ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?

Published : Dec 28, 2025, 12:53 PM IST

ಮದುವೆಗೆ ಹಿಂದೇಟು ಹಾಕುತ್ತಿರುವ ಜೆನ್​ ಜಿ ಯುವಜನತೆಗೆ ನಟ ಡಾಲಿ ಧನಂಜಯ ಅವರು ತಮ್ಮ ಪತ್ನಿ ಧನ್ಯತಾ ನೀಡಿದ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ.  ದಾಂಪತ್ಯದಲ್ಲಿ ಸಾಮರಸ್ಯವನ್ನು ತರುವ ಬಗ್ಗೆ ಈ ಸರಳ ಮಾತು, ಅನೇಕರ ಮನಸ್ಸನ್ನು ಬದಲಿಸಿ ಮದುವೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸುತ್ತಿದೆ.

PREV
16
ಮದುವೆಗೆ ಹಿಂದೇಟು

ಮದುವೆ ಎಂದರೆ ಈಗ ಎಷ್ಟೋ ಯುವಕ-ಯುವತಿಯರು ಅದರಲ್ಲಿಯೂ ಜೆನ್​ ಜಿ (Gen Z) ಹಿಂದೇಟು ಹಾಕುತ್ತಿದ್ದಾರೆ. ಕರಿಯರೇ ಮುಖ್ಯ ಎಂದೋ, ಮದುವೆಯ ಬಗ್ಗೆ ನಂಬಿಕೆ ಇಲ್ಲದೇ ಇರುವುದೋ, ಮದುವೆ ಎನ್ನುವುದು ಬಂಧನ ಎನ್ನುವ ಕಾರಣಕ್ಕೋ, ದಾಂಪತ್ಯದಲ್ಲಿ ಹೊಂದಾಣಿಕೆ ಆಗದೇ ಅದರ ಸುಳಿವಿಗೆ ಸಿಲುಕುವುದೇ ಬೇಡ ಎಂದೋ... ಹೀಗೆ ಏನೇನೋ ಕಾರಣಕ್ಕೆ ಇಂದು ಮದುವೆಯಾಗುವುದೇ ಬೇಡ ಎಂದುಕೊಳ್ಳುತ್ತಿರುವ ದೊಡ್ಡ ವರ್ಗವೇ ಇದೆ.

26
ಮದುವೆ ಬಗ್ಗೆ ಸಮ್ಮತಿ

ಆದರೆ ದಾಂಪತ್ಯ ಚೆನ್ನಾಗಿ ಇರಬೇಕು ಎಂದರೆ ಏನು ಮಾಡಬೇಕು ಎಂಬ ಬಗ್ಗೆ ನಟ ಡಾಲಿ ಧನಂಜಯ (Daali Dhananjaya) ಅವರು ಹೇಳಿರುವ ಈ ಮಾತು ಕೇಳಿ ಶೇಕಡಶ 67ರಷ್ಟು ಜೆನ್​ ಜೀಗಳು ಮದುವೆಗೆ ಒಪ್ಪಿಕೊಳ್ಳುತ್ತಿದ್ದಾರಂತೆ. ಮದುವೆಯ ಬಗ್ಗೆ ಅವರಿಗೆ ನಂಬಿಕೆ ಬರುತ್ತಿದೆ ಎಂದು ವರದಿಯಾಗಿದೆ.

36
ಪತ್ನಿ ಧನ್ಯತಾ

ಅಷ್ಟಕ್ಕೂ ಡಾಲಿ ಧನಂಜಯ್​ ಅವರಿಗೆ ಈ ಮಾತು ಹೇಳಿದ್ದು ಅವರ ಪತ್ನಿ ಧನ್ಯತಾ ಎಂದಿದ್ದಾರೆ. ಡಾಲಿ ಮತ್ತು ಧನ್ಯತಾ ಅವರು, ಕಳೆದ ಫೆಬ್ರುವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧನ್ಯತಾ ಅವರು ಪ್ರಸೂತಿ ತಜ್ಞರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಮಲ್ಲಾಡಿಹಳ್ಳಿಯಲ್ಲಿರುವ ಶಿವಪುರದ ಧನ್ಯತಾ ಅವರು, ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ಮಾಡುತ್ತಿದ್ದು, ಇದಾಗಲೇ 500 ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ.

46
ಡಾಲಿ ಹೇಳಿದ್ದೇನು?

ಡಾಲಿ ಅವರು ಹೇಳಿದ್ದೇನೆಂದರೆ, ನನ್ನ ಹೆಂಡತಿಯ ಒಂದೇ ಒಂದು ಸಜೆಷನ್​ ಏನು ಅಂದ್ರೆ, ನಿನಗಾಗಿ ಒಂದೇ ಒಂದು ದಿನ ಟೈಮ್​ ಇಟ್ಕೊ. ನನಗಾಗಿ ಬೇಡ. ನಿನಗೆ ಎಂದು ಒಂದು ದಿನ ಟೈಮ್​ ಇಟ್ಟುಕೊಂಡು, ನಿದ್ದೆ ಮಾಡು, ಎಂಜಾಯ್​ ಮಾಡು. ಸಿನಿಮಾ ನೋಡು ಏನೋ ಒಂದು ಮಾಡು. ಎಲ್ಲೋ ಎಲ್ಲೋ ಎಲ್ಲೋ ಎಂದು ಕೆಲ್ಸ ಮಾಡ್ತಿರಬೇಡ ಎಂದಳು. ಅದು ನನಗೆ ತುಂಬಾ ಸಹಾಯಕ್ಕೆ ಬಂದಿತು ಎಂದಿದ್ದಾರೆ.

56
ತಮಗಾಗಿ ತಾವು ಟೈಮ್​

ಇಂದು ಹೆಚ್ಚಿನ ಯುವಕ-ಯುವತಿಯರು ತಮಗಾಗಿ ತಾವು ಟೈಮ್​ ಕೊಟ್ಟಿರುವುದಿಲ್ಲ. ಕೆಲಸ, ಕರಿಯರ್​, ಉದ್ಯೋಗ ಅದೂ ಇದೂ ಎಂದು ಯಶಸ್ಸು, ದುಡ್ಡಿನ ಹಿಂದೆ ಬಿದ್ದು ತಮ್ಮನ್ನು ತಾವೇ ಮರೆಯುವ ಕಾರಣವೇ ದಾಂಪತ್ಯ ಜೀವನದಲ್ಲಿಯೂ ಸಾಮರಸ್ಯ ಮೂಡುತ್ತಿಲ್ಲ. ಆದ್ದರಿಂದ ನಿಮಗಾಗಿ ನೀವು ಟೈಮ್​ ಕೊಟ್ಟಿಕೊಂಡರೆ ಎಲ್ಲವೂ ಸರಿಯಾಗುತ್ತದೆ ಎನ್ನುವುದಾಗಿ ಡಾಲಿ ಅವರ ಪತ್ನಿ ಅವರಿಗೆ ಹೇಳಿದ್ದಾರೆ. ಹೀಗೆ ಆದರೆ ಎಷ್ಟೋ ದಾಂಪತ್ಯ ಸಮಸ್ಯೆಗಳನ್ನು ಸರಿ ಮಾಡಬಹುದು ಎನ್ನುವುದು ಅವರ ಅನಿಸಿಕೆ.

66
ಡಾಲಿ ಧನಂಜಯ್​ ಕುರಿತು

ಇನ್ನು ಸಿನಿ ಪ್ರಿಯರಿಗೆ ಡಾಲಿ ಧನಂಜಯ್​ ಕುರಿತು ಹೇಳುವುದೇ ಬೇಡ. ಕಾಳೇನಹಳ್ಳಿ ಅಡವಿಸ್ವಾಮಿ ಧನಂಜಯ ಎಂಬ ಹೆಸರು ಇವರದ್ದು. ಇವರು ನಟ ಮತ್ತು ನಿರ್ಮಾಪಕ. ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಫೇಮಸ್​ ಆಗಗಿರೋ ನಟ, 2013ರಲ್ಲಿ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು, ಇದಕ್ಕಾಗಿ ಅವರು SIIMA ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಗೆದ್ದರು . ವಿವಿಧ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ನಾಲ್ಕು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಲ್ಲಮ (2017) ಚಿತ್ರದಲ್ಲಿ ಅಲ್ಲಮ ಪ್ರಭು ಪಾತ್ರಕ್ಕಾಗಿ ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದರು . ಬಡವ ರಾಸ್ಕಲ್ ಚಿತ್ರದ ಮೂಲಕ ಅವರು ನಿರ್ಮಾಪಕರಾದರು. 2018 ರಲ್ಲಿ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಧನಂಜಯ ಅವರಿಗೆ ಭಯಾನಕ ಖಳನಾಯಕನ ಪಾತ್ರದ ಮೂಲಕ ಪ್ರಮುಖ ತಿರುವು ಸಿಕ್ಕಿತು. ಈಗ ಅವರನ್ನು "ಡಾಲಿ" ಎಂದು ಕರೆಯಲಾಗುತ್ತದೆ, ಈ ಚಿತ್ರದಲ್ಲಿನ ಪಾತ್ರದ ಹೆಸರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories