Female masturbation : ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸೂಕ್ಷ್ಮ ವಿಷಯಗಳಿವು

First Published Oct 12, 2022, 6:08 PM IST

ಹಸ್ತ ಮೈಥುನ ಮಾಡೋದು ಕೇವಲ ಹುಡುಗರು ಮಾತ್ರ ಅನ್ನೋದು ಜನರ ನಂಬಿಕೆ. ಜನ ಇನ್ನೂ ಸಹ ಮಹಿಳೆಯರ ಬಯಕೆಯ ಬಗ್ಗೆ ಹೆಚ್ಚಿನ ತಲೆಕೆಡಿಸೋದೆ ಇಲ್ಲ. ಸ್ತ್ರೀ ಹಸ್ತಮೈಥುನದ ಬಗ್ಗೆ ಜನರಲ್ಲಿ ಸಾಕಷ್ಟು ನಿಷೇಧವಿದೆ ಮತ್ತು ಜನರು ಗೂಗಲ್ನಲ್ಲಿ ಅದರ ಬಗ್ಗೆ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ನಾವು ನಿಮಗೆ ತಿಳಿಸೋಣ. ಸ್ತ್ರೀ ಹಸ್ತಮೈಥುನದಿಂದ ಏನು ಸಮಸ್ಯೆ ಇದೆ? ಮಹಿಳೆಯರು ಹಸ್ತಮೈಥುನ ಮಾಡೋದು ಸಾಮಾನ್ಯವೇ? ಅನ್ನೋದನ್ನು ತಿಳಿಯೋಣ.

ಮಹಿಳೆಯರ ಲೈಂಗಿಕ ಬಯಕೆಯ (sexual desire) ಬಗ್ಗೆ ಮಾತನಾಡಿದಾಗಲೆಲ್ಲಾ, ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಇನ್ನೂ ಕೂಡ ಜನ ಆ ವಿಷ್ಯದ ಬಗ್ಗೆ ಸೈಲೆಂಟ್ ಆಗಿರುತ್ತಾರೆ. ಹೆಚ್ಚಿನ ಮಹಿಳೆಯರು ಈ ವಿಷಯಗಳ ಬಗ್ಗೆ ಮಾತನಾಡಬಾರದು ಎಂದು ನಂಬುತ್ತಾರೆ, ಆದರೆ ಈ ವಿಷಯಗಳು ನಿಜವಾಗಿಯೂ ಮುಖ್ಯ. ನಿಮ್ಮ ದೇಹಕ್ಕೆ ಸಂಬಂಧಿಸಿದ ಎಲ್ಲವನ್ನೂ ಬಹಿರಂಗವಾಗಿ ಸ್ವೀಕರಿಸುವುದು ಮತ್ತು ಅದರ ಬಗ್ಗೆ ಸರಿಯಾದ ವ್ಯಕ್ತಿಯನ್ನು ಪ್ರಶ್ನಿಸುವುದು ಸಹ ಮುಖ್ಯವಾಗಿದೆ. ಹಸ್ತಮೈಥುನದ ವಿಷಯಕ್ಕೆ ಬಂದಾಗ, ಮಹಿಳೆಯರು ಕೂಡ ಮಾತುಮರೆಸುತ್ತಾರೆ. ಆದರೆ ಇದರ ಬಗ್ಗೆ ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಬೇಕಾದ್ದು ಬಹಳಷ್ಟಿದೆ. 

ನಿಮ್ಮ ಸ್ವಂತ ದೇಹಕ್ಕೆ ಸಂಬಂಧಿಸಿದ ಸಂಗತಿಗಳ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ಬಹುಶಃ ನೀವು ನಿಮ್ಮ ಜೀವನದುದ್ದಕ್ಕೂ ಅದನ್ನು ತಪ್ಪೆಂದು ಪರಿಗಣಿಸುತ್ತೀರಿ. ಗೂಗಲ್ ನಲ್ಲಿ ಮಹಿಳೆಯರ ಹಸ್ತಮೈಥುನದ ಬಗ್ಗೆ ಸರ್ಚ್ ಮಾಡಲಾದ ಪ್ರಶ್ನೆಗಳಲ್ಲಿ ಒಂದು 'ಮಹಿಳೆಯರು ನಿಜವಾಗಿಯೂ ಹಸ್ತಮೈಥುನ ಮಾಡಿಕೊಳ್ಳುತ್ತಾರೆಯೇ?' ಎಂದು. ಇದು ಜನರು ಕೇಳುವ ನಿಜವಾಗಿಯೂ ವಿಚಿತ್ರವಾದ ಪ್ರಶ್ನೆ. 

ಪ್ರಸೂತಿ ತಜ್ಞೆ-ಸ್ತ್ರೀರೋಗ ತಜ್ಞೆ (ಒಬಿಜಿವೈಎನ್), ಬಂಜೆತನ ತಜ್ಞೆ ಡಾ.ತನುಶ್ರೀ ಪಾಂಡೆ ಪಡಗಾಂವ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ನಂಬಬಾರದ ಕೆಲವು ಮಿಥ್ಯೆಗಳ ಬಗ್ಗೆ ಹೇಳಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಸಹ ನೀಡಿದ್ದಾರೆ. ಆದ್ದರಿಂದ ಇಂದು ಹಸ್ತಮೈಥುನದ ಬಗ್ಗೆ ವಿವರವಾಗಿ ಮಾತನಾಡೋಣ. 

ಸ್ತ್ರೀ ಹಸ್ತಮೈಥುನದ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿಲ್ಲದ ವಿಷಯಗಳು :
ಹಸ್ತಮೈಥುನ ಎಂದರೆ ನಿಮ್ಮ ದೇಹಕ್ಕೆ ಏನಾದರೂ ತೊಂದರೆ ಮಾಡುತ್ತಿದ್ದೀರಿ ಅಥವಾ ಅದು ಕೆಟ್ಟದಾಗಿದೆ ಎಂದು ಅರ್ಥವಲ್ಲ. ಫೀಮೇಲ್ ಮಾಸ್ಟರ್ ಬೇಶನ್ (female masterbation) ಬಗ್ಗೆ ಓಪನ್ ಆಗಿ ಮಾತನಾಡೋದು ನಮ್ಮ ಸಮಾಜದಲ್ಲಿ ನಿಷಿದ್ಧವಾಗಿದೆ. ಆದರೆ ಅದರ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಇದು ನಿಮ್ಮನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುವುದಿಲ್ಲ
ಯಾವುದೇ ಮಹಿಳೆ ತನ್ನ ಖಾಸಗಿ ಭಾಗಗಳ ಬಗ್ಗೆ ಮಾತನಾಡುವುದು ಸ್ವಲ್ಪ ಅಸ್ವಾಭಾವಿಕವಾಗಿರಬಹುದು, ಆದರೆ ಹಸ್ತಮೈಥುನವು ಅವಳನ್ನು ತಪ್ಪು ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಇದರ ಅರ್ಥವಲ್ಲ. ಇದು ಹೆಚ್ಚಿನ ಮಹಿಳೆಯರು ನಂಬುವ ದೊಡ್ಡ ತಪ್ಪು ಕಲ್ಪನೆಯಾಗಿದೆ. ಇಲ್ಲ, ಅದು ನಿಮ್ಮ ದೇಹಕ್ಕೆ ಸಂಬಂಧಿಸಿದೆ, ಅದನ್ನು ಮಾಡೋದು ತಪ್ಪೇನಲ್ಲ.

ಇದು ಆರೋಗ್ಯಕರವಾಗಿದ್ದು, ದೇಹಕ್ಕೆ ಒಳ್ಳೆಯದು
ಡಾ.ತನುಶ್ರೀ ಪ್ರಕಾರ, ಇದು ತುಂಬಾ ಆರೋಗ್ಯಕರವಾಗಿದೆ, ಇದು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಬಗ್ಗೆ ಇತರ ವಿಷಯಗಳನ್ನು ತಿಳಿದುಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಹಸ್ತಮೈಥುನವು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ. ಇದನ್ನು ಮಾಡಲು ಸಮಸ್ಯೆ ಇದ್ದರೆ, ವೈದ್ಯರ ಬಳಿಗೆ ಹೋಗಿ ಪರೀಕ್ಷೆ ನಡೆಸಬಹುದು. ಇದು ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಹಸ್ತಮೈಥುನವನ್ನು ಆರೋಗ್ಯಕರ ಕ್ರಿಯೆಯಾಗಿ ನೋಡಬಹುದು. ಹಸ್ತಮೈಥುನ ಮಾಡೋದು ನಿಮಗೆ ಹಿತ ಎನಿಸಿದರೆ ನೀವು ಅದರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಬಹುದು. ನಿಮ್ಮ ಜೀವನದಲ್ಲಿ ಸ್ವಲ್ಪ ಮಸಾಲೆಯನ್ನು ಬಯಸಿದರೆ ಇದು ತುಂಬಾ ಆರೋಗ್ಯಕರ ಆಯ್ಕೆ (healthy activity) ಎಂದು ಹೇಳಲಾಗುತ್ತೆ.  

ಹಸ್ತಮೈಥುನವು ನಿದ್ರೆಗೆ ಒಳ್ಳೆಯದು 
2019 ರ ಒಂದು ಅಧ್ಯಯನವು ಆರ್ಗಸಂ (orgasm) ತುಂಬಾ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತೆ ಮತ್ತುಮಹಿಳೆಯರು ಒತ್ತಡದಿಂದ ಹೊರ ಬರಲು ಸಾಧ್ಯವಾಗುತ್ತೆ ಎಂದು ತಿಳಿಸಿದೆ. ಅಷ್ಟೇ ಅಲ್ಲ ಹಸ್ತಮೈಥುನದಿಂದ ಆತಂಕವು ಕಡಿಮೆ ಮತ್ತು ಇದು ಯಾವುದೇ ರೀತಿಯ ರೋಗವಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು.  

ಯೋನಿಯಲ್ಲಿ ಹೆಚ್ಚುವರಿಯಾಗಿ ಏನನ್ನೂ ಹಾಕುವುದು ಸರಿಯಲ್ಲ :
ಯೋನಿಯಲ್ಲಿ ಕೆಲವು ಹೆಚ್ಚುವರಿ ಥರ್ಡ್ ಪಾರ್ಟಿ ವಸ್ತುಗಳನ್ನು ಇಡುವುದು ಅನೇಕ ಜನರಿಗೆ ಅಪಾಯಕಾರಿ ಎಂದು ಸಾಬೀತಾಗಿದೆ. ಹಸ್ತಮೈಥುನಕ್ಕೆ ಅನೇಕ ಮಾರ್ಗಗಳಿವೆ, ಆದರೆ ಇದರರ್ಥ ನೀವು ನಿಮ್ಮ ಯೋನಿಯೊಳಗೆ ಯಾವುದೇ ಇತರ ವಸ್ತುಗಳನ್ನು ಸೇರಿಸುತ್ತಿಲ್ಲ ಅನ್ನೋದನ್ನು ತಿಳಿದಿರಬೇಕು..  

ಹಸ್ತಮೈಥುನದ ನಂತರವೂ ವರ್ಜಿನ್ ಆಗಿರಬಹುದೇ? 
ಈ ಪ್ರಶ್ನೆಯು ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಪ್ರಶ್ನೆಗಳಲ್ಲಿ ಒಂದಾಗಿದೆ. ಡಾ. ತನುಶ್ರೀ ಅವರು ಹೇಳಿದಂತೆ, ಸ್ತ್ರೀ ಹಸ್ತಮೈಥುನಕ್ಕೆ ಅನೇಕ ಮಾರ್ಗಗಳಿವೆ ಮತ್ತು ಹೈಮೆನ್ ಗೆ ಹಾನಿಯಾಗದ ಕೆಲವು ಮಾರ್ಗಗಳಿವೆ. ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನೀವು ಸ್ತ್ರೀ ರೋಗ ತಜ್ಞರ ಬಳಿ ಪರೀಕ್ಷೆ ಮಾಡಿಸಿ, ಮಾಹಿತಿ ಪಡೆದುಕೊಂಡರೆ ಉತ್ತಮ.

Latest Videos

click me!