ಹೆಂಡ್ತಿ ಜೊತೆ ಖುಷಿ ಖುಷಿಯಾಗಿರಲು ಈ ರೂಲ್ಸ್ ಫಾಲೋ ಮಾಡಿ

First Published | Aug 29, 2023, 5:40 PM IST

ಪ್ರೀತಿಯ ಹೊರತಾಗಿ, ಸಂತೋಷದ ವೈವಾಹಿಕ ಜೀವನಕ್ಕೆ ಇತರ ಕೆಲವು ವಿಷಯಗಳು ಬಹಳ ಮುಖ್ಯ. ಸಂಬಂಧದಲ್ಲಿ ಪ್ರೀತಿ ಮತ್ತು ಗೌರವವಿದ್ದರೆ, ವೈವಾಹಿಕ ಜೀವನವು ಉತ್ತಮವಾಗಿರುತ್ತೆ ಎಂದು ಹೆಚ್ಚಿನ ದಂಪತಿ ಭಾವಿಸುತ್ತಾರೆ, ಇದು ಅಕ್ಷರಶಃ ನಿಜಾ, ಆದರೆ ಇದರ ಹೊರತಾಗಿ, ದಾಂಪತ್ಯ ಜೀವನವನ್ನು ಯಶಸ್ಸುಗೊಳಿಸುವ ಇತರ ಕೆಲವು ಅಂಶಗಳೂ ಇವೆ. 
 

ನಿಮ್ಮ ಹೆತ್ತವರು ಸೇರಿದಂತೆ ವರ್ಷಗಳಿಂದ ಪರಸ್ಪರ ಸಂತೋಷದಿಂದ ವಾಸಿಸುತ್ತಿರುವ ಅನೇಕ ದಂಪತಿಗಳನ್ನು ನೀವು ನಿಮ್ಮ ಸುತ್ತಲೂ ನೋಡಿರಬಹುದು, ಆದರೆ ಮತ್ತೊಂದೆಡೆ, ಇತ್ತೀಚಿನ ದಿನಗಳಲ್ಲಿ ಮದುವೆಯಾದ ಸ್ವಲ್ಪ ದಿನಗಳಲ್ಲಿ ಡೀವೋರ್ಸ್ ಆದ ಜನರೂ ಇದ್ದಾರೆ. ಈ ಪ್ರಕರಣಗಳು ಅರೇಂಜ್ ಮ್ಯಾರೇಜ್ ಗಳಲ್ಲಿ (arranged marriage) ಮಾತ್ರವಲ್ಲ, ಲವ್ ಮ್ಯಾರೇಜ್ ಗಳಲ್ಲೂ ಕಂಡುಬರುತ್ತವೆ. 
 

ಪ್ರೇಮ ವಿವಾಹದಲ್ಲಿ (love marriage) ಡಿವೋರ್ಸ್ ಹೇಗಾಗುತ್ತೆ ಎಂದು ನೀವೂ ಯೋಚಿಸಿರಬಹುದು. ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿರುವ ಇಬ್ಬರು, ಡೇಟಿಂಗ್ ನಂತರ ಮದುವೆಯಾಗುತ್ತಾರೆ, ನಂತರ ಏಕೆ ಬೇರೆಯಾಗ್ತಾರೆ? ಇದಕ್ಕೆ ಕಾರಣ ಇಬ್ಬರ ನಡುವೆ ಅರಿತು ಬಾಳುವ ಗುಣ ಇಲ್ಲದೇ ಇರೋದು. 
 

Tap to resize

ಯಾವುದೇ ಸಂಬಂಧವನ್ನು ನಡೆಸಲು ಪ್ರೀತಿ, ವಾತ್ಸಲ್ಯ ಮತ್ತು ಗೌರವ ಬಹಳ ಮುಖ್ಯ, ಆದರೆ ವಿವಾಹಿತ ದಂಪತಿಗಳ ವಿಷಯಕ್ಕೆ ಬಂದಾಗ, ಇತರ ಕೆಲವು ವಿಷಯಗಳು ಮುಖ್ಯವಾಗುತ್ತವೆ. ನೀವು ಸಹ ಮದುವೆಯಾಗಲು ಹೊರಟಿದ್ದರೆ, ಅವರ ಬಗ್ಗೆ ತಿಳಿದುಕೊಳ್ಳಿ, ಇದು ಖಂಡಿತವಾಗಿಯೂ ಅದ್ಭುತ ವೈವಾಹಿಕ ಜೀವನಕ್ಕೆ (Married Life) ಸಹಾಯ ಮಾಡುತ್ತೆ. 
 

ಪರಸ್ಪರರಿಗಾಗಿ ಸಮಯವನ್ನು ಮೀಸಲಿಡಿ (spend quality time)
ಉತ್ತಮ ವೈವಾಹಿಕ ಜೀವನಕ್ಕಾಗಿ ಪರಸ್ಪರ ಸಮಯ ನೀಡುವುದು ಬಹಳ ಮುಖ್ಯ. ಅದು ಲವ್ ಮ್ಯಾರೇಜ್ (Love Marriage) ಆಗಿರಲಿ ಅಥವಾ ಅರೇಂಜ್ ಮ್ಯಾರೇಜ್ ಆಗಿರಲಿ. ಇದು ನಿಮಗೆ ಪರಸ್ಪರ ಹೆಚ್ಚು ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತದೆ. ಒಟ್ಟಿಗೆ ವಾಸಿಸುವಾಗ ಅನೇಕ ವಿಷಯಗಳಲ್ಲಿ ಸಂಘರ್ಷದ ಸಾಧ್ಯತೆ ಹೆಚ್ಚಾಗಿರುತ್ತೆ, ಆದ್ದರಿಂದ ನಿಮಗೆ ಸಮಯ ಸಿಕ್ಕಾಗ ಅವುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಹಿಡಿದರೆ, ದಾಂಪತ್ಯ ಸುಖಮಯವಾಗಿರುತ್ತೆ. 

ಮನೆಕೆಲಸಗಳನ್ನು ಹಂಚಿಕೊಳ್ಳಿ (Share duties)
ನೀವಿಬ್ಬರೂ ಕೆಲಸ ಮಾಡುತ್ತಿದ್ದರೆ, ಈ ಸಲಹೆ ನಿಮಗೆ ತುಂಬಾ ಉಪಯುಕ್ತವಾಗಿದೆ. ಸಂತೋಷದ ವೈವಾಹಿಕ ಜೀವನಕ್ಕಾಗಿ, ನೀವು ಮನೆಕೆಲಸಗಳನ್ನು ಸಹ ಹಂಚಿಕೊಳ್ಳಬೇಕು. ಇದರಿಂದ ಯಾರ ಮೇಲೆಯೂ ಕೆಲಸದ ಹೊರೆ ಬೀಳೋದಿಲ್ಲ. ಅಲ್ಲದೇ ಕೆಲಸವೂ ಬೇಗನೆ ಮುಗಿಯುತ್ತೆ.  ಹಲವಾರು ಸಮಸ್ಯೆಗಳಿಗೂ ಇದು ದಾರಿಯಾಗುತ್ತೆ.
 

ಎಕನಾಮಿಕ್ ಪ್ಲ್ಯಾನಿಂಗ್ (economic planning)
ದಾಂಪತ್ಯ ಜೀವನ ಎಂದ ಮೇಲೆ ಅಲ್ಲಿ ಹಣಕಾಸಿನ ಸಮಸ್ಯೆ ಇದ್ದೇ ಇರುತ್ತೆ. ಇದರಿಂದಾಗಿಯೇ ಇಬ್ಬರ ನಡುವೆ ಹೆಚ್ಚು ಮನಸ್ತಾಪ ಉಂಟಾಗುತ್ತೆ, ಆದ್ದರಿಂದ ಹಣದಿಂದಾಗಿ ನಿಮ್ಮ ಸಂಬಂಧವು ಹದಗೆಡುವುದನ್ನು ನೀವು ಬಯಸದಿದ್ದರೆ, ಫಿನಾನ್ಸ್ ಬಗ್ಗೆ ಇಬ್ಬರು ಕುರಿತು ಜೊತೆಯಾಗಿ ಪ್ಲ್ಯಾನ್ ಮಾಡಿ. 

ಕ್ಷಮಿಸುವ ಅಭ್ಯಾಸವನ್ನು ಕಲಿಯಿರಿ
ಸ್ವಲ್ಪ ಕೋಪ, ಜಗಳ ಎಲ್ಲವೂ ಸಾಮಾನ್ಯ. ಆದರೆ ಕ್ಷಮಿಸುವ ಅಭ್ಯಾಸವನ್ನು ಕಲಿಯಿರಿ ಇದರಿಂದ ಕೋಪ ತಾಪಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಸಾರಿ ಕೇಳೋದರಿಂದ ಅಥವಾ ಕ್ಷಮಿಸೋದರಿಂದ ಇಬ್ಬರ ನಡುವೆ ಹೆಚ್ಚು ಬಾಂಡಿಂಗ್ (Bonding) ಬೆಳೆಯುತ್ತೆ. 

ಫ್ಯಾಮಿಲಿಯನ್ನು ಗೌರವಿಸಿ (Respect Family)
ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ, ಅಲ್ಲಿ ಜಗಳವಾಗುವ ಎಲ್ಲಾ ಸಾಧ್ಯತೆಗಳಿರುತ್ತವೆ, ಆದರೆ ಈ ಜಗಳಗಳು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಲು ಬಿಡಬೇಡಿ. ನಿಮ್ಮ ಪತಿ ನಿಮ್ಮ ಹೆತ್ತವರನ್ನು ಗೌರವಿಸಬೇಕೆಂದು ನೀವು ಬಯಸಿದರೆ, ನೀವು ಸಹ ಅವರ ಕುಟುಂಬಕ್ಕೆ ಅದೇ ಗೌರವವನ್ನು ನೀಡಬೇಕು. 

Latest Videos

click me!