ವಾಸ್ತವವಾಗಿ, ಚಾಣಕ್ಯ ನೀತಿಯ ಪ್ರಕಾರ, ವೈವಾಹಿಕ ಜೀವನವನ್ನು (married life) ಸಂತೋಷವಾಗಿಡಲು, ಗಂಡಂದಿರು ತಮ್ಮ ಹೆಂಡತಿಯೊಂದಿಗೆ ಕೆಲವು ವಿಷ್ಯಗಳನ್ನು ಮರೆತು ಕೂಡ ಹಂಚಿಕೊಳ್ಳಬಾರದು. ಆ ವಿಷ್ಯಗಳು ಯಾವುವು ಗೊತ್ತಾ ನಿಮಗೆ?
ಸಹಜವಾಗಿ, ವೈವಾಹಿಕ ಸಂಬಂಧದ ತಂತಿಗಳು ಸತ್ಯ ಮತ್ತು ನಂಬಿಕೆಯ ಮೇಲೆ ನಿಂತಿವೆ. ಅದಕ್ಕಾಗಿಯೇ ಅನೇಕ ಜನರು ಸಾಮಾನ್ಯವಾಗಿ ಯಾರಿಗೂ ತಿಳಿದಿರದ ಎಲ್ಲಾ ರಹಸ್ಯಗಳನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಹೀಗೆ ಮಾಡೋದ್ರಿಂದ ಸಂಬಂಧ ಉಳಿಯಲು ಸಾಧ್ಯವಾಗುತ್ತಾ?
ಚಾಣಕ್ಯ ನೀತಿಯ ಪ್ರಕಾರ, ಗಂಡಂದಿರು ತಮ್ಮ ಸಂಗಾತಿಯೊಂದಿಗೆ ಜೀವನದ ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಳ್ಳೋದನ್ನು ತಪ್ಪಿಸಬೇಕು. ಹಾಗಾದರೆ ಆ ವಿಷಯಗಳು ಯಾವುವು? ಮತ್ತು ಅದನ್ನು ಯಾಕೆ ಹಂಚಿಕೊಳ್ಳಬಾರದು ಅನ್ನೋದನ್ನು ತಿಳಿಯೋಣ.
ಅವಮಾನಗಳ ಬಗ್ಗೆ ಹೇಳ್ಬೇಡಿ:
ಚಾಣಕ್ಯನ ನೀತಿಯ ಪ್ರಕಾರ, ನಿಮಗೆ ಆದ ಅವಮಾನದ (Humiliation) ಬಗ್ಗೆ ನೀವು ಎಂದಿಗೂ ನಿಮ್ಮ ಹೆಂಡತಿಯೊಂದಿಗೆ ಹಂಚಿಕೊಳ್ಳಬಾರದು. ಹಿಂದೆ ನಡೆದ ಯಾವುದೇ ಅವಮಾನದ ಬಗ್ಗೆ ಗಂಡ ಎಂದಾದರೂ ಹೆಂಡತಿಗೆ ಹೇಳಿದರೆ, ಆಗ ಹೆಂಡತಿ ಕೋಪದಿಂದ ಗಂಡನನ್ನು ನಿಂದಿಸುವ ಸಾಧ್ಯತೆ ಕೂಡ ಇದೆ.
ವೀಕ್ ನೆಸ್ ಬಗ್ಗೆ ಹೇಳಬೇಡಿ
ಚಾಣಕ್ಯನ ನೀತಿಯ ಪ್ರಕಾರ, ಗಂಡಂದಿರು (Husbands) ತಮ್ಮ ದೌರ್ಬಲ್ಯಗಳನ್ನು (Weakness) ಮರೆಯಬಾರದು ಮತ್ತು ಅದನ್ನು ಹೆಂಡತಿಯರೊಂದಿಗೆ ಹಂಚಿಕೊಳ್ಳಬಾರದು. ಹಾಗೆ ಮಾಡುವಾಗ, ಹೆಂಡತಿಯರು ಅನೇಕ ಬಾರಿ ತಮ್ಮ ಗಂಡಂದಿರ ದೌರ್ಬಲ್ಯವನ್ನು ನೆನಪಿಟ್ಟುಕೊಂಡು, ಅದನ್ನು ತಮಗೆ ಬೇಕಾದ ಹಾಗೆ ಬದಲಾಯಿಸುವ ಸಾಧ್ಯತೆ ಇದೆ.
ಪೂರ್ಣ ಆದಾಯವನ್ನು ಹೇಳಬೇಡಿ
ಕೆಲವು ಗಂಡಂದಿರು ಹೆಚ್ಚಾಗಿ ತಮ್ಮ ಹೆಂಡತಿಯರನ್ನು ನಂಬುತ್ತಾರೆ ಮತ್ತು ಅವರ ಸಂಪಾದನೆಯ (Earnings) ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. ಆದರೆ ಯಾವತ್ತೂ ಪತ್ನಿ ಜೊತೆ ಸಂಪೂರ್ಣ ಆದಾಯದ ಗುಟ್ಟನ್ನು ಯಾವತ್ತೂ ಹೇಳಲೇಬೇಡಿ.
ಆದಾಯದ ಬಗ್ಗೆ ಪತ್ನಿ ಬಳಿ ಹೇಳಿದಾಗ ಹೆಚ್ಚಿನ ಹೆಂಡತಿಯರು ತಮ್ಮ ಗಂಡನ ಆದಾಯವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ ಮತ್ತು ಗಂಡನ ವ್ಯರ್ಥ ಖರ್ಚನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಪತಿಯು ಹೆಂಡತಿ ಬಳಿ ತನ್ನ ಸಂಪಾದನೆ ಬಗ್ಗೆ ಹೇಳಬಾರದು.
ದಾನದ ಬಗ್ಗೆ ಹೇಳಬೇಡಿ
ಅಂದಹಾಗೆ, ದಾನದ (donation) ನಿಜವಾದ ಪ್ರಯೋಜನವು ಅದನ್ನು ರಹಸ್ಯವಾಗಿಡುವುದರಿಂದ ಮಾತ್ರ ಬರುತ್ತೆ. ಆದರೆ ಅನೇಕ ಬಾರಿ ಪತಿಯು ದಾನದ ಬಗ್ಗೆ ಹೆಂಡತಿಗೆ ಹೇಳುತ್ತಾನೆ. ಇದರ ಪರಿಣಾಮವಾಗಿ, ದಾನದ ಮಹತ್ವವನ್ನು ಕಳೆದುಕೊಳ್ಳುತ್ತೆ, ಅಷ್ಟೇ ಅಲ್ಲ, ಜಗಳ ಮಾಡೋವಾಗ ದಾನದ ಬಗ್ಗೆ ಹೇಳಿ ಹಣ ವ್ಯರ್ಥ ಮಾಡಿದ್ದಕ್ಕೆ ಹೀಯಾಳಿಸುತ್ತಾರೆ.