ಇದೊಂದು ಬಹಳ ಅಪರೂಪದ ಸನ್ನಿವೇಶ. ಅವರಿಬ್ಬರೂ ಹುಡುಗಿಯರೇ. ಹುಡುಗಿಯೇ ಬೇಕೆಂದು ಇಬ್ಬರೂ ಟಿಂಡರ್ ಆ್ಯಪ್‌ನಲ್ಲಿ ಒಬ್ಬರನ್ನೊಬ್ಬರು ಹುಡುಕಿಕೊಂಡರು, ಇಷ್ಟಪಟ್ಟರು, ವರ್ಷಗಳ ಕಾಲ ಪ್ರೀತಿಸಿದರು, ಇದೀಗ ವಿವಾಹಕ್ಕೆ ಇನ್ನೇನು ವಾರವಿದೆ ಎಂದಾಗ ಅವರಲ್ಲೊಬ್ಬಳು- ತಾನು ಪುರುಷನಾಗಬಯಸುತ್ತೇನೆ ಎಂದು ಹೇಳಿ ಮತ್ತೊಬ್ಬಳಿಗೆ ಶಾಕ್ ಕೊಟ್ಟಳು. ವಿವಾಹಕ್ಕೆ ವಾರವಿರುವಾಗ ಹುಡುಗಿಯ ಮುಖದಲ್ಲಿ ಗಡ್ಡ ಹುಟ್ಟಲು ಆರಂಭಿಸಿತು. ಹುಡುಗಿಯಾಗಿ ಕೈ ಹಿಡಿಯಬೇಕಾದವಳು ಗಂಡನಾಗುವುದಾಗಿ ಹೇಳಿ ಶಾಕ್ ನೀಡಿದಳು! ಏನಿದು ಕತೆ? ಇವರು ಯಾರು, ಈ ಟ್ವಿಸ್ಟ್ ಬಳಿಕ ಅವರ ಸಂಬಂಧಕ್ಕೆ ಹ್ಯಾಪಿ ಎಂಡಿಂಗ್ ಸಿಕ್ಕಿತೇ ಎಂಬುದನ್ನು ಈ ಫೋಟೋಗಳೇ ಹೇಳುತ್ತವೆ ನೋಡಿ...
ಕೆನಡಾದ ಚೇಸ್ ಮತ್ತು ಆ್ಯಲನ್ ಈ ಕತೆಯ ಪಾತ್ರಧಾರಿಗಳು. ಆಲ್ಬರ್ಟಾದ ನಿವಾಸಿಗಳಾದ ಇವರಿಗೆ ತಾವಿಬ್ಬರೂ ಲೆಸ್ಬಿಯನ್ ಎಂಬ ವಿಷಯ ತಿಳಿದಿದ್ದೇ ಡೇಟಿಂಗ್ ಆ್ಯಪ್‌ನಲ್ಲಿ ಗರ್ಲ್‌ಫ್ರೆಂಡ್‌ಗಾಗಿ ಹುಡುಕಿದರು.

210
2017ರಲ್ಲಿ ಇವರ ಸಂಬಂಧ ಆರಂಭವಾದಾಗ ಇಬ್ಬರೂ ಯುವತಿಯರೇ ಆಗಿದ್ದರು. ಇಬ್ಬರಿಗೂ ತನ್ನ ಜೀವನಸಂಗಾತಿ ಈಕೆ ಮಾತ್ರ ಆಗಲು ಸಾಧ್ಯ ಎನಿಸಿತ್ತು.

310
ಕಳೆದ ವರ್ಷ ಇಬ್ಬರೂ ವಿವಾಹವಾಗಲು ನಿರ್ಧರಿಸಿದರು. ಅದಕ್ಕಾಗಿ ಸಿದ್ಧತೆಗಳನ್ನೂ ಮಾಡಿಕೊಂಡರು.

410
ಇನ್ನೇನು ವಿವಾಹಕ್ಕೆ ವಾರವಿದೆ ಎಂದಾಗ ಚೇಸ್ ಆ್ಯಲನ್‌ಗೆ ಕರೆ ಮಾಡಿ ಶಾಕೊಂದನ್ನು ನೀಡಿದಳು.

510
ಇದರಿಂದ ಆ್ಯಲನ್ ತನ್ನ ಬಿಟ್ಟು ಹೋಗಬಹುದೆಂಬ ಭಯ ಚೇಸ್‌ದಾಗಿತ್ತು. ಆದರೆ ಹಾಗಾಗಲಿಲ್ಲ.

610
ತಾನು ಹುಡುಗಿಯ ದೇಹದಲ್ಲಿ ಹುಟ್ಟಿದ ಹುಡುಗ ಎಂದೂ, ಅದಕ್ಕಾಗಿಯೇ ತನಗೆ ಹುಡುಗಿಯರ ಮೇಲೆ ಆಸಕ್ತಿ ಇರುವುದೆಂದೆನಿಸುತ್ತಿದೆ ಎಂದಳು.

710
ಆ್ಯಲನ್ ಚೇಸ್‌ನನ್ನು ಅರ್ಥ ಮಾಡಿಕೊಂಡಳು. ಆತ ಗಂಡಾಗಿ ಪರಿವರ್ತನೆಯಾಗಲು ತಾನೂ ಬೆಂಬಲಕ್ಕೆ ನಿಂತಳು.

810
ಗರ್ಲ್‌ಫ್ರೆಂಡ್ ಆಗಿ ಬಂದಾಕೆ ಬಾಯ್‌ಫ್ರೆಂಡ್ ಆಗಿ ಆ್ಯಲನ್ ಕೈ ಹಿಡಿದಿದ್ದ.

910
ಇದೀಗ ಲಿಂಗ ಪರಿವರ್ತನೆಗೆ ಬೇಕಾದ ಹಾರ್ಮೋನ್ ತೆಗೆದುಕೊಳ್ಳುತ್ತಿರುವ ಚೇಸ್ ಮುಖದಲ್ಲಿ ಗಡ್ಡಮೀಸೆಗಳು ಕಾಣಿಸಿಕೊಳ್ಳುತ್ತಿವೆ.

1010
ಸಂಪೂರ್ಣ ಲಿಂಗ ಪರಿವರ್ತನೆಗೆ ಬೇಕಾದ ಶಸ್ತ್ರಕ್ರಿಯೆಗಳನ್ನೂ ಮಾಡಿಸಿಕೊಳ್ಳಲು ಆತ ಸಿದ್ಧನಾಗಿದ್ದಾನೆ. ತಮ್ಮ ಈ ಹ್ಯಾಪಿ ಎಂಡಿಂಗ್ ಸ್ಟೋರಿಯನ್ನು ಜೋಡಿಯು ಸೋಷ್ಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.