ಬೋಳು ತಲೆಯವರು ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್‌ನ ಹೆಚ್ಚಿನ ಮಟ್ಟವನ್ನು ಹೊಂದಿರುತ್ತಾರೆ. ಇದು ಅವರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ. ಅದರ ಪರಿಣಾಮವಾಗಿ ಅವರು ಸರಾಸರಿಗಿಂತ ಕಿರಿಯ ವಯಸ್ಸಿನಲ್ಲಿ ತಮ್ಮ ಕೂದಲನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಆದರೆ ಇದರಲ್ಲಿ ನಿಜಾಂಶವೇನು?
ಬೋಳುತನಕ್ಕೂ ಲೈಂಗಿಕ ಶಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಕೂದಲು ಉದುರುವುದು ಪುರುಷತ್ವವನ್ನು ಹೆಚ್ಚಿಸುವುದಿಲ್ಲ. ಬದಲಾಗಿ ಪುರುಷತ್ವವು ವಾಸ್ತವವಾಗಿ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಲೈಂಗಿಕತೆ ಉತ್ತಮವಾಗಿರಲು ದೈಹಿಕ, ಮಾನಸಿಕ, ಜೀವನಶೈಲಿ ಅಂಶಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಇದು ಲೈಂಗಿಕ ಆರೋಗ್ಯ ಮತ್ತು ಫಲವತ್ತತೆಯನ್ನು ಒಳಗೊಂಡಿರುತ್ತದೆ ಹೀಗಾಗಿ ಬೋಳು ತಲೆ ಪುರುಷತ್ವವನ್ನು ಸುಧಾರಿಸುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೋಳು ತಲೆಗೆ ಅನೇಕ ಕಾರಣಗಳಿವೆ. ಅನುವಂಶಿಕತೆ, ತೀವ್ರ ಒತ್ತಡ, ಆಹಾರ ಪದ್ಧತಿ, ಅನಾರೋಗ್ಯ, ತೂಕ ಇಳಿಕೆ ಹೀಗೆ ಹಲವು ಕಾರಣಗಳಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಮೆಡಿಕಲ್ ಜರ್ನಲ್ ಆಫ್ ಆಸ್ಟ್ರೇಲಿಯಾದಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಬೋಳು ಪುರುಷರಲ್ಲಿ ಲೈಂಗಿಕತೆಯ ಸಮಸ್ಯೆಯನ್ನು ತಿಳಿಸುತ್ತದೆ.
ಸಮೀಕ್ಷೆಯೊಂದರೆ ಪ್ರಕಾರ, 18-20 ವರ್ಷ ವಯಸ್ಸಿನವರಲ್ಲಿ 36% ಜನರು ಅತಿಯಾಗಿ ಲೈಂಗಿಕವಾಗಿ ಸಕ್ರಿಯವಾಗಿರುವುದು ಬೋಳು ತಲೆಯನ್ನು ಹೊಂದುತ್ತಾರೆ. ಮತ್ತು ಅದೇ ವಯಸ್ಸಿನ 54% ಜನರು ಬೋಳು ತಲೆಯ ಪುರುಷರು ಪೂರ್ಣ ಕೂದಲು ಹೊಂದಿರುವ ಪುರುಷರಿಗಿಂತ ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಲಾಗಿದೆ.
ಮೆಡಿಕಲ್ ಜರ್ನಲ್ ಆಫ್ ಆಸ್ಟ್ರೇಲಿಯಾದಲ್ಲಿ ಪ್ರಕಟವಾದ ಅಧ್ಯಯನವು ಬೋಳು ಪುರುಷರಲ್ಲಿ ಪುರುಷತ್ವ ಮಟ್ಟವನ್ನು ನೋಡಿದೆ. ಬೋಳು ಮತ್ತು ಸ್ಖಲನದ ಆವರ್ತನದ ನಡುವೆ ಯಾವುದೇ ಮಹತ್ವದ ಸಂಬಂಧವಿಲ್ಲ ಎಂದು ಅದು ಕಂಡುಹಿಡಿದಿದೆ.
ವಾಸ್ತವವಾಗಿ, ಬೋಳು ಪುರುಷರು ತಮ್ಮ ಜೀವನದಲ್ಲಿ ನಾಲ್ಕಕ್ಕಿಂತ ಹೆಚ್ಚು ಸ್ತ್ರೀ ಲೈಂಗಿಕ ಪಾಲುದಾರರನ್ನು ಹೊಂದುವ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.