ಗಂಡ ಹೆಂಡತಿ ಸಕ್ರಿಯ ಲೈಂಗಿಕತೆ ಕ್ಯಾನ್ಸರ್ ಸೇರಿ ಹಲವು ಅಪಾಯಕ್ಕೆ ಔಷಧಿ, ಮಿಲನದ ಆರೋಗ್ಯ ಗುಟ್ಟು

Published : Feb 12, 2026, 01:28 PM IST

ಗಂಡ ಹೆಂಡತಿ ಸಕ್ರಿಯ ಲೈಂಗಿಕತೆ ಕ್ಯಾನ್ಸರ್ ಸೇರಿ ಹಲವು ಅಪಾಯಕ್ಕೆ ಔಷಧಿ, ಮಿಲನದ ಹಿಂದಿನ ರಹಸ್ಯ, ಆರೋಗ್ಯದ ಗುಟ್ಟನ್ನು ವೈದ್ಯ ಜೆಫ್ರಿ ಗ್ಲಾಡೆನ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಗುಟ್ಟು ತಿಳಿದರೆ ಬೆಡ್‌ ರೂಂನಿಂದ ಹೊರಬರವು ಸಾಧ್ಯತೆ ಕಡಿಮೆ. 

PREV
16
ಗಂಡ ಹೆಂಡತಿ ಮಿಲನದಲ್ಲಿದೆ ಆರೋಗ್ಯ ಗುಟ್ಟು

ಸಂಸಾರದಲ್ಲಿ ಲೈಂಗಿಕತೆಗೆ ವಿಶೇಷ ಸ್ಥಾನವಿದೆ. ಗಂಡ ಹೆಂಡತಿಯ ಮಿಲನ ಸುಖ ಸಂಸಾರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಮದುವೆಯಾಗಿ ಕೆಲ ವರ್ಷಗಳ ಬಳಿಕ ಸತಿ ಪತಿಗಳ ಬದುಕಿನ ಒತ್ತಡ, ಮಕ್ಕಳ ಜವಾಬ್ದಾರಿ ಸೇರಿದಂತೆ ಹಲವು ಕಾರಣಗಳಿಂದ ಲೈಂಗಿಕತ ಆಸಕ್ತಿ ಕಡಿಮೆಯಾಗುತ್ತೆ ಅಥವಾ ವಿರಳವಾಗುತ್ತೆ. ಡಾಕ್ಟರ್ ಜೆಫ್ರಿನ್ ಗ್ಲಾಡಿನ್ ಲೈಂಗಿಕತೆ ಹಾಗೂ ಆರೋಗ್ಯದ ನಡುವಿನ ಹಲವು ಗಟ್ಟುಗಳನ್ನು ಹೇಳಿದ್ದಾದರೆ. ಪುರುಷ ಹಾಗೂ ಮಹಿಳೆಯರಲ್ಲಿ ಲೈಂಗಿಕತೆ ಆರೋಗ್ಯದ ಮೇಲೆ ಬೀರುವ ಉತ್ತಮ ಪರಿಣಾಮದ ಕುರಿತು ವೈಜ್ಞಾನಿಕವಾಗಿ ವಿವರಿಸಿದ್ದಾರೆ.

26
ಲೈಂಗಿಕತೆಯಲ್ಲಿ ಜೀವಕೋಶಗಳ ಆರೋಗ್ಯ

ವೈದ್ಯ ಜೆಫ್ರಿನ್ ಪ್ರಕಾರ ದೈಹಿಕ ಅನ್ಯೋನ್ಯತೆ ಮೋಜಿನ, ಮನರಂಜನೆಯ, ಆಸಕ್ತಿಯ ಭಾಗವಲ್ಲ, ಅದು ನಮ್ಮ ಜೀವಕೋಶಗಳ ಆರೋಗ್ಯ ಹಾಗೂ ಆಯಸ್ಸು ಹೆಚ್ಚಿಸುವ ಜೈವಿಕ ಅಗತ್ಯತೆ ಎಂದಿದ್ದಾರೆ. ಜವಾಬ್ದಾರಿಗಳು, ಒತ್ತಡ ಹೆಚ್ಚಾದಾಗ, ವಯಸ್ಸು ದಾಟುತ್ತಿದ್ದಂತೆ ದೈಹಿಕ ಅನ್ಯೋನ್ಯತೆ ಅನಿವಾರ್ಯವಲ್ಲ ಎಂದು ಭಾವಿಸುತ್ತಾರೆ. ಆದರೆ ನಿಮ್ಮ ಮನಸ್ಸು ಹೀಗೆ ಹೇಳಿದರೂ ದೇಹದ ಜೀವಕೋಶಗಳು ಒಪ್ಪುವುದಿಲ್ಲ. ಕಾರಣ ಲೈಂಗಿಕತೆಯ ಭಾವ ಹಾಗೂ ಕ್ರಿಯೆಯ ಪ್ರಮುಖ ಆಕ್ಸಿಟೋಸಿನ್ (Oxytocin) ಹಾರ್ಮೋನ್ ಉತ್ಪತ್ತಿ ದೇಹದ ಉತ್ತಮ ಆರೋಗ್ಯಕ್ಕೂ ಕಾರಣವಾಗಲಿದೆ.

36
ಲೈಂಗಿಕ ಕ್ರಿಯೆಯ ವೇಳೆಯ ಹಾರ್ಮೋನ್ ಗುಟ್ಟು

ಆಕ್ಸಿಟೋಸಿನ್ ಹಾರ್ಮೋನ್ ಉತ್ಪತ್ತಿಯಿಂದ ದೇಹದ ಟೆಲೋಮಿಯರ್‌ಗಳನ್ನು (Telomeres) ವೃದ್ಧಿಸುತ್ತದೆ. ಇದರಿಂದ ದೇಹದ ಉರಿಯೂತವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಲೈಂಗಿಕ ಕ್ರಿಯೆಗೆ ಸಹಕಾರಿಯಾಗುವ ರಕ್ತನಾಳಗಳಿಂದ ದೇಹದ ಮೆದುಳು ಾಗೂ ಹೃದಯವನ್ನು ವಯಸ್ಸಾಗದಂತೆ ತಡೆಯುತ್ತದೆ. ಮೆದುಳು ಹಾಗೂ ಹೃದಯದ ಆರೋಗ್ಯ ಉತ್ತಮವಾಗಿದ್ದರೆ ಆಯಸ್ಸು ಹೆಚ್ಚಾಗುತ್ತದೆ, ಆರೋಗ್ಯ ಉತ್ತಮವಾಗುತ್ತದೆ.

46
ಲೈಂಗಿಕತೆಯಿಂದ ಆಯಸ್ಸು ವೃದ್ಧಿ

ಗಂಡ ಹೆಂಡತಿ ನಡುವಿನ ಲೈಂಗಿಕತೆ ಕಡಿಮೆಯಾದರೆ, ವಿರಳವಾದರೆ ನಿಮ್ಮನ್ನು ಯೌವನವಾಗಿರುವ ಜೈವಿಕ ಹಾಗೂ ನೈಸರ್ಗಿಕ ರಕ್ಷಣಾ ಕವಚವನ್ನು ಕಳೆದುಕೊಳ್ಳುತ್ತೀರಿ. ಆಕಸ್ಮಿಕ, ಯಾವತ್ತೋ ಒಂದು ಬಾರಿ ಬದಲು ಪ್ರತಿ ದಿನ ಗಂಡ ಹೆಂಡತಿ ಲೈಂಗಿಕತೆಯಲ್ಲಿ ತೊಡಗಿಸಿಕೊಂಡರೆ ಸಹಜವಾಗಿ ಅವರ ಜೈವಿಕ ವಯಸ್ಸು ಕಡಿಮೆಯಾಗುತ್ತದೆ. ಯೌವನವಾಗಿರುತ್ತೀರಿ ಎಂದು ವೈದ್ಯ ಜೆಫ್ರಿನ್ ವೈಜ್ಞಾನಿಕವಾಗಿ ತಿಳಿಸಿದ್ದಾರೆ.

56
ಸಕ್ರಿಯೆ ಲೈಂಗಿಕತೆಯಿಂದ ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ

40 ದಾಟುತ್ತಿದ್ದಂತೆ ಪುರುಷರದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯಗಳು ಕಾಣಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಪ್ರತಿ ದಿನ ಲೈಂಗಿಕತೆಯಲ್ಲಿ ತೊಡಗಿರುವ ಪುರುಷನಿಗೆ ಪ್ರೋಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ. ದೀರ್ಘ ಆಯಸ್ಸು ಲಭ್ಯವಾಗುತ್ತದೆ. ಇನ್ನು ವಯಸ್ಸಾಗುತ್ತಿದ್ದಂತೆ ಮರೆವು, ಶಕ್ತಿ ಕುಂದುವುದು ಎಲ್ಲವೂ ಹಾರ್ಮೋನ್‌ಗಳ ಕೊರತೆ ಅಥವಾ ಉತ್ಪದಿ ಕುಂದುವಿಕೆಯಿಂದ ಸಂಭವಿಸುತ್ತದೆ. ಈ ಹಾರ್ಮೋನ್ ಉತ್ಪತ್ತಿಗೆ ಸಕ್ರಿಯೆ ಲೈಂಗಿಕತೆ ನೆರವಾಗಲಿದೆ.

66
ದಂಪತಿಗಳ ಬೆಡ್ ರೂಂ ಸಮಯ ಹೆಚ್ಚಿಸಿ

ದಂಪತಿಗಳು ಬೆಡ್ ರೂಂನ್ನು ಕೇವಲ ಮಲಗುವ, ವಿಶ್ರಾಂತಿಯ ಕೋಣೆಯನ್ನಾಗಿ ಮಾತ್ರ ಉಪಯೋಗಿಸಿದರೆ ದೇಹಗಲ್ಲಿ ನೈಟ್ರಿಕ್ ಆಕ್ಸೈಡ್ ಕೊರತೆಯಾಗಲಿದೆ. ಬದಲಾಗಿ ಪ್ರತಿ ದಿನ ದೈಹಿಕ ಅನ್ಯೋನ್ಯತೆಯಿಂದ ಕಳೆದರೆ ಜೀವಕೋಶಗಳ ರಕ್ಷಣೆ, ಹಾರ್ಮೋನ್ ಉತ್ಪತ್ತಿಯಾಗುತ್ತದೆ, ನೈಟ್ರಿಕ್ ಆಕ್ಸೈಡ್‌ಗಳಿಂದ ರಕ್ತನಾಳಗಳು ಸಡಿಲಗೊಂಡು ರಕ್ತ ಸಂಚಾರ ಸುಗಮಗೊಳ್ಳುತ್ತದೆ. ಲೈಂಗಿಕತೆಯನ್ನು ದಂಪತಿಗಳು ಇಷ್ಟ ಕಷ್ಟದ ವಿಷವಾಗಿ ಮಾತ್ರ ನೋಡಬಾರದು, ಅದು ಆರೋಗ್ಯದ ಭಾಗವಾಗಿ ನೋಡಬೇಕು ಎಂದು ವೈದ್ಯ ಜೆಫ್ರಿನ್ ಹೇಳಿದ್ದಾರೆ.

ದಂಪತಿಗಳ ಬೆಡ್ ರೂಂ ಸಮಯ ಹೆಚ್ಚಿಸಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories