ಛತ್ರಪತಿ ಶಿವಾಜಿಯಿಂದ Gen Zಗಳು ಕಲಿಯಬೇಕಾದ 6 ಜೀವನ ಪಾಠಗಳು

Published : Feb 23, 2026, 11:58 PM IST

Chhatrapati Shivaji Maharaj: ಮರಾಠ ರಾಜರಾದ ಛತ್ರಪತಿ ಶಿವಾಜಿ ಮಹಾರಾಜರರಿಂದ ನಾವು ಕಲಿಯಬೇಕಾದ ವಿಷಯ ಬಹಳಷ್ಟಿದೆ. ಇವತ್ತು ಈ ಲೇಖನದ ಮೂಲಕ Gen Zಗಳು ಛತ್ರಪತಿ ಶಿವಾಜಿ ಮಹಾರಾಜರಿಂದ ಏನೆಲ್ಲಾ ಕಲಿಯಬೇಕು ಅನ್ನೋದನ್ನು ನೋಡೋಣ. 

PREV
16
ದೊಡ್ಡದಾಗಿ ಯೋಚಿಸಿ, ಸಣ್ಣದಾಗಿ ಶುರುಮಾಡಿ
  • ಛತ್ರಪತಿ ಶಿವಾಜಿ: 16ನೇ ವಯಸ್ಸಿನಲ್ಲಿ ಟೋರ್ನಾ ಕೋಟೆಯನ್ನು ವಶಪಡಿಸಿಕೊಂಡರು. ಇದು ಸ್ವರಾಜ್ಯದ ಕಡೆಗೆ ಶಿವಾಜಿಯ ಮೊದಲನೇ ಹೆಜ್ಜೆ. ಅವರು ಸಂಪನ್ಮೂಲಗಳಿಗಾಗಿ ಕಾಯಲಿಲ್ಲ ಬದಲಾಗಿ ಏನಿದೆಯೊ ಅದನ್ನೇ ಸಮರ್ಥವಾಗಿ ಬಳಕೆ ಮಾಡಿದರು.
  • Gen Z ಏನು ಕಲಿಯಬೇಕು: ಸರಿಯಾದ ಸಮಯ ಬರಲಿ ಎಂದು ಕಾಯಬೇಡಿ. ನೀವು ಎಲ್ಲಿದ್ದೀರೋ ಅಲ್ಲಿಂದಲೇ, ನಿಮ್ಮ ಬಳಿ ಏನಿದೆಯೋ ಅದರಿಂದಲೇ ಶುರು ಮಾಡಿ,
26
ಭಯ ಪಡಬೇಡಿ, ಆದರೆ ಸ್ಮಾರ್ಟ್ ಆಗಿರಿ
  • ಛತ್ರಪತಿ ಶಿವಾಜಿ: ಶತ್ರುಗಳ ಜೊತೆ ಎದುರಲ್ಲಿ ಮಾತ್ರ ಯುದ್ಧ ಮಾಡಿಲ್ಲ, ಗೆರಿಲ್ಲಾ ಯುದ್ಧದ ಮೂಲಕ ಬುದ್ಧಿವಂತಿಕೆಯಿಂದ ಶತ್ರುಗಳನ್ನು ಸೋಲಿಸಿದರು.
  • Gen Z ಏನು ಕಲಿಯಬೇಕು: ನಿಮ್ಮ ಕನಸುಗಳನ್ನು ಧೈರ್ಯದಿಂದ ನನಸಾಗಿಸಿ, ಅದಕ್ಕಾಗಿ ಸ್ಟಾರ್ಟರ್ಜಿ ಬಳಸಿ, ಭಾವನೆಗಳನ್ನು ಅಡ್ಡ ತರಬೇಡಿ.
36
ಹೊಸ ಮಾರ್ಗಗಳನ್ನು ಕಲಿಯಿರಿ
  • ಛತ್ರಪತಿ ಶಿವಾಜಿ: ಕರಾವಳಿ ರಕ್ಷಣೆ ಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಂಡು ಮರಾಠ ನೌಕಾ ದಳವನ್ನು ಸ್ಥಾಪಿಸಿದರು. ಜೊತೆಗೆ ತನ್ನ ಸೈನಿಕರಿಗೆ ಹಿಟ್ & ರನ್ ತಂತ್ರಗಳನ್ನು ಕಲಿಸಿದನು.
  • Gen Z ಏನು ಕಲಿಯಬೇಕು: ಜೀವನದಲ್ಲಿ ಮುಂದುವರೆಯಬೇಕು ಅಂದ್ರೆ, ಹೊಂದಿಕೊಳ್ಳೋದನ್ನು, ಹೊಸ ವಿಷಯಗಳನ್ನು ಕಲಿಯುವುದನ್ನು ರೂಢಿಸಿಕೊಳ್ಳಿ.
46
ಸಮಗ್ರತೆಯಿಂದ ಮುನ್ನಡೆಯಿರಿ
  • ಛತ್ರಪತಿ ಶಿವಾಜಿ : ಯುದ್ಧದ ಸಮಯದಲ್ಲೂ ಸಹ ಶಿವಾಜಿ ತಮ್ಮ ರಾಜ್ಯದ ಮಹಿಳೆಯರು ಮತ್ತು ನಾಗರೀಕರಿಗೆ ಗೌರವ ನೀಡಿದರು. ನಿಷ್ಠೆಯಿಂದಿದ್ದವರಿಗೆ ಸನ್ಮಾನ ಮಾಡಿ, ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದರು.
  • Gen Z ಏನು ಕಲಿಯಬೇಕು: ನಾಯಕತ್ವ ಅಂದ್ರೆ ಅಧಿಕಾರ ಅಲ್ಲ, ಇದು ನಂಬಿಕೆ, ನ್ಯಾಯ ಮತ್ತು ಮೌಲ್ಯದ ಸಂಯೋಜನೆಯೂ ಆಗಿದೆ.
56
ನಿಮ್ಮ ತಂಡವನ್ನು ನೀವೇ ಸೃಷ್ಟಿಸಿ
  • ಛತ್ರಪತಿ ಶಿವಾಜಿ : ಶಿವಾಜಿಯು ತನ್ನ ಸುತ್ತಲೂ ಅತ್ಯುತ್ತಮ ಸ್ನೇಹಿತರು ಮತ್ತು ಬುದ್ಧಿವಂತ ಸಲಹೆಗಾರರನ್ನು ನೇಮಿಸಿದರು. ಜನರಿಗೆ ಉದ್ಯೋಗ ಮತ್ತು ನಂಬಿಕೆ ನೀಡುವ ಮೂಲಕ ಅವರ ಸಬಲೀಕರಣ ಮಾಡಿದರು.
  • Gen Z ಏನು ಕಲಿಯಬೇಕು; ಯಶಸ್ಸು ಏಕಾಂಗಿ ಪಯಣ ಅಲ್ಲ, ಹಾಗಾಗಿ ನಿಮ್ಮ ಜನರನ್ನು ಹುಡುಕಿ ಜೊತೆಯಾಗಿ ಬೆಳೆಯಿರಿ.
66
ನಿಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮರೆಯಬೇಡಿ
  • ಛತ್ರಪತಿ ಶಿವಾಜಿ: ಆಯುರ್ವೇದ, ವೇದಿಕ್ ಸಂಪ್ರದಾಯ ಮತ್ತು ಎಲ್ಲಾ ನಂಬಿಕೆಗಳ ಮೇಲಿನ ಗೌರವವನ್ನು ಎತ್ತಿ ಹಿಡಿದರು. ಅಲ್ಲದೇ ಸ್ಥಳೀಯ ಭಾಷೆ ಮತ್ತು ಸಂಪ್ರದಾಯವನ್ನು ಪ್ರಚಾರ ಮಾಡಿದರು.
  • Gen Z ಏನು ಕಲಿಯಬೇಕು: ಆಧುನೀಕತೆ ಇರಲಿ, ಆದರೆ ನೀವು ಎಲ್ಲಿಂದ ಬಂದಿದ್ದೀರಿ ಅನ್ನೋದನ್ನು ಮರಿಬೇಡಿ. ಅಂದ್ರೆ ನಿಮ್ಮ ಮೂಲಕವನ್ನು ಮರೆಯವೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories