Relationship : ಈ ಅಭ್ಯಾಸಗಳಿದ್ರೆ Boy Friend ಖಂಡಿತಾ ನಿಮ್ಮಿಂದ ದೂರ ಹೋಗ್ತಾರೆ

First Published | Nov 24, 2021, 5:57 PM IST

ಹುಡುಗರು ಹುಡುಗಿಯರ(Girls) ಅನೇಕ ಅಭ್ಯಾಸಗಳಿಂದಾಗಿ ಅವರಿಗಾಗಿ ಪ್ರಾಣ ಬಿಡಲು ತಯಾರಿರುತ್ತಾರೆ. ಆದರೆ ಹುಡುಗರಿಗೆ ಇಷ್ಟವಾಗದ ಕೆಲವು ಅಭ್ಯಾಸಗಳಿವೆ, ಮತ್ತು ಅದಕ್ಕಾಗಿಯೇ ಅವರು ಹುಡುಗಿಯರಿಂದ ಓಡಿಹೋಗುತ್ತಾರೆ. ಹುಡುಗಿಯರ ಅಂತಹ ಯಾವ ಅಭ್ಯಾಸಗಳು ಹುಡುಗರಿಗೆ ಇಷ್ಟವಾಗೋದಿಲ್ಲ ಗೊತ್ತಾ? 

ಸುಂದರವಾಗಿದ್ದರೆ (beautiful girl) ಸಾಕು ಹುಡುಗರು ತಮ್ಮ ಜೀವನವನ್ನು ಹುಡುಗಿಯರಿಗಾಗಿ ಮೀಸಲಿಡಲು ತಯಾರಿರುತ್ತಾರೆ ಎಂದು ಆಗಾಗ್ಗೆ ಹುಡುಗಿಯರು ಭಾವಿಸುತ್ತಾರೆ. ಆದರೆ ಹುಡುಗರು ಇಷ್ಟಪಡದ ಹುಡುಗಿಯರ ಕೆಲವು ಗುಣಗಳಿವೆ ಎಂದು ನಿಮಗೆ ತಿಳಿದಿದೆಯೇ? . ಹೌದು ಹುಡುಗಿಯರ ಕೆಲವೊಂದು ಅಭ್ಯಾಸಗಳನ್ನು ಹುಡುಗರು ಎಷ್ಟು ಹೇಟ್ ಮಾಡುತ್ತಾರೆ ಎಂದರೆ, ಇದೆ ಕಾರಣಕ್ಕಾಗಿ ಅವರು ಬ್ರೇಕ್ ಅಪ್ (breakup) ಮಾಡಲು ರೆಡಿ ಇರುತ್ತಾರೆ. 

ತಮ್ಮನ್ನು ತಾವು ಅತ್ಯಂತ ಸುಂದರ ಎಂದು ಭಾವಿಸುವವರು, ಕೆಟ್ಟ ವರ್ತನೆಗಳನ್ನು (bad habits) ತೋರಿಸುವುದು ಅಥವಾ ಹೆಚ್ಚು ಶೋ ಆಫ್ ಮಾಡುವುದು ಮತ್ತು ಹೆಚ್ಚು ಸೆಲ್ಫಿ ಕ್ಲಿಕ್ಕಿಸುವ ಹುಡುಗಿಯರನ್ನು ಹುಡುಗರು  ಇಷ್ಟಪಡುವುದಿಲ್ಲ. ಆದ್ದರಿಂದ ಹುಡುಗರು ಇಷ್ಟಪಡದ ಹುಡುಗಿಯರ ಸುಮಾರು 5 ಗುಣಗಳ ಬಗ್ಗೆ ತಿಳಿಯಿರಿ 
 

Tap to resize

Attitude ಹೊಂದಿರುವ ಹುಡುಗಿಯರು (attitude gir): ಕೆಲವು ಹುಡುಗಿಯರು ತುಂಬಾ ಕೋಪ ಮಾಡುತ್ತಾರೆ, ಅಷ್ಟೇ ಅಲ್ಲ ಅಟಿಟ್ಯೂಡ್ ತೋರಿಸುತ್ತಾರೆ. ಅಂತಹ ಹುಡುಗಿಯರನ್ನು ಹುಡುಗರು ಇಷ್ಟಪಡುವುದಿಲ್ಲ ಮತ್ತು ಹೆಚ್ಚುವರಿ ಸ್ಮಾರ್ಟ್ ಹುಡುಗಿಯರಿಂದ ಓಡಿಹೋಗುತ್ತಾರೆ.  ಹುಡುಗರು ನೇರ ಸರಳ ಮತ್ತು ನೇರ ಹುಡುಗಿಯರನ್ನು ಇಷ್ಟಪಡುತ್ತಾರೆ.

ಶೋ-ಆಫ್ ನಿಮ್ಮ ಸಂಬಂಧವನ್ನು ಹಾಳುಮಾಡಬಹುದು: ಹುಡುಗರು ಬಹಳಷ್ಟು ಶೋ-ಆಫ್ (show off) ಮಾಡುವ ಹುಡುಗಿಯರಿಂದ ಕಿರಿಕಿರಿ ಅನುಭವಿಸುತ್ತಾರೆ.  ಇದು ಹಣ, ಹೆಸರು ಮತ್ತು ದೊಡ್ಡ ಕುಟುಂಬವನ್ನು ಹೊಂದಿರುವ ಭಾವನೆಯನ್ನು ಒಳಗೊಂಡಿದೆ. ಇತರರ ಮುಂದೆ ತಮ್ಮ ಗೆಳೆಯರಿಗಿಂತ ಶ್ರೇಷ್ಠತೆಯನ್ನು ತೋರಿಸುವ ಹುಡುಗಿಯರಿಂದ ಹುಡುಗರು ಸಾಧ್ಯವಾದಷ್ಟು ದೂರ ಇರುತ್ತಾರೆ.. 

ತುಂಬಾ ಮೇಕಪ್ ಮಾಡೋ ಹುಡುಗಿಯರು (heavy makeup): ಅನೇಕ ಹುಡುಗಿಯರು ತಮ್ಮ ಮುಖವನ್ನು ಅಂದಗೊಳಿಸಲು ಮತ್ತು ದಿನವಿಡೀ ಮೇಕಪ್ ಮಾಡಲು ಇಷ್ಟಪಡುತ್ತಾರೆ. ತನ್ನ ಮೇಕಪ್ ಅನ್ನು ಮತ್ತೆ ಮತ್ತೆ ಟಚ್ ಅಪ್ ಕೊಡುತ್ತಿದ್ದರೆ, ಲಿಪ್ ಸ್ಟಿಕ್  ಅಥವಾ ಮಸ್ಕರಾ ಪದೇ ಪದೇ ಹಚ್ಚುತ್ತಿದ್ದರೆ ನಿಮ್ಮ ಗೆಳೆಯನು ಈ ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ.  ಹೆಚ್ಚು ಮೇಕಪ್ ಧರಿಸಲು ಹಾಕೋ ಹುಡುಗಿಯರನ್ನು ಹುಡುಗರು ಇಷ್ಟಪಡುವುದಿಲ್ಲ.   

ಸೆಲ್ಫೀ ಹುಚ್ಚು  ಹೊಂದಿರುವ ಹುಡುಗಿಯರು (selfie craze): ಇಂದಿನ ಟೆಕ್ ಸ್ನೇಹಿ ಜಗತ್ತಿನಲ್ಲಿ, ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್  ಇಟ್ಟುಕೊಳ್ಳುತ್ತಾರೆ ಮತ್ತು ಪ್ರತಿ ಸಂದಭವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಬಯಸುತ್ತಾರೆ. ಅದರಲ್ಲೂ ಕೆಲವು ಹುಡುಗಿಯರು ಮಾಲ್ ಅಥವಾ ಸಿನಿಮಾ ಥಿಯೇಟರ್ ಗಳಲ್ಲಿ ಸುತ್ತಾಡುತ್ತಿದ್ದರೂ ಸೆಲ್ಫಿ ಕ್ಲಿಕ್ಕಿಸಲು ತುಂಬಾ ಇಷ್ಟ ಪಡುತ್ತಾರೆ, ಅವರು ತಮ್ಮ ಸೆಲ್ಫಿಗಳನ್ನು ಎಲ್ಲೆಡೆ ಕ್ಲಿಕ್ಕಿಸಲು ಇಷ್ಟಪಡುತ್ತಾರೆ. ಆದರೆ ಹುಡುಗಿಯರ ಈ ಅಭ್ಯಾಸಗಳಿಂದ ಹುಡುಗರು ತುಂಬಾ ಕಿರಿಕಿರಿಪಡುತ್ತಾರೆ.

ಅಳುವ ಹುಡುಗಿಯರು ಅಂದ್ರೆ ಹುಡುಗರು ಇಷ್ಟಪಡೋದಿಲ್ಲ (crying girl): ಹುಡುಗರಿಗೆ ಫನ್ ಲವಿಂಗ್ ಮತ್ತು ಅರ್ಥಮಾಡಿಕೊಳ್ಳುವ ಹುಡುಗಿಯರು ಎಂದರೆ ಇಷ್ಟ. ಆದರೆ ಎಲ್ಲಾ ವಿಷಯಗಳಿಗೂ ಅಳುವ ಅಳುವ ಹುಡುಗಿಯರನ್ನು ಅವರು ಇಷ್ಟಪಡುವುದಿಲ್ಲ. ಅದು ಸಂತೋಷವಾಗಿರಲಿ ಅಥವಾ ದುಃಖವಾಗಿರಲಿ, ಪ್ಯಾಂಪರ್  ಮಾಡುತ್ತಲೇ ಇರಬೇಕು. ತುಂಬಾ ಅಳುವ ಹುಡುಗಿಯರು ದೂರುಗಳ ಮೂಟೆಯನ್ನು ಹೊಂದಿದ್ದಾರೆ. ಇಂತಹ ಹುಡುಗಿಯರನ್ನು ಹುಡುಗರು ಇಷ್ಟ ಪಡೋದಿಲ್ಲ. 

Latest Videos

click me!