'ಗಿಚ್ಚಿ ಗಿಲಿಗಿಲಿ' ಶೋ ಮತ್ತು ನಿರೂಪಕಿಯಾಗಿ ಖ್ಯಾತಿ ಪಡೆದಿದ್ದ ದಿವ್ಯಾ ವಸಂತ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಸಚಿನ್ ಯಾದವ್ ಅವರೊಂದಿಗೆ ವಿವಾಹವಾಗಿರುವ ಇವರು, ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೀಮಂತ ಆಚರಿಸಿಕೊಂಡಿದ್ದರು.
‘ಗಿಚ್ಚಿ ಗಿಲಿಗಿಲಿ’ ಶೋ ಖ್ಯಾತಿಯ ಹಾಗೂ ಕೆಲವೊಂದು ವಿಷಯಗಳಿಂದ ಟ್ರೋಲ್ ಮೂಲಕವೇ ಫೇಮಸ್ ಆಗಿದ್ದ ಮಾಜಿ ನ್ಯೂಸ್ ಆ್ಯಂಕರ್ ದಿವ್ಯಾ ವಸಂತ ಅವರು ನಿನ್ನೆ ಅರ್ಥಾತ್ ಸೆಪ್ಟೆಂಬರ್ 20ರಂದು ಗಂಡುಮಗುವಿನ ತಾಯಿಯಾಗಿದ್ದಾರೆ. ಸಚಿನ್ ಯಾದವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಿವ್ಯಾ ಅವರು ಇದೀಗ ಅಮ್ಮನಾಗುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
25
ಮದುವೆಯ ಬಂಧ
ಇತ್ತೀಚೆಗೆ ತಾವು ಗರ್ಭಿಣಿಯಾಗಿರುವ ವಿಷಯವನ್ನ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದರು ದಿವ್ಯಾ ವಸಂತ. ಇತ್ತೀಚೆಗಷ್ಟೇ, ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಅತ್ಯಂತ ಸಡಗರ-ಸಂಭ್ರಮದಿಂದ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನ ನೆರವೇರಿಸಿದ್ದರು.
35
ನಿರೂಪಕಿಯಾಗಿ ಸದ್ದು
ಅಂದಹಾಗೆ ದಿವ್ಯಾ ಅವರು ಗಿಚ್ಚಿಗಿಲಿಗಿಲಿಗೂ ಹೋಗುವ ಮುನ್ನ ನಿರೂಪಕಿಯಾಗಿ ಸಕತ್ ಸದ್ದುಮಾಡಿದವರು. ಮಾಡೆಲ್ ಆಗಿಯೂ ಗುರುತಿಸಿಕೊಂಡವರು. ಕೆಲವೊಂದು ಕಾಂಟ್ರವರ್ಸಿಗೂ ಸಿಲುಕಿಕೊಂಡಿದ್ದರು. ಇವೆಲ್ಲಕ್ಕೂ ತಿಲಾಂಜಲಿ ಇತ್ತು, ಮದುವೆಯಾಗಿ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ದಿವ್ಯಾ, ಸಚಿನ್ ಯಾದವ್ ಅವರನ್ನ ಪ್ರೀತಿಸಿ, ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಸಚಿನ್ ಯಾದವ್ ಅವರು ವೃತ್ತಿಯಲ್ಲಿ ಬೌನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ದಿವ್ಯಾ ಕುರಿತು ಹೇಳುವುದಾದರೆ, ಇವರು ನಿರೂಪಕಿ ಮತ್ತು ಮಾಡೆಲ್. ಕನ್ನಡ ಚಿತ್ರರಂಗದಲ್ಲಿ ಪ್ರಮುಖವಾಗಿ ಕೆಲಸ ಮಾಡುವ ಇವರು, ತಮ್ಮ ಅಭಿನಯ ಮತ್ತು ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ದೂರದರ್ಶನದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ದಿವ್ಯ, ನಂತರ ಚಲನಚಿತ್ರಗಳಿಗೆ ಪದಾರ್ಪಣೆ ಮಾಡಿದರು.
55
ಬಹುಮುಖ ಪ್ರತಿಭೆ
ಅವರ ನೈಸರ್ಗಿಕ ಅಭಿನಯ ಮತ್ತು ಪರದೆಯ ಮೇಲಿನ ಆಕರ್ಷಕ ವ್ಯಕ್ತಿತ್ವವು ಅವರಿಗೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ವಿವಿಧ ಪಾತ್ರಗಳಲ್ಲಿನ ಅವರ ಬಹುಮುಖ ಪ್ರತಿಭೆ ಅವರನ್ನು ಜನಪ್ರಿಯ ನಟಿಯನ್ನಾಗಿ ಮಾಡಿದೆ. ದಿವ್ಯ ವಸಂತ್ ಅವರು ತಮ್ಮ ಸಾಮಾಜಿಕ ಕಾರ್ಯಗಳಿಗಾಗಿಯೂ ಹೆಸರುವಾಸಿಯಾಗಿದ್ದಾರೆ. ಚಲನಚಿತ್ರಗಳ ಜೊತೆಗೆ, ಅವರು ಹಲವಾರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.