ಸೆಕ್ಸ್ ಮಾಡೋ ಮುನ್ನ ಇದನ್ನೆಲ್ಲಾ ತಿಳ್ಕೊಂಡಿದ್ರೆ ಒಳ್ಳೇದು

First Published | Jul 31, 2022, 12:50 PM IST

ಮೊದಲ ಬಾರಿಗೆ ಸೆಕ್ಸ್ ನಲ್ಲಿ ತೊಡಗುವವರು ಹಲವಾರು ತಪ್ಪುಗಳನ್ನು ಮಾಡ್ತಾರೆ. ಅನೇಕ ಜನರು ವರ್ಷಗಳಲ್ಲಿ ಅದೇ ತಪ್ಪುಗಳನ್ನು ಪುನರಾವರ್ತಿಸುತ್ತಾರೆ. ಈ ಕಾರಣದಿಂದಾಗಿ ಅವರ ಲೈಂಗಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಇಂತಹ ತಪ್ಪುಗಳಿಂದ ಲೈಂಗಿಕ ಜೀವನವನ್ನು ಎಂಜಾಯ್ ಮಾಡಲು ಸಾಧ್ಯವಾಗೋದಿಲ್ಲ. ಹಾಗಾದ್ರೆ ಏನು ಮಾಡಬೇಕು?

ಸೆಕ್ಸ್ ಮಾಡುವಾಗ ಜನರು ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ಇದರಿಂದಾಗಿ ಅವರ ಲೈಂಗಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಿಸಬೇಕಾಗಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ರೂಪಿಸುವ ಮೊದಲು ಕೆಲವು ಪ್ರಮುಖ ಕೆಲಸವನ್ನು ಮಾಡುವುದು ಅಗತ್ಯ. ಆವಾಗ ಮಾತ್ರ ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ಸೋಮಾರಿತನ ಮತ್ತು ಅಜಾಗರೂಕತೆಯಿಂದಾಗಿ ಸಾಮಾನ್ಯವಾಗಿ ಕಡೆಗಣಿಸಲ್ಪಡುವ ವಿಷಯಗಳನ್ನು ನಾವು ಇಲ್ಲಿ ಚರ್ಚಿಸಲಿದ್ದೇವೆ. ಈ ಸಮಸ್ಯೆ ದೀರ್ಘಕಾಲದಿಂದ ಕಂಡು ಬಂದರೂ ಅದರ ಬಗ್ಗೆ ಹೆಚ್ಚಿನ ಜನರು ಗಂಭೀರವಾಗಿ ಪರಿಗಣಿಸೋದಿಲ್ಲ. ಹಾಗಾದ್ರೆ ಬನ್ನಿ, ಸೆಕ್ಸ್ ಸಮಯದಲ್ಲಿ ಏನು ಮಾಡಬೇಕು ಅನ್ನೋದನ್ನು ತಿಳಿಯಿರಿ. 

Tap to resize

ಮಲಗುವ ಮೊದಲು ಮೂತ್ರವಿಸರ್ಜನೆ ಮಾಡೋದು
ಸೆಕ್ಸ್ ಮಾಡಿದ ಬಳಿಕ ಮೂತ್ರವಿಸರ್ಜನೆ (urination) ಮಾಡುವುದು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಸಹ ಅಗತ್ಯವಾಗಿದೆ. ಏಕೆಂದರೆ ಖಾಸಗಿ ಅಂಗಗಳನ್ನು ಆರೋಗ್ಯಕರವಾಗಿಡಲು ಇದನ್ನು ಮಾಡುವುದು ಅಗತ್ಯ. ಇದನ್ನು ಮಾಡದಿದ್ದರೆ, ಮೂತ್ರದ ಸೋಂಕು ಕಾಡಬಹುದು. ಆದ್ದರಿಂದ ಸೆಕ್ಸ್ ಮಾಡಿದ ನಂತರ ಮೂತ್ರವಿಸರ್ಜನೆ ಮಾಡೋದನ್ನು ಮರೆಯಬೇಡಿ. 

ಸೆಕ್ಸ್ ಗೆ ಮೊದಲು ತಿನ್ನುವುದು
ಸೆಕ್ಸ್ ಗೆ ಮೊದಲು ತಿನ್ನಬಹುದು. ಆದರೆ ಸೆಕ್ಸ್ ಮತ್ತು ತಿನ್ನುವುದರ ನಡುವೆ ಸಮಯದ ಅಂತರವನ್ನು ಕಾಯ್ದುಕೊಳ್ಳಬೇಕು. ಆಹಾರ ಸೇವಿಸಿದ ತಕ್ಷಣ ಸೆಕ್ಸ್ ಮಾಡ್ಬೇಡಿ, ಏಕೆಂದರೆ ಇದು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಗಂಭೀರ ಕಾಯಿಲೆಯನ್ನು ಉಂಟುಮಾಡಬಹುದು. ಆದ್ದರಿಂದ ಊಟ ಮಾಡಿದ ಕನಿಷ್ಠ 2 ಗಂಟೆಗಳ ನಂತರ ಸೆಕ್ಸ್ ಮಾಡಿ. ಇದನ್ನು ಮಾಡದ ಪುರುಷರು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಸಂಭೋಗದ ನಂತರ ಏನು ತಿನ್ನಬೇಕು ಮತ್ತು ಕುಡಿಯಬೇಕು?
ಲೈಂಗಿಕ ಕ್ರಿಯೆಯ ನಂತರ ಸ್ವಲ್ಪ ವೀಕ್ ಆಗಬಹುದು. ಆದರೆ ನೀವು ತಕ್ಷಣವೇ ಏನು ತಿನ್ನಬೇಡಿ. ಸ್ವಲ್ಪ ಸಮಯದ ನಂತರ, 1-2 ಲೋಟ ನೀರು ಕುಡಿಯಿರಿ. ನೀವು ಹಾಲು ಸಹ ಕುಡಿಯಬಹುದು. ಬಾಳೆಹಣ್ಣು ಅಥವಾ ಇತರ ಹಣ್ಣುಗಳನ್ನು ತಿನ್ನುವ ಬಗ್ಗೆ ಯೋಚಿಸುತ್ತಿದ್ದರೆ, ಅವುಗಳನ್ನು ತಿನ್ನುವ ಬಗ್ಗೆ ಯೋಚಿಸಬೇಡಿ. ಏಕೆಂದರೆ ರಾತ್ರಿಯಲ್ಲಿ ಹಣ್ಣುಗಳನ್ನು ತಿನ್ನುವುದು ಸರಿಯಲ್ಲ. ನೀವು ಪ್ರೋಬಯಾಟಿಕ್ಸ್ (curd) ಇರುವ ಆಹಾರ ಸೇವಿಸಿದ್ರೆ ಉತ್ತಮ.

ಕಾಂಡೋಮ್ ಬಳಸಿದ ನಂತರ ಅದನ್ನು ಏನು ಮಾಡಬೇಕು?
ಅನೇಕ ಪುರುಷರು ಸೆಕ್ಸ್ ನಂತರ ಕಾಂಡೋಮ್ (condom) ಅನ್ನು ಹಾಸಿಗೆಯ ಕೆಳಗೆ ಅಥವಾ ಪಕ್ಕದಲ್ಲಿ ಇಡುತ್ತಾರೆ. ಆದರೆ ಈ ವಿಧಾನ ತಪ್ಪಾಗಿದೆ. ನೀವು ಅದನ್ನು ಮಾಡಬಾರದು. ಈ ರೀತಿಯಾಗಿ ನೀವು ನಿಮಗೆ ಮಾತ್ರವಲ್ಲದೆ ನಿಮ್ಮ ಮಕ್ಕಳು ಅಥವಾ ಇತರ ಸದಸ್ಯರಿಗೂ ಸೋಂಕು ತಗುಲಿಸಬಹುದು. ಅವುಗಳನ್ನು ಡಸ್ಟ್ ಬಿನ್ ಗೆ ಹಾಕೋದು ಉತ್ತಮ. 

ಒಳಉಡುಪು ಧರಿಸುವುದೇ? ಅಥವಾ ಬೇಡವೇ
ಸೆಕ್ಸ್ ಸಮಯದಲ್ಲಿ ಅನೇಕ ಜನರು ಒಳಉಡುಪನ್ನು (innerwear) ತೆಗೆದುಹಾಕುತ್ತಾರೆ, ಆದರೆ ನಂತರ ಅದೇ ಒಳಉಡುಪನ್ನು ಧರಿಸುತ್ತಾರೆ. ಅದನ್ನು ಮಾಡಬಾರದು. ಏಕೆಂದರೆ ಫೋರ್ ಪ್ಲೇ ಸಮಯದಲ್ಲಿ ಒಳಉಡುಪುಗಳನ್ನ ಧರಿಸುತ್ತೀರಿ. ಆ ಹೊತ್ತಿಗೆ, ಖಾಸಗಿ ಭಾಗಗಳಿಂದ ಹಾರ್ಮೋನ್ಸ್ ಬಿಡುಗಡೆಯಾಗಿರುತ್ತೆ, ಆದ್ದರಿಂದ ನೀವು ಆ ಬಟ್ಟೆಗಳನ್ನು ಧರಿಸಿ ಮಲಗಬಾರದು.

ಸಂಗಾತಿಯೊಂದಿಗೆ ಮಲಗುವುದು
ಅನೇಕ ಜನರು ಸೆಕ್ಸ್ ಬಳಿಕ ತಮ್ಮ ಸಂಗಾತಿಯನ್ನು ಬಿಟ್ಟು ನಿದ್ರೆಗೆ ಜಾರುತ್ತಾರೆ. ಈ ರೀತಿ ಮಾಡೋದು ತಪ್ಪು. ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಗಾತಿಯ ಜೊತೆಯಾಗಿ ಮಲಗಿ ಎಂದು ಎಕ್ಸ್ ಪರ್ಟ್ ಗಳು ಹೇಳುತ್ತಾರೆ. 

ನೈಟ್ ಡ್ರೆಸ್ ಗಳನ್ನು ವಾಶ್ ಮಾಡದೆ ಬಳಸಬೇಡಿ
ಸಂಭೋಗದ ಸಮಯದಲ್ಲಿ ನೀವು ನಿಮ್ಮ ಬಟ್ಟೆಗಳನ್ನು ತೆಗೆದರೂ, ಮರುದಿನ ಆ ಉಡುಪುಗಳನ್ನು ಧರಿಸಿ, ಬೆಡ್ ರೂಮ್ ಗೆ ಹೋಗಬೇಡಿ. ಮೂಡ್ ಹುಟ್ಟಿಸುವಲ್ಲಿ ಡ್ರೆಸ್ ದೊಡ್ಡ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಮರುದಿನ ವಾಶ್ ಮಾಡಿದಂತಹ ನೈಟ್ ಡ್ರೆಸ್ ಧರಿಸಿ.

Latest Videos

click me!