ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ …
ಆರೋಗ್ಯಕರ ಆಹಾರ - ಒಟ್ಟಾರೆ ಆರೋಗ್ಯದಂತೆಯೇ, ಆರೋಗ್ಯಕರ ಆಹಾರವೂ ಸಹ ಲೈಂಗಿಕ ಆರೋಗ್ಯಕ್ಕೆ ಬಹಳ ಮುಖ್ಯ. ನೀವು ಉತ್ತಮ ಆಹಾರ ತೆಗೆದುಕೊಳ್ಳದಿದ್ದರೆ, ಲೈಂಗಿಕ ಜೀವನ ಉತ್ತಮಗೊಳ್ಳಲು ಅಥವಾ ಅದನ್ನು ಆನಂದಿಸಲು ಸಾಧ್ಯವಾಗೋದಿಲ್ಲ. ಆದ್ದರಿಂದ, ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಮುಖ್ಯ. ನಿಮ್ಮ ಆಹಾರದಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ ಗಳು, ಒಮೆಗಾ -3, ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಸೇರಿಸಬೇಕು.