ಕಾಫಿ ವಿತ್ ಕರಣ್ ಟಾಕ್ ಶೋದ 12ನೇ ಎಪಿಸೋಡ್ ಪ್ರಸಾರವಾಗಿದ್ದು, ಈ ಶೋಗೆ ಬಾಲಿವುಡ್‌ನ ಹಿರಿಯ ನಟಿಯರಾದ ನೀತು ಕಪೂರ್ ಹಾಗೂ ಜೀನತ್ ಅಮನ್ ಅವರು ಈ ಬಾರಿ ಅತಿಥಿಯಾಗಿ ಆಗಮಿಸಿದ್ದರು.
ಈ ಶೋದಲ್ಲಿ ನೀತು ಹಾಗೂ ಜೀನತ್ ಇಬ್ಬರು ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನೀತು ತಮ್ಮ ಪತಿ ರಿಷಿ ಕಪೂರ್ ಬಗೆಗಿನ ಹಲವು ಶಾಕಿಂಗ್ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನೀತು ಹಾಗೂ ರಿಷಿ ಕಪೂರ್, ನಟ ರಣ್‌ಬೀರ್ ಹಾಗೂ ರಿಧಿಮ ಕಪೂರ್ ಪೋಷಕರಾಗಿದ್ದಾರೆ.
ಲ್ಯುಕೇಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು 2020ರಲ್ಲಿ ತೀರಿಕೊಂಡಿದ್ದರು ಈ ಟಾಕ್ ಶೋದಲ್ಲಿ ಪತಿ ಹಾಗೂ ಲೆಜೆಂಡರಿ ನಟ ರಿಷಿ ಬಗ್ಗೆ ಮಾತನಾಡಿದ ನೀತು ತಾವು ಇಬ್ಬರು ನ್ಯೂಯಾರ್ಕ್‌ನಲ್ಲಿ ಜೊತೆಯಾಗಿ ಕಳೆದ ಸಮಯವನ್ನು ನೆನಪಿಸಿಕೊಂಡರು. ಅಲ್ಲಿ ರಿಷಿಯವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಮಯ ಬಹಳ ಕಷ್ಟಕರವಾಗಿತ್ತು. ತಾನು ಕಷ್ಟದ ಜೀವನವನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ ಎಂದ ನೀತು ಹೇಳಿದ್ದಾರೆ.
nನಾನು ಕಷ್ಟದ ದಿನಗಳನ್ನು ನೆನೆಯಲು ಜಾಸ್ತಿ ಇಷ್ಟಪಡಲ್ಲ, ನಾನು ನಮ್ಮ ಸಂಬಂಧದ ಉತ್ತಮ ದಿನಗಳನ್ನು ನೆನಪಿಟ್ಟುಕೊಳ್ಳಲು ಇಷ್ಟಪಡುವೆ. ನ್ಯೂಯಾರ್ಕ್‌ನ ಆ ದಿನಗಳು ತುಂಬಾ ಕಷ್ಟದ ವಿಚಾರಗಳಾಗಿದ್ದವು. ಆದರೆ ಅದು ನಮ್ಮ ಸಂಬಂಧದ ವಿಷಯದಲ್ಲಿ ಬಹಳ ಒಳ್ಳೆಯ ದಿನಗಳಾಗಿದ್ದವು ಎಂದು ನೀತು ಹೇಳಿದ್ದಾರೆ.
ಇದೇ ವೇಳೆ ಮಕ್ಕಳೊಂದಿಗ ಪತಿಯ ಒಡನಾಟ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡ ನೀತು, ನಿಮಗೆ ತಿಳಿದಂತೆ ಚಿಂಟು ಜೀ(ರಿಷಿ ಕಪೂರ್) ತುಂಬಾ ಪ್ರೀತಿಯ ವ್ಯಕ್ತಿ. ಅವರಲ್ಲಿ ತುಂಬಾ ಪ್ರೀತಿ ಇತ್ತು. ಆದರೆ ಅದನ್ನು ಯಾವತ್ತೂ ಅವರು ಮಕ್ಕಳು ಹಾಗೂ ಸ್ನೇಹಿತರ ಮೇಲೆ ತೋರಿಸಲೇ ಇಲ್ಲ.
ವಿಶೇಷವಾಗಿ ನನ್ನೊಂದಿಗೆ ಹಾಗೂ ನನ್ನ ಮಕ್ಕಳೊಂದಿಗೆ ಅವವರು ಬಹಳ ದೊಡ್ಡ ವಿಚಾರದಂತೆ ಇದ್ದರು. ಅವರ್ಯಾವತ್ತೂ ಮಕ್ಕಳೊಂದಿಗೆ ಮನಬಿಚ್ಚಿ ಬೆರೆತಿರಲಿಲ್ಲ, ರಣ್‌ಬೀರ್ ಹಾಗೂ ರಿದ್ದಿಮಾಗೆ ಅವರು ಯಾವತ್ತೂ ಸ್ನೇಹಿತರಾಗಿರಲಿಲ್ಲ, ಆದರೆ ಕೊನೆ ದಿನಗಳಲ್ಲಿ ಅವರು ತುಂಬಾ ಬದಲಾಗಿದ್ದರು ಎಂದು ನೀತು ನೆನಪು ಮಾಡಿಕೊಂಡಿದ್ದಾರೆ
ನ್ಯೂಯಾರ್ಕ್‌ನಲ್ಲಿ ಪತಿ ರಿಷಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದ ಸಮಯವನ್ನು ನೆನೆದ ನೀತು, ಆ ಸವಾಲಿನ ಕ್ಷಣಗಳ ಮಧ್ಯೆಯೂ ಅಲ್ಲಿ ಕೆಲ ಒಳ್ಳೆಯ ಕ್ಷಣಗಳಿದ್ದವು.
ಆ ವರ್ಷ ಅವರು ನಮ್ಮೊಂದಿಗೆ ತುಂಬಾ ಚೆನ್ನಾಗಿ ಬೆರೆಯುತ್ತಿದ್ದರು. ಮಕ್ಕಳೊಂದಿಗೆ ಖುಷಿಯಿಂದ ಮಾತನಾಡುತ್ತಿದ್ದರು. ನಾವು ಕಷ್ಟದ ಮಧ್ಯೆಯೂ ಒಳ್ಳೆಯ ಸಮಯವನ್ನು ಹೊಂದಿದ್ದೆವು ಎಂದು ಹೇಳಿಕೊಂಡಿದ್ದಾರೆ.
ನಟ ರಣ್‌ಬೀರ್ ಕಪೂರ್ ಕೂಡ ಅಪ್ಪನೊಂದಿಗೆ ಅಂತ ಉತ್ತಮ ಒಡನಾಟ ಹೊಂದಿಲ್ಲದಿರುವ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಇಬ್ಬರ ಮಧ್ಯೆ ಲೆಕ್ಕವಿಲ್ಲದಷ್ಟು ಕಿತ್ತಾಟಗಳಿದ್ದವು. ಇಬ್ಬರು ಆಗಾಗ ತಮ್ಮ ಮಧ್ಯೆ ಉತ್ತಮ ಒಡನಾಟವಿಲ್ಲವೆಂಬುದನ್ನು ತೋರಿಸಿಕೊಂಡಿದ್ದರು.
ಸಿನಿಮಾವೊಂದರ ಪ್ರಚಾರ ಕಾರ್ಯಕ್ರಮದಲ್ಲೂ ನಟ ರಣಬೀರ್ ಈ ವಿಚಾರದ ಬಗ್ಗೆ ಮಾತನಾಡಿದ್ದರು. ಅವರು ಎಲ್ಲಾ ಕಡೆ ಪ್ರಯಾಣಿಸುತ್ತಿದ್ದರು. ಅವರ ಹಾಗೂ ನಮ್ಮ ಮಧ್ಯೆ ಆತ್ಮೀಯತೆ ಇರಲಿಲ್ಲ, ಅವರೊಂದಿಗೆ ಕುಳಿತು ಹರಟೆ ಹೊಡೆಯಲು ಸಾಧ್ಯವಾಗಲಿಲ್ಲ, ಮತ್ತು ಆ ವಿಚಾರಕ್ಕೆ ನಾನು ಇಂದಿಗೂ ವಿಷಾದ ಪಡುತ್ತೇನೆ. ಬಹುಶಃ ನಾನು ಅವರೊಂದಿಗೆ ಸ್ನೇಹಿತನಾಗಿ ಇರಬಹುದಿತ್ತೇನೋ ಎಂದು ನನಗೆ ಅನಿಸುತ್ತಿದೆ.
ಅವರೊಂದಿಗೆ ನಾನು ಹೆಚ್ಚೆಚ್ಚು ವಿಚಾರಗಳನ್ನು ಹಂಚಿಕೊಳ್ಳಬಹುದಿತ್ತೇನೋ ಎಂದು ಅನಿಸುತ್ತಿದೆ. ನಾನು ಅವರನ್ನು ಗೌರವಿಸುತ್ತೇನೆ ಆದರೆ ನಾವು ಯಾವತ್ತೂ ಸ್ನೇಹಿತರಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ರಣ್‌ಬೀರ್