ಸಂಗಾತಿಯನ್ನು ಉಳಿಸಿಕೊಳ್ಳಲು ಯಾವಾಗಲೂ ಯಾರು ಹಿಂದೇಟು ಹಾಕಲ್ಲ. ಇಬ್ಬರ ನಡುವೆ ಪ್ರೀತಿ ಇದ್ದರೂ ಕೆಲವೊಮ್ಮೆ ಮನಸ್ತಾಪಗಳು ಬರಬಹುದು. ಇಂತಹ ಸಮಯದಲ್ಲಿ ಇಬ್ಬರಲ್ಲಿಯೂ ನೂರಾರು ಆಲೋಚನೆಗಳು ಬರಬಹುದು. ಈ ವೇಳೆ ಅಪ್ಪಿತಪ್ಪಿಯೂ ನಿಮ್ಮ ಸಂಗಾತಿಯಲ್ಲಾಗುವ ಈ ಐದು ಬದಲಾವಣೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.
1.ಕಾಲ್ಮೆಸೇಜ್ ನಿರ್ಲಕ್ಷ್ಯ
ನಿಮ್ಮ ಪಾರ್ಟನರ್ ನೀವು ಮಾಡುವ ಫೋನ್ ಕಾಲ್ ಅಥವಾ ಮೆಸೇಜ್‌ಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ರೆ ಆತ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ/ಳೆ ಎಂದರ್ಥ. ನಿಮ್ಮ ಜೊತೆಗಿನ ಸಂಬಂಧದಲ್ಲಿ ಸಂಗಾತಿಗೆ ಯಾವುದೇ ಆಸಕ್ತಿ ಮತ್ತು ಉತ್ಸಾಹವಿಲ್ಲ ಎಂದರ್ಥ.
2.ಸುಳ್ಳು ಹೇಳುವುದು
ರಿಲೇಶನ್‌ಶಿಪ್‌ನಲ್ಲಿದ್ದಾಗ ಇಬ್ಬರ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಒಂದು ವೇಳೆ ಸಂಗಾತಿ ನಿಮಗೆ ಸುಳ್ಳು ಹೇಳುತ್ತಿರೋದು ಗಮನಕ್ಕೆ ಬಂದರೆ, ಸಂಬಂಧ ಹೆಚ್ಚು ದಿನ ಮುಂದುವರಿಯಲ್ಲ ಎಂಬುದರ ಸುಳಿವು ಆಗಿದೆ. ಈ ಸಮಯದಲ್ಲಿ ಸಂಬಂಧವನ್ನು ಮುಂದುವರಿಸಬೇಕಾ ಅಥವಾ ಬೇಡವೇ ಎಂಬುದರ ಬಗ್ಗೆ ನೀವು ದೃಢವಾದ ನಿರ್ಧಾರಕ್ಕೆ ಬರಬೇಕು. ಸುಳ್ಳು ಹೇಳುವುದು ಅಂದ್ರೆ ಖಾಸಗಿತನವನ್ನು ರಹಸ್ಯವಾಗಿರಿಸೋದು ಎಂದರ್ಥ.
3.ಪದೇ ಪದೇ ಜಗಳ
ಕೆಲವೊಮ್ಮೆ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿರುತ್ತವೆ. ಇದಕ್ಕೆ ಯಾವುದೇ ಕಾರಣ ಇರಲ್ಲ. ಕಾರಣವಿಲ್ಲದೇ ನಿಮ್ಮೊಂದಿಗೆ ಮುನಿಸಿಕೊಳ್ಳುವ ಸಂಗಾತಿಯನ್ನು ಹೊಂದಿದ್ದರೆ, ಈ ಸಂಬಂಧದ ಬಗ್ಗೆ ನೀವು ಆಳವಾಗಿ ಯೋಚಿಸಬೇಕು. ಜಗಳಕ್ಕೆ ನಿಮ್ಮಿಬ್ಬರ ಆಲೋಚನೆಗಳು, ಆಚಾರ ವಿಚಾರಗಳು ಭಿನ್ನವಾಗಿರಬಹುದು. ಇಂಥಹ ಸಮಯದಲ್ಲಿ ಜೊತೆಯಾಗಿ ಕುಳಿತು ಮಾತನಾಡಬೇಕು.
4.ಮಾಜಿ ಗೆಳತಿಗೆಳೆಯನ ನೆನಪು
ನಿಮ್ಮ ಸಂಗಾತಿ ತನ್ನ ಎಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇದು ಗಂಭೀರ ವಿಷಯವಾಗಿರುತ್ತದೆ. ಆತ/ಅವನು ನಿಮ್ಮನ್ನು ತನ್ನ ಮಾಜಿ ಸಂಗಾತಿಯೊಂದಿಗೆ ಹೋಲಿಕೆ ಮಾಡುತ್ತಿರುವ ಸುಳಿವು. ಇಂತಹ ಹೋಲಿಕೆ ಮಾಜಿ ಸಂಗಾತಿಯತ್ತ ಆಕರ್ಷಿತರಾಗಿರುವ ಸುಳಿವು ನೀಡುತ್ತದೆ.
5.ನಡವಳಿಕೆಯಲ್ಲಿ ವ್ಯತ್ಯಾಸ
ಸಂಗಾತಿ ಬೇರೆಯವರೊಂದಿಗೆ ಒಂದು ರೀತಿ, ನಿಮ್ಮೊಂದಿಗೆ ಬೇರೆ ರೀತಿ ವರ್ತನೆ ಮಾಡುತ್ತಿದ್ದರೆ ಆತ ತನ್ನ ಅಸಲಿ ಮುಖವನ್ನು ಮರೆಮಾಚುತ್ತಿದ್ದಾನೆ ಎಂದರ್ಥ. ಇಂತಹ ವರ್ತನೆ ವಂಚನೆಯ ಪ್ರೀತಿಯೂ ಆಗಿರಬಹುದು. ಹಾಗಾಗಿ ಎಚ್ಚರಿಕೆಯಿಂದಿರಬೇಕು.