳು ಹೆಚ್ಚುತ್ತಲೇ ಹೋಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಈ ಸುಲಭ ವಿಧಾನಗಳೊಂದಿಗೆ ನಿಮ್ಮ ಸಂಬಂಧದಲ್ಲಿನ ಬಿರುಕುಗಳನ್ನು ಸರಿಮಾಡಬಹುದು 

ಮದುವೆ ಆಗಿರಬಹುದು, ಲವ್ ಆಗಿರಬಹುದು, ಆ ಸಂಬಂಧವನ್ನು ಉಳಿಸಿಕೊಂಡು ಹೋಗೋದು ತುಂಬಾನೆ ಕಷ್ಟದ ಕೆಲಸ. ಒಂದು ಕಾಲದಲ್ಲಿ ಉತ್ತಮವಾಗಿದ್ದ ವಿಷಯಗಳು, ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ಚರ್ಚೆ ಮತ್ತು ಜಗಳಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಅನೇಕ ಸಂಬಂಧಗಳು ಬಗೆಹರಿಯದೆ ಉಳಿದಿವೆ ಮತ್ತು ಕೆಲವು ವಿಚ್ಛೇದನದ ಹಾದಿಯಲ್ಲಿ ಹೋಗುತ್ತವೆ. 

Tap to resize

ಪ್ರೀತಿಸಿ ಮದುವೆಯಾದ ಜೋಡಿಗಳು, ಅಥವಾ ತುಂಬಾನೆ ಪ್ರೀತಿಯಿಂದ ಇದ್ದ ಜೋಡಿಗಳು ಮತ್ತೆ ಬೇರೆಯಾಗೋ ಅನೇಕ ಉದಾಹರಣೆಗಳನ್ನು ನೀವೇ ಕಣ್ಣ ಮುಂದೆ ನೋಡಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮಿಬ್ಬರ ನಡುವಿನ ಎಲ್ಲಾ ಸಮಸ್ಯೆಗಳನ್ನು ಸುಧಾರಿಸಿ, ಎವರ್ ಗ್ರೀನ್ ರಿಲೇಶನ್ ಶಿಪ್ (evergreen relationship) ನಿಮ್ಮದಾಗಲು ನೀವು ಏನು ಮಾಡಬಹುದು? ಅನ್ನೋದನ್ನು ತಿಳಿಯೋಣ. 

ಅಹಂ ಪಕ್ಕಕ್ಕೆ ಇರಿಸಿ: ಯಾವುದೇ ಸಂಬಂಧವನ್ನು ನಾಶಪಡಿಸುವ ಮುಖ್ಯವಾದ ವಿಷಯ ಅಂದ್ರೆ ಅದು ಅಹಂ (ego). ಈ ಅಹಂನಿಂದಾಗಿಯೇ ಸಂಬಂಧದಲ್ಲಿ ನರಳುವಂತಹ ಸ್ಥಿತಿ ಉಂಟಾಗುತ್ತೆ. ಹಾಗಾಗಿ ಇಬ್ಬರಲ್ಲೂ ಅಹಂ ಸುಳಿಯದಂತೆ ನೋಡಿಕೊಳ್ಳಬೇಕು. ಅಹಂ ಇಲ್ಲದೇ ಇದ್ದರೆ, ಇಬ್ಬರ ನಡುವಿನ ಹಲವು ಸಮಸ್ಯೆ ಸುಲಭವಾಗಿ ಪರಿಹರಿಸಲ್ಪಡುತ್ತದೆ. 
 

ಮಾತನಾಡಿ: ಮಾತನಾಡಿ, ಹಂಚಿಕೊಳ್ಳಿ, ಜಗಳ ಮಾಡಿ, ಕೂಗಿ, ನಿಮ್ಮ ಮನಸ್ಸನ್ನು ಹಗುರಗೊಳಿಸಿ, ಆದರೆ ನಿಮ್ಮ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸದ್ದಿಲ್ಲದೆ ಬದುಕಬೇಡಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನಸಿನ ಮಾತು ಮನಸ್ಸಿನಲ್ಲಿ ಉಳಿಯುತ್ತದೆ, ಅದು ನಿಮ್ಮನ್ನು ಹೊರತುಪಡಿಸಿ ಯಾರ ಕಿವಿಗೂ ಹೋಗುವುದಿಲ್ಲ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ (partner) ಹಂಚಿಕೊಂಡಾಗ, ವಿಷಯಗಳು ತೆರೆದುಕೊಳ್ಳುತ್ತವೆ. ನೀವು ಮನಸು ಬಿಚ್ಚಿ ಮಾತನಾಡಿದಾಗ ಮಾತ್ರ ಸಮಸ್ಯೆ ದೂರ ಆಗುವ ಸಾಧ್ಯತೆ ಹೆಚ್ಚಾಗಿರುತ್ತೆ.
 

ಸರ್ಫ್ರೈಸ್ ನೀಡಿ: ಕೆಲವೊಮ್ಮೆ ದೊಡ್ಡ ತಪ್ಪಿಗೆ ಪರಿಹಾರವು ಸಣ್ಣ ಗುಲಾಬಿ ಹೂವಿನಲ್ಲೂ ಇರುತ್ತೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ನಿಮ್ಮ ಸಂಗಾತಿಗೆ ವಿಶೇಷ ಭಾವನೆ ಮೂಡಿಸಿ. ಅವರ ನೆಚ್ಚಿನ ಉಡುಗೊರೆಗಳನ್ನು ತರುವ ಮೂಲಕ ಅವರಿಗೆ ಸರ್ ಫ್ರೈಸ್ (surprise) ನೀಡಿ ಮತ್ತು ಅವರ ಖುಷಿಯಲ್ಲಿ ನೀವು ಸಂಭ್ರಮಿಸಿ.

ಎಲ್ಲರೆದುರು ಗೇಲಿ ಮಾಡಬೇಡಿ: ಗಂಡ ಮತ್ತು ಹೆಂಡತಿ ಸ್ನೇಹಿತರು ಅಥವಾ ಕುಟುಂಬದ ಮುಂದೆ ಒಬ್ಬರನ್ನೊಬ್ಬರು ಗೇಲಿ (insult) ಮಾಡುತ್ತಾರೆ. ಕಾಲೆಳೆಯುವ ಭರದಲ್ಲಿ ಬಾಣದಂತೆ ಚುಚ್ಚುವ ಮಾತುಗಳನ್ನು ಹೇಳುತ್ತಾರೆ. ಇದರಿಂದ ಸಂಬಂಧ ಹಾಳಾಗುತ್ತೆ.  ಹಾಗಾಗಿ ಗಂಡ ಮತ್ತು ಹೆಂಡತಿ ಸಾಮಾಜಿಕವಾಗಿ ಎಂದಿಗೂ ಒಬ್ಬರನ್ನೊಬ್ಬರು ಗೇಲಿ ಮಾಡದಂತೆ ನೋಡಿಕೊಳ್ಳಬೇಕು. ಏಕೆಂದರೆ ಕೆಲವು ಜೋಕ್ ಗಳು ನೋವುಂಟುಮಾಡುತ್ತವೆ.  ಆದರೆ ಎಲ್ಲರೆದುರು ಮೆಚ್ಚುವ ಕೆಲಸ ಮಾಡಬಹುದು. 

ಹೆಚ್ಚು ನಿರೀಕ್ಷಿಸಬೇಡಿ: ಭರವಸೆಯು ಒಂದು ದೊಡ್ಡ ರೋಗವಾಗಿ ಮಾರ್ಪಟ್ಟಿದೆ, ನಾವು ಒಬ್ಬರ ಮೇಲೆ ಅಗತ್ಯಕ್ಕಿಂತ ಹೆಚ್ಚು ಭರವಸೆ (do not expecct too much) ಹೊಂದಿದ್ದರೆ, ಅದರಿಂದ ನಿರಾಸೆ ಉಂಟಾಗೋದೆ ಹೆಚ್ಚು.  ಸ್ವಲ್ಪ ಮಟ್ಟಿನ ನಿರೀಕ್ಷೆ ಓಕೆ, ಆದರೆ ನೀವು ಇತರರಿಂದ ಹೆಚ್ಚು ನಿರೀಕ್ಷೆ ಮಾಡಿದಷ್ಟು ನೋವು ಹೆಚ್ಚುತ್ತದೆ. ಅದರ ಬದಲು ಒಬ್ಬರನ್ನೊಬ್ಬರು ಗೌರವಿಸಿ, ಕೃತಜ್ಞರಾಗಿರಿ ಸಾಕು. 
 

Latest Videos

click me!