Chankaya Niti: ಪತ್ನಿಯಾದವಳು ಗಂಡನಿಗೆ ಈ ಮೂರು ವಾಕ್ಯವನ್ನು ಎಂದಿಗೂ ಹೇಳಲೇಬಾರದು

Published : May 07, 2026, 05:09 PM IST

ಚಾಣಕ್ಯ ನೀತಿಯ ಪ್ರಕಾರ, ಸುಖಿ ದಾಂಪತ್ಯಕ್ಕಾಗಿ ಪತ್ನಿಯು ತನ್ನ ಪತಿಗೆ ಕೆಲವು ಮಾತುಗಳನ್ನು ಹೇಳಬಾರದು. ಗಂಡನ ಪೌರುಷವನ್ನು ಪ್ರಶ್ನಿಸುವುದು, ಬೇರೆಯವರೊಂದಿಗೆ ಹೋಲಿಸುವುದು ಮತ್ತು ಬೇರೆಯವರನ್ನು ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದು ಸಂಬಂಧದಲ್ಲಿ ಬಿರುಕು ಮೂಡಿಸಬಹುದು.

PREV
16
ಜಗಳ ಸರ್ವೇ ಸಾಮಾನ್ಯ

ಗಂಡ-ಹೆಂಡತಿ ನಡುವೆ ಜಗಳ ಆಗುವುದು ಸರ್ವೇ ಸಾಮಾನ್ಯ. ಆದರೆ ಜಗಳದ ಭರದಲ್ಲಿಯೋ ಅಥವಾ ಸುಖಾಸುಮ್ಮನೆ ತಮಾಷೆಗೋ ಆಡುವ ಒಂದೇ ಒಂದು ಮಾತು, ದಾಂಪತ್ಯ ಜೀವನವನ್ನೇ ಬುಡಮೇಲು ಮಾಡಬಲ್ಲುದು. ಮಾತು ಆಡಿದ ಮೇಲೆ ಮುಗಿಯಿತು, ಮುತ್ತು ಒಡೆದ ಮೇಲೆ ಮುಗಿಯಿತು ಎಂದು ಹಿರಿಯಲು ಹೇಳಿರುವುದು ಸುಮ್ಮನೇ ಅಲ್ಲ.

26
ಕೋಪ, ತಮಾಷೆಯ ಮಾತು

ಇದೇ ಕಾರಣಕ್ಕೆ ಎಷ್ಟೇ ಕೋಪ ಇದ್ದರೂ ಅಥವಾ ತಮಾಷೆಯ ಮೂಡ್​ನಲ್ಲಿ ಇದ್ದರೂ ಕೆಲವೊಮ್ಮೆ ಕೆಲವು ಶಬ್ದಗಳು ಗಂಡನಿಗೋ ಅಥವಾ ಹೆಂಡತಿಗೋ ಕೋಪ ತರಿಸಬಹುದು. ಅವರ ಇಗೋ ಹರ್ಟ್​ ಆಗಬಹುದು, ಇದರಿಂದ ಸಂಬಂಧವೇ ಹಾಳಾಗಬಹುದು.

36
ಚಾಣಕ್ಯ ನೀತಿಯಲ್ಲಿ ಏನಿದೆ

ಇದೇ ಕಾರಣಕ್ಕೆ ಚಾಣಕ್ಯ ನೀತಿಯಲ್ಲಿ ಪತ್ನಿಯಾದವಳು ಗಂಡನಿಗೆ ಎಂದಿಗೂ ಈ ಮೂರು ಮಾತನ್ನು ಹೇಳಲೇಬಾರದು ಎಂದು ಉಲ್ಲೇಖಿಸಲಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಗೌರವ ಉಳಿಸಿಕೊಳ್ಳಲು, ಗಂಡ-ಹೆಂಡತಿಯ ನಡುವೆ ಕೆಲವು ಮಾತುಗಳನ್ನು ಆಡದಿರುವುದು ಉತ್ತಮ ಎನ್ನುವುದು ಇದರಲ್ಲಿ ತಿಳಿಸಲಾಗಿದೆ. ಹಾಗಿದ್ದರೆ ಆ ಮೂರು ಮಾತುಗಳು ಯಾವುದು ಎಂದು ನೋಡೋಣ:

46
ನೀನು ಗಂಡಸಾ ಕೇಳುವುದು

ಮೊದಲನೆಯದ್ದು ನೀನು ಗಂಡಸಾ ಎನ್ನುವುದು. ಗಂಡಸು, ಗಂಡಸ್ತನ ಎನ್ನುವುದು ಪುರುಷನಿಗೆ ಅಹಂ ಮಾತಾಗಿರುತ್ತದೆ. ನೀನು ಗಂಡಸೇ ಎಂದು ಪ್ರಶ್ನಿಸಿದರೆ ಅದು ಬೇರೆ ಬೇರೆ ಸ್ವರೂಪವನ್ನು ಪಡೆಯುವ ಮೂಲಕ, ಆತನ ಅಹಂಗೆ ಧಕ್ಕೆ ತರುತ್ತದೆ. ನೀವು ಕೆಲವೊಮ್ಮೆ ಈ ಮಾತನ್ನು ತಮಾಷೆಗೆ ಹೇಳಿರಬಹುದು. ಆದರೆ ಆ ಕ್ಷಣದಲ್ಲಿ ಆತ ಅದನ್ನು ತಮಾಷೆ ಎಂದು ತೆಗೆದುಕೊಂಡರೂ ಇದು ದೀರ್ಘಕಾಲದಲ್ಲಿ ಸಂಬಂಧದ ಮೇಲೆ ಬಿರುಕು ಮೂಡುತ್ತದೆ. ಆದ್ದರಿಂದ ಯಾವತ್ತಿಗೂ ನೀನೊಬ್ಬ ಗಂಡಸಾ ಎಂದು ಪ್ರಶ್ನಿಸಲೇಬಾರದು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.

56
ಅವನನ್ನು ಮದ್ವೆಯಾಗಿದ್ರೆ...

ಎರಡನೆಯದ್ದು, ನಾನು ನಿಮ್ಮ ಜೊತೆ ಅಲ್ಲದೇ ಬೇರೆಯವರ ಜೊತೆ ಮದ್ವೆಯಾಗಿದ್ದರೆ ತುಂಬಾ ಚೆನ್ನಾಗಿರುತ್ತಿದೆ ಎನ್ನುವ ಮಾತು. ಈ ಮಾತನ್ನು ಸಾಮಾನ್ಯವಾಗಿ ಕೋಪದ ಭರದಲ್ಲಿ ಹೇಳುವುದು ಇದೆ. ಆದರೆ ಇದು ಗಂಡಸರ ಇಗೋ ಹರ್ಟ್​ ಮಾಡುತ್ತದೆ. ತಾನು ಇವಳಿಗಾಗಿ ಇಷ್ಟೆಲ್ಲಾ ಮಾಡುತ್ತಿದ್ದರೂ, ಈ ರೀತಿಯಾಗಿ ಹೇಳುತ್ತಿದ್ದಾಳಲ್ಲ ಎನ್ನಿಸುವುದು ಉಂಟು. ಇದು ಕೇವಲ ಗಂಡಸರಿಗೆ ಮಾತ್ರವಲ್ಲ, ಗಂಡನಾದವ ಹೆಂಡತಿಗೆ ಹೇಳಿದ್ರೂ ಹೀಗೆಯೇ ಆಗುವುದು ಉಂಟು. ಆದ್ದರಿಂದ ಪತಿ-ಪತ್ನಿ ಇಬ್ಬರೂ ಈ ಮಾತನ್ನು ತಮಾಷೆಗಾದರೂ ಹೇಳಬಾರದು ಎನ್ನುತ್ತದೆ ಚಾಣಕ್ಯ ನೀತಿ.

66
ಅವನನ್ನು ನೋಡಿ ಕಲಿಯಿರಿ

ಇನ್ನು. ಬೇರೆಯವರೊಂದಿಗೆ ಹೋಲಿಕೆ ಮಾಡುವುದು. ಬೇರೆಯವರ ಗಂಡ ಹೀಗಿದ್ದಾನೆ, ನನ್ನ ಸ್ನೇಹಿತೆ ಗಂಡ ಹಾಗಿದ್ದಾನೆ, ಪಕ್ಕದ ಮನೆಯವರನ್ನು ನೋಡಿ ಕಲಿಯಿರಿ, ಎಷ್ಟು ಒಳ್ಳೆಯವನಿದ್ದಾನೆ ನೋಡಿ ಅವನು.. ನೀವು ನೋಡಿದ್ರೆ ಹೀಗೆ ಎಂದು ಹೋಲಿಕೆ ಮಾಡುವುದು. ಇದು ಪುರುಷರ ಆತ್ಮಾಭಿಮಾನಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ ಅಪ್ಪಿ-ತಪ್ಪಿಯೂ ಇದನ್ನು ಹೇಳಬಾರದು ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories