ಹುಡುಗಿ ದೃಷ್ಟಿಯಲ್ಲಿ ಒಳ್ಳೆಯವರಾಗಬೇಕೆಂದು ಹೋಗಿ ಈ ತಪ್ಪು ಮಾಡ್ಬೇಡಿ

Published : Oct 16, 2022, 02:04 PM IST

ಹುಡುಗೀರ ದೃಷ್ಟಿಯಲ್ಲಿ ಚೆನ್ನಾಗಿ ಕಾಣಬೇಕೆಂದು ಯಾರೂ ಬಯಸೋದಿಲ್ಲ ಹೇಳಿ.  ಹೆಚ್ಚಿನ ಹುಡುಗರು ಇದನ್ನೇ ಬಯಸುತ್ತಾರೆ. ವಿಶೇಷವಾಗಿ, ಪುರುಷರು ತಮ್ಮ ಗೆಳತಿ ಅಥವಾ ಸಂಗಾತಿಯ ದೃಷ್ಟಿಯಲ್ಲಿ ಉತ್ತಮರಾಗಲು ಏನೇನೋ ಮಾಡ್ತಾರೆ. ಆದರೆ ಇದೆಲ್ಲಾ ಆರಂಭದಲ್ಲಿ ಉತ್ತಮವಾಗಿದೆ ಎಂದು ತೋರುತ್ತದೆ. ಆದರೆ ನಂತರ, ಅವರು ತಮ್ಮ ಈ ಅಭ್ಯಾಸಕ್ಕೆ ಬೇಸರ ವ್ಯಕ್ತಿಪಡಿಸ್ತಾರೆ. ಆದರೆ ನಂತರ ಪಶ್ಚಾತ್ತಾಪಪಡುವುದರಿಂದ ಏನಾಗುತ್ತದೆ, ಏಕೆಂದರೆ, ಅಷ್ಟೊತ್ತಿಗಾಗಲೇ ನಿಮ್ಮ ಸಂಗಾತಿ ನಿಮ್ಮನ್ನ ಸರಿಯಾಗಿಯೇ ಯೂಸ್ ಮಾಡೋದನ್ನು ಕಲಿತಿರುತ್ತಾರೆ. ಹಾಗಾದ್ರೆ ಅಂತಹ ವಿಷಯಗಳು ಯಾವುವು ಅನ್ನೋದನ್ನು ತಿಳಿಯೋಣ. 

PREV
110
ಹುಡುಗಿ ದೃಷ್ಟಿಯಲ್ಲಿ ಒಳ್ಳೆಯವರಾಗಬೇಕೆಂದು ಹೋಗಿ ಈ ತಪ್ಪು ಮಾಡ್ಬೇಡಿ

ಹುಡುಗಿಯರನ್ನು ಇಂಪ್ರೆಸ್ ಮಾಡಲು (impress girls) ಹುಡುಗರು ಒಂದಲ್ಲ ಒಂದು ಕೆಲಸ ಮಾಡ್ತಾರೆ. ಇದು ಆರಂಭದಲ್ಲಿ ನಿಮಗೆ ಅವರನ್ನು ಇಂಪ್ರೆಸ್ ಮಾಡಲು ನೆರವಾಗಬಹುದು. ಆದರೆ ಮುಂದೆ ಹೋದಂತೆ ನೀವೆ ಆ ಬಗ್ಗೆ ಯೋಚನೆ ಮಾಡಲು ಆರಂಭಿಸುವಿರಿ. ನೀವು ಹುಡುಗಿಯನ್ನು ಇಂಪ್ರೆಸ್ ಮಾಡಲು ಏನೇನೋ ಮಾಡ್ತಾ ಇದೀರಾ? ಆ ತಪ್ಪು ಮಾಡ್ಲೇ ಬೇಡಿ, ಯಾಕಂದ್ರೆ ಇದರಿಂದ ಮುಂದೆ ನೀವೇ ಯಾಕಪ್ಪಾ ನಾನು ಇದನ್ನೆಲ್ಲಾ ಮಾಡ್ತಿದ್ದೆ ಅಂದು ಬಿಡ್ತೀರಿ.
 

210

ಅವರಿಗೆ ಅಂಟಿಕೊಂಡಿರಬೇಡಿ
ಯಾವಾಗಲೂ ಸಂಗಾತಿಗೆ ಅಂಟಿಕೊಂಡಿರುವುದು ಒಳ್ಳೆಯದಲ್ಲ. ಮೊದ ಮೊದಲು ಅಂಟಿಕೊಂಡು ಇರೋದು ಬೆಸ್ಟ್ ಎಂದು ನಿಮಗೆ ಅನಿಸಬಹುದು, ಆದರೆ ಮುಂದೆ ಅದುವೇ ನಿಮಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತೆ. ಇದನ್ನು ಆರಂಭದಲ್ಲಿ ಮಾಡುವುದು ಒಳ್ಳೆಯದು ಆದರೆ ನೀವು ಅದನ್ನು ದೀರ್ಘಕಾಲದವರೆಗೆ ಮಾಡಲು ಸಾಧ್ಯವಾಗುವುದಿಲ್ಲ.

310

ಮೊದ ಮೊದಲು ಅವರಿಗೆ ಅಂಟಿಕೊಳ್ಳುತ್ತಿದ್ದ ನೀವು, ಸ್ವಲ್ಪ ಸಮಯದ ನಂತರ ಇದನ್ನು ಮಾಡೋದನ್ನು ನಿಲ್ಲಿಸಿದಾಗ, ನಿಮ್ಮ ಸಂಗಾತಿ ದೂರು ನೀಡಲು ಪ್ರಾರಂಭಿಸುತ್ತಾರೆ. ನಿಮ್ಮ ಸಂಗಾತಿಯು ನಂತರ ಅದನ್ನು ಇಷ್ಟಪಡದಿರಬಹುದು. ಆದ್ದರಿಂದ ಸಂಬಂಧ ದೀರ್ಘ ಕಾಲ (long term relationship) ಉಳಿಯಲು ಒಂದು ಅಂತರ ಕಾಯ್ದುಕೊಳ್ಳುವುದು ಉತ್ತಮ.

410

ಎಲ್ಲವನ್ನೂ ಒಪ್ಪಿಕೊಳ್ಳೋ ಅಗತ್ಯವಿಲ್ಲ
ಹೌದು, ಎಲ್ಲವನ್ನೂ ಸ್ವೀಕರಿಸೋದ್ರಿಂದ ಎಲ್ಲರೂ ನಿಮ್ಮನ್ನು ಒಳ್ಳೆಯವರು ಎಂದು ಕರೆಯೋದಿಲ್ಲ, ಸಂಗಾತಿಯು ಹೇಳುವ ಎಲ್ಲವನ್ನೂ ಕುರುಡಾಗಿ ಸ್ವೀಕರಿಸುವ ಬದಲು, ಯೋಚಿಸಿ.  ತಮ್ಮ ಸಂಗಾತಿ ಹೇಳೀದ್ದನ್ನೆಲ್ಲಾ ನಂಬಿ ಒಪ್ಪಿಕೊಳ್ಳುವವರು ನೀವಾಗಿದ್ದರೆ, ಮುಂದೆ ಪಶ್ಚಾತ್ತಾಪ ಪಡಬೇಕಾದ್ದು ಖಚಿತ.

510

ನೀವು ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ (misunderstanding) ಹೊಂದಿರಬಹುದು. ನಿಮ್ಮ ಸಂಗಾತಿಯ ಬಗ್ಗೆ ನೀವು ಸಮಾಧಾನ ಹೊಂದಿಲ್ಲದಿದ್ದರೆ, ಅದನ್ನು ಮನಸ್ಸು ಬಿಚ್ಚಿ ಹೇಳಿ. ಒಂದು ವೇಳೆ ನೀವು ಅವರು ಹೇಳಿದ್ದನ್ನೆಲ್ಲಾ ಒಪ್ಪುಕೊಳ್ಳುತ್ತಾ ಬಂದರೆ ಮುಂದೆ ನೀವು ಯಾವುದನ್ನಾದರೂ ಒಪ್ಪಿಕೊಳ್ಳದಿದ್ದರೆ ಅವರು ಹಠಮಾರಿಯಾಗಿ ಬದಲಾಗಬಹುದು.

610

ಪ್ರತಿ ಬಾರಿಯೂ ಖರ್ಚು ಮಾಡುವುದನ್ನು ತಪ್ಪಿಸಿ
ಪ್ರತಿಯೊಬ್ಬ ಹುಡುಗನೂ ಇದನ್ನು ಮಾಡುತ್ತಾನೆ. ಹುಡುಗಿಗೆ ಖರ್ಚು ಮಾಡಲು ಬಿಡೋದೆ ಇಲ್ಲ. ಹುಡುಗಿ ಖರ್ಚು ಮಾಡಿದರೆ, ಹುಡುಗರು ಅದನ್ನು ಹೃದಯಕ್ಕೆ ತೆಗೆದುಕೊಳ್ಳುತ್ತಾರೆ. ರೆಸ್ಟೋರೆಂಟ್ ಅಥವಾ ಶಾಪಿಂಗ್ ಮಾಲ್ ನಲ್ಲಿ ಬಿಲ್ಲಿಂಗ್ ಮಾಡುವಾಗ ಹುಡುಗರು ಶಾಪಿಂಗ್ ಮಾಲ್ ನ ಬಿಲ್ ಪಾವತಿಸಲು ಸಿದ್ಧರಿರುವುದನ್ನು ನೀವು ಆಗಾಗ್ಗೆ ನೋಡಿರಬಹುದು.

710

ಸಾಮಾನ್ಯವಾಗಿ ಹುಡುಗರು ಹುಡುಗಿಯರ ಮುಂದೆ ಒಳ್ಳೆಯವರಾಗಲು ತಾವೇ ಸ್ವತಃ ಬಿಲ್ ಪೇ (paying bill) ಮಾಡ್ತಾರೆ. ಆದರೆ ಹೀಗೆ ಮಾಡೋದ್ರಿಂದ ಮುಂದೆ ನಿಮ್ಮ ಜೇಬು ಖಾಲಿಯಾಗೋದು ಖಚಿತ. ಆದುದರಿಂದ ಆಗೊಮ್ಮೆ, ಈಗೊಮ್ಮೆ ನಿಮ್ಮ ಬಳಿ ಹಣ ಇದ್ದರೂ ಸಹ ಸಂಗಾತಿಗೆ ಬಿಲ್ ಪೇ ಮಾಡಲು ಅನುಮತಿ ನೀಡಿ. ಇದರಿಂದ ಸಂಬಂಧವೂ ಚೆನ್ನಾಗಿರುತ್ತೆ.

810

ನೀವೊಬ್ಬರೇ ಎಲ್ಲಾ ವಿಷಯದ ಬಗ್ಗೆ ತಲೆಗೆಡಿಸಿಕೊಳ್ಳಬೇಡಿ
ಎಲ್ಲಾ ಹೊರೆಯನ್ನು ಹೊರುವ ಅಗತ್ಯವೇನಿದೆ? ನೀವಿಬ್ಬರೂ ಜೊತೆಯಾಗಿ ಜೀವನ ಸಾಗಿಸೋದರಿಂದ, ಎಲ್ಲವನ್ನೂ ಇಬ್ಬರು ಯೋಚಿಸಿ ನಿರ್ಧರಿಸಿದ್ರೆ ಉತ್ತಮ. ಸಂಬಂಧದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಇದನ್ನು ನೆನಪಿನಲ್ಲಿಡಿ. ಯಾವತ್ತೂ ನಿಮ್ಮಿಬ್ಬರ ಜೀವನದ ಬಗ್ಗೆ ಒಬ್ಬರೇ ನಿರ್ಧಾರ ತೆಗೆದುಕೊಳ್ಳಲು ಅನುಮತಿಸಬೇಡಿ.

910

ಸಂಗಾತಿಗೆ ಮಾತ್ರ ಆದ್ಯತೆ ನೀಡಬೇಡಿ
ನೀವು ನಿಮಗೆ ಆದ್ಯತೆ ನೀಡದಿದ್ದರೆ, ನಿಮ್ಮ ಜೀವನದ ಮೌಲ್ಯವನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ನಿಮ್ಮ ಜೀವನವನ್ನು ನಿರ್ಲಕ್ಷಿಸಬೇಡಿ. ಪ್ರತಿ ಬಾರಿಯೂ, ನಿಮ್ಮ ಸಂಗಾತಿಗೆ ಎಲ್ಲೆಡೆ ಆದ್ಯತೆ ನೀಡುವುದು ಮಾತ್ರವಲ್ಲದೆ ನಿಮ್ಮನ್ನು ನೀವು ಮುಂದೆ ಇರಿಸಿಕೊಳ್ಳಿ. ಒಬ್ಬ ಒಳ್ಳೆಯ ಹುಡುಗ ಅದನ್ನು ಮಾಡಬೇಕು.

1010

ನೀವು ಸ್ನೇಹಿತರ ಜೊತೆ ಅಥವಾ ಸಂಬಂಧಿಕರು ಅಥವಾ ಅತ್ತೆ-ಮಾವಂದಿರೊಂದಿಗಿದ್ದರೆ, ನಿಮಗೆ ನೀವು ಆದ್ಯತೆ ನೀಡಿ. ಹೌದು, ನಿಮ್ಮ ಸಂಗಾತಿಯನ್ನು ಸಹ ಮರೆಯಬೇಡಿ. ಅವರನ್ನು ಸಹ ನಿಮ್ಮೊಂದಿಗೆ ಇಟ್ಟುಕೊಳ್ಳಿ, ಆದರೆ ಅವರಿಗೆ ಗಮನ ನೀಡುವ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ಯಾವಾಗಲೂ ಮರೆಯಬೇಡಿ. ನಿಮ್ಮ ಗೆಳತಿಯ ದೃಷ್ಟಿಯಲ್ಲಿ ಹೀರೋ ಆಗಲು ನೀವು ಈ ಸಲಹೆಗಳನ್ನು ಅನುಸರಿಸಿದರೆ ಉತ್ತಮ.

Read more Photos on
click me!

Recommended Stories