ಇಂಥ ಟೈಮಲ್ಲಿ ಗಂಡ ಅಥವಾ ಹೆಂಡ್ತಿ SORRY ಕೇಳಲೇಬಾರದು!

First Published | Dec 20, 2023, 5:35 PM IST

ಜಯಾ ಕಿಶೋರಿ ಅವರ ಮಾತುಗಳು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿರುತ್ತವೆ. ಯಾಕೆಂದರೆ ಅವರ ಮಾತುಗಳು ಜೀವನ ನಡೆಸಲು ದಾರಿ ನೀಡುತ್ತದೆ. ಇತ್ತೀಚೆಗೆ ಅವರು ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ.  ಇದರಲ್ಲಿ ದಂಪತಿಗಳು ಯಾವಾಗ ಪರಸ್ಪರ ಕ್ಷಮೆಯಾಚಿಸಬಾರದು ಎಂದು ಅವರು ಹೇಳಿದ್ದಾರೆ.  
 

ಗಂಡ ಮತ್ತು ಹೆಂಡತಿ ನಡುವೆ ಎಷ್ಟೇ ಪ್ರೀತಿ ಇದ್ದರೂ ಸಹ ಅವರ ನಡುವೆ ಒಂದಲ್ಲ ಒಂದು ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ನಡೆಯುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಅನೇಕ ಬಾರಿ ನಾವು ಇನ್ನೊಬ್ಬರ ಕೋಪವನ್ನು ನಮ್ಮ ಸಂಗಾತಿಯ ಮೇಲೆ ಹೊರತೆಗೆಯುತ್ತೇವೆ ಅಥವಾ ನಾವು ಹತಾಶೆಯಲ್ಲಿದ್ದರೆ, ನಾವು ಸಂಗಾತಿ ಮೇಲೆ ಕೆಟ್ಟದಾಗಿ ಕೂಗುತ್ತೇವೆ. ಆದಾಗ್ಯೂ, ನಮ್ಮ ಸಂಗಾತಿಯೊಂದಿಗೆ ಜಗಳವಾಡಿ (couple fight) ಅಥವಾ ವಾದಿಸಿ, ನಂತರ ಸಮಾಧಾನವಾದಾಗ ತಕ್ಷಣ ಕ್ಷಮೆಯಾಚಿಸುತ್ತೇವೆ ಎಂಬುದು ನಿಜ. 
 

ಅನೇಕ ಬಾರಿ, ದಂಪತಿಗಳು ಮಾತುಕತೆಯನ್ನು ಕೊನೆಗೊಳಿಸಿದ್ದಕ್ಕಾಗಿ ತಮ್ಮ ಸಂಗಾತಿಗೆ ಕ್ಷಮೆಯಾಚಿಸುತ್ತಾರೆ, ಆದರೆ ನಂತರ ಆ ಜಗಳವನ್ನು ಮತ್ತೆ ನೆನಪಿಸುತ್ತಾರೆ. ಈ ವಿಧಾನವು ಸರಿಯಾಗಿಲ್ಲ. ಕ್ಷಮೆ ಕೇಳಿ ಮತ್ತೆ ಜಗಳದ ಬಗ್ಗೆ ಮಾತನಾಡೋದಾದರೆ ಅಲ್ಲಿ ಮತ್ತೆ ಇಬ್ಬರ ನಡುವೆ ಕಲಹ ಇದ್ದೇ ಇರುತ್ತೆ. 
 

Latest Videos


ಪ್ರಸಿದ್ಧ ಕಥೆಗಾರ್ತಿ ಮತ್ತು ಪ್ರೇರಕ ಭಾಷಣಕಾರರಾಗಿರುವ ಜಯಾ ಕಿಶೋರಿ (jaya Kishori) ಅವರ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಕ್ಷಮೆಯಾಚಿಸಲು ಸರಿಯಾದ ಸಮಯವನ್ನು ಹೇಳಿದ್ದಾರೆ.  ಜಗಳ ಮಾಡಿದ ಕೂಡಲೇ ಸಾರಿ ಎಂದು ಹೇಳಬಾರದು, ಏಕೆಂದರೆ ಈ ಸಂದರ್ಭದಲ್ಲಿ ನಿಮ್ಮಿಬ್ಬರ ನಡುವೆ ಏನೂ ಸರಿಯಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ತಪ್ಪು ಮಾಡಿದ್ದೀರಿ ಎಂದು ನಿಮಗೆ ಯಾವಾಗ ಅನಿಸುತ್ತದೆಯೋ ಆವಾಗ ಸಾರಿ ಎಂದು ಕೇಳಬೇಕು ಎಂದು ಜಯಕಿಶೋರಿ ಹೇಳುತ್ತಾರೆ. 
 

ಯಾವಾಗ ಕ್ಷಮೆ ಕೇಳಬೇಕು? (When to ask sorry)
ಬೇಗನೆ ವಿವಾದವನ್ನು ಕೊನೆಗೊಳಿಸಲು ಜನರು ಪರಸ್ಪರ ಕ್ಷಮೆಯಾಚಿಸುವುದು ಬಹಳ ಸಾಮಾನ್ಯ ಸಮಸ್ಯೆ. ಆದರೆ ಸಾರಿ ಕೇಳಿದರೂ ಸಹ ಇನ್ನೂ ಅವರಿಬ್ಬರ ನಡುವೆ, ಜಗಳದ ಬಗ್ಗೆ ಕೋಪ, ಮುನಿಸು ಇದ್ದೇ ಇರುತ್ತದೆ. ಅಂತಹ ಜನರು ಮತ್ತೆ ಅದೇ ಜಗಳವನ್ನು ಕೆದಕಿ ಮತ್ತೆ ದೊಡ್ಡ ಜಗಳ ಮಾಡುವ ಸಾಧ್ಯತೆ ಇದೆ. 
 

ಒಂದು ವೇಳೆ ನೀವು ಜಗಳವಾಡಿದ ಕೂಡಲೇ ಆ ವ್ಯಕ್ತಿಯನ್ನು ಕ್ಷಮಿಸಲು ಸಾಧ್ಯವಾಗದಿದ್ದರೆ, ಸಂಗಾತಿ ಬಳಿ ಸಾರಿ ಎಂದು ಕೇಳೋದೆ ಬೇಡ. ನಿಮ್ಮ ಹೃದಯದಲ್ಲಿ ನೋವು ಇದ್ದರೆ, ವಿಷಯಗಳು ಸುಧಾರಿಸುವವರೆಗೆ ಕ್ಷಮಿಸಿ ಎಂದು ಹೇಳಬೇಡಿ.. ಅದು ಸ್ಪಷ್ಟವಾಗುವವರೆಗೆ ನೀವು ಕ್ಷಮೆಯಾಚಿಸಬಾರದು (asking sorry). ಮನಸ್ತಾಪ ಮುಗಿದು, ನಿಮಗೆ ನೀವು ಮಾಡಿದ್ದು ತಪ್ಪು ಎಂದು ಅನಿಸಿದಾಗ ಮಾತ್ರ ಸಾರಿ ಕೇಳಿ. 

ಅರೋಗ್ಯಕರ ಸಂಭಾಷಣೆ
ನಿಮ್ಮ ತಪ್ಪನ್ನು ನೀವು ನಿಜವಾಗಿಯೂ ಅರಿತುಕೊಂಡಿದ್ದರೆ, ಮೊದಲು ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ಕ್ಷಮೆಯಾಚಿಸಲು ಸಿದ್ಧರಾಗಿರಿ. ಇದು ನಿಮ್ಮ ನಡುವೆ ಹೆಚ್ಚಿನ ತಪ್ಪು ತಿಳುವಳಿಕೆಗಳನ್ನು ಸೃಷ್ಟಿಸುವುದಿಲ್ಲ. ಒಂದೆಡೆ ಕುಳಿತು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಈ ಸಮಯದಲ್ಲಿ ನೀವಿಬ್ಬರೂ ಆರೋಗ್ಯಕರವಾಗಿ ಮಾತನಾಡಬೇಕು ಎಂಬುದನ್ನು ನೆನಪಿನಲ್ಲಿಡಿ, ಅಲ್ಲಿ ಅಹಂ ನಡುವೆ ಬರಬಾರದು ಅನ್ನೋದನ್ನು ನೆನಪಿಡಿ.

ನಾನು ಕೋಪಗೊಳ್ಳಬಾರದಿತ್ತು
ಜನರು ಕ್ಷಮೆಯಾಚಿಸುತ್ತಾರೆ ಆದರೆ ಜಗಳದ ಸಮಯದಲ್ಲಿ ಅವರು ಪರಸ್ಪರ ಹೇಳಿದ ಕೆಟ್ಟ ಪದಗಳ ಬಗ್ಗೆ ಮಾತನಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜಗಳವಾಡುವಾಗ ನೀವು ಹೆಚ್ಚು ಕೋಪಗೊಂಡಿದ್ದೀರಿ ಮತ್ತು ಕೆಟ್ಟ ಮಾತುಗಳನ್ನು ಹೇಳಿದ್ದಕ್ಕೆ ಕ್ಷಮಿಸಿ, ನಾನು ಹಾಗೆ ಹೇಳಬಾರದಿತ್ತು, ಅನ್ನೋದನ್ನು ಮನಸ್ಸು ಬಿಚ್ಚಿ ಹೇಳಿ ಸಾರಿ ಕೇಳಿ. ಇದರಿಂದ ಎಲ್ಲಾ ಸಮಸ್ಯೆ ದೂರವಾಗುತ್ತದೆ. 

click me!