Second Marriage: 40 ರ ನಂತರದ 2 ನೇ ಮದುವೆಯಿಂದ ಏನನ್ನು ನಿರೀಕ್ಷಿಸಬಹುದು?

Suvarna News   | Asianet News
Published : Dec 18, 2021, 04:07 PM IST

ಮೊದಲ ಮದುವೆ ಯಶಸ್ವಿಯಾಗದವರಿಗೆ ಎರಡನೇ ಮದುವೆಯ (second marriage) ಬಗ್ಗೆ ಎರಡನೇ ಆಲೋಚನೆಗಳನ್ನು ಹೊಂದಿರುತ್ತಾರೆ, ವಿಶೇಷವಾಗಿ 40 ವರ್ಷ ವಯಸ್ಸಿನ ನಂತರ. ಆದರೆ ಅದು ನಿಮ್ಮನ್ನು ಹೆದರಿಸಲು ಬಿಡಬೇಡಿ. ಎರಡನೇ ಮದುವೆಯಲ್ಲಿ ನಿಮ್ಮ ಸಂತೋಷ ಕಂಡುಕೊಳ್ಳುವುದು 40 ರ ಹರೆಯದಲ್ಲಿ ಸಂಪೂರ್ಣವಾಗಿ ಸಾಧ್ಯ ಮತ್ತು ಅದ್ಭುತವಾಗಿದೆ! 

PREV
17
Second Marriage: 40 ರ ನಂತರದ  2 ನೇ ಮದುವೆಯಿಂದ ಏನನ್ನು ನಿರೀಕ್ಷಿಸಬಹುದು?

ಎರಡನೇ ಮದುವೆ ಎಂಬ ಹೊಸ ಪ್ರಯಾಣವನ್ನು ಉತ್ತಮವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡಲು, 40 ರ ನಂತರ  ಎರಡನೇ ಮದುವೆಯಿಂದ ನಿರೀಕ್ಷಿಸಬಹುದಾದ ಕೆಲವು ವಿಷಯಗಳನ್ನು ಪಟ್ಟಿ ಮಾಡಿದ್ದೇವೆ. ಅವುಗಳನ್ನು ನೀವು ಅರ್ಥ ಮಾಡಿಕೊಂಡರೆ ಎರಡನೇ ಮದುವೆಯ ಜೀವನ ಉತ್ತಮವಾಗಿರುತ್ತದೆ. 

27

ಹೋಲಿಕೆಗಳು: ಹೊಸ ಸಂಗಾತಿಯನ್ನು (new partner) ಹಳೆಯ ಸಂಗಾತಿಗೆ ಹೋಲಿಸುವುದನ್ನು ನೀವು ಕಾಣಬಹುದು. ಆದಾಗ್ಯೂ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿರುತ್ತಾರೆ ಎಂದು ತಿಳಿಯಿರಿ ಮತ್ತು ನಿಮ್ಮ ಹೊಸ ಸಂಗಾತಿಯು ಮೊದಲಿನವರಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಬಹುದು, ಧನಾತ್ಮಕ ರೀತಿಯಲ್ಲಿ ಯೋಚನೆ ಮಾಡಿ. 

37

ಜವಾಬ್ದಾರಿಗಳು : ನಿಮ್ಮ ಮದುವೆಯು ಇನ್ನು ಮುಂದೆ ಯುವ ಮತ್ತು ಸ್ವಾಭಾವಿಕವಾಗಿರುವುದಿಲ್ಲ. ನಿಮ್ಮ ಕ್ರಿಯೆಗಳ ಬಗ್ಗೆ ಅಜಾಗರೂಕರಾಗಿರಬಾರದು. ನೀವು ಯೋಚಿಸುವ ಮತ್ತು ಮಾಡುವದಕ್ಕೆ ನೀವು ಜವಾಬ್ದಾರಿಯನ್ನು (responsibility) ತೆಗೆದುಕೊಳ್ಳಬೇಕಾಗುತ್ತದೆ. ಈಗ ಯಶಸ್ವಿ ದಾಂಪತ್ಯವನ್ನು ಹೊಂದಲು ಅವಕಾಶವಿದೆ, ಅದನ್ನು ಸ್ವೀಕರಿಸಿ.
 

47

ಸಂಗಾತಿ ಜೊತೆ ಮಾತನಾಡಿ : ನಿಮ್ಮ 40 ರ ಪ್ರಾಯದಲ್ಲಿ, ಪ್ರಾಮಾಣಿಕತೆಯನ್ನು ಬಲವಾಗಿ ಪ್ರತಿಪಾದಿಸಬಹುದು ಆದರೆ ನಿಮ್ಮ ಸಂಗಾತಿಯ ಮುಂದೆ ನಿಮ್ಮ ಮಾತುಗಳನ್ನು ತುಂಬ ಸ್ಟ್ರೈಟ್ ಫಾರ್ವರ್ಡ್ (straight forward)ಆಗಿ ಹೇಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ದಾಂಪತ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಂಗಾತಿಯೊಂದಿಗೆ ಶಾಂತವಾಗಿ ಮಾತನಾಡಿ.

57

ವ್ಯತ್ಯಾಸಗಳು: ಇಬ್ಬರ ಅಭಿಪ್ರಾಯಗಳು, ದೃಷ್ಟಿಕೋನಗಳು ಮತ್ತು ಆದ್ಯತೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಆದರೆ ಇದು ನಿಮ್ಮ ಬಂಧ ಮತ್ತು ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ. ಮತ್ತು ಆದ್ದರಿಂದ, ಈ ವ್ಯತ್ಯಾಸಗಳನ್ನು ಸೆಲೆಬ್ರೇಟ್ ಮಾಡುವ ಅಗತ್ಯವಿದೆ!

67

ರಾಜಿ ಮಾಡಿಕೊಳ್ಳುವುದು : ಮದುವೆಯಲ್ಲಿ ಒಂದು ಅಥವಾ ಎರಡು ರಾಜಿ ಮಾಡಿಕೊಳ್ಳಬೇಕಾದರೆ ಪರವಾಗಿಲ್ಲ. ನೀವು ಮತ್ತು ನಿಮ್ಮ ಸಂಗಾತಿಯು (partner) ಯಾವುದೇ ಸಮಸ್ಯೆಗಳ ಬಗ್ಗೆ ವಾದಿಸಿದರೆ ಮತ್ತು ಜಗಳವಾಡಿದರೆ, ಪರಸ್ಪರ ಕ್ಷಮಿಸುವ ಮೂಲಕ ಸಮಸ್ಯೆ ಬಗೆಹರಿಸಿ. ಇದರಿಂದ ದಾಂಪತ್ಯ ಉತ್ತಮವಾಗಿರುತ್ತದೆ. 

77

ಲೈಂಗಿಕತೆಯ ಬಗ್ಗೆ ಮಾತನಾಡುವುದು : ನಲವತ್ತರ ಬಳಿಕ ಲೈಂಗಿಕ ಆಸಕ್ತಿಗಳು ಕೆಲವೊಮ್ಮೆ ಕಡಿಮೆಯಾಗಿಯೂ ಇರಬಹುದು. ಆದುದರಿಂದ ಈ ಬಗ್ಗೆ ಸಂಗಾತಿ ಜೊತೆಯಾಗಿ ಕುಳಿತು ಮಾತನಾಡಿಕೊಂಡರೆ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

Read more Photos on
click me!

Recommended Stories