ಸೇಫ್‌ ಸೆಕ್ಸ್‌ಗಲ್ಲ, ಅಮಲೇರಿಸಿಕೊಳ್ಳೋಕೆ ಕಾಂಡೋಮ್‌!

First Published | Jun 1, 2023, 5:34 PM IST

ಸೇಫ್‌ ಸೆಕ್ಸ್‌ಗಾಗಿ ಕಾಂಡೋಮ್ ಬಳಸೋ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಇಲ್ಲಿ ಮಾತ್ರ ಲೈಂಗಿಕ ಜೀವನಕ್ಕಾಗಿ ಅಲ್ಲ ಬದಲಿಗೆ ಮಾದಕ ವ್ಯಸನಕ್ಕೆ ಕಾಂಡೋಮ್​ ಕಾರಣವಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಳೆದ ವರ್ಷ, ಪಶ್ಚಿಮ ಬಂಗಾಳದ ದುರ್ಗಾಪುರ ಪ್ರದೇಶದಿಂದ ಆಘಾತಕಾರಿ ವರದಿಯೊಂದು ಹೊರಬಿದ್ದಿತ್ತು. ಅಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು ಗಗನಕ್ಕೇರಿತ್ತು.ಆದರೆ ಈ ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕತೆಗೆ ಬಳಸಲಾಗುತ್ತಿರಲ್ಲಿಲ್ಲ.

ಬದಲಿಗೆ ಮಾದಕ ವ್ಯಸನಕ್ಕಾಗಿ ಬಳಸಲಾಗುತ್ತಿರುವ ವಿಚಾರ ವೈರಲ್ ಆಗಿತ್ತು. ಈ ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್​ ಕೆಮಿಕಲ್ಸ್​ನಿಂದ ದೇಹಕ್ಕೆ ತುಂಬಾ ಅಪಾಯಕಾರಿ ಎಂಬ ಸಂಗತಿ ಅಧ್ಯಯನದಿಂದ ಬಯಲಾಗಿದೆ.

Tap to resize

ಆಪಲ್, ಸ್ಟ್ರಾಬೆರಿ ಮತ್ತು ಚಾಕೊಲೇಟ್‌ಗಳಂತಹ ಸುವಾಸನೆಯ ಮತ್ತು ಲೂಬ್ರಿಕೇಟೆಡ್ ಕಾಂಡೋಮ್‌ಗಳ ಮಾರಾಟವು ಸಾಕಷ್ಟು ಹೆಚ್ಚಾಗಿದೆ. ಯುವಕರು ಈ ಕಾಂಡೋಮ್‌ಗಳನ್ನು ಹೆಚ್ಚು ತೆಗೆದುಕೊಂಡು ಹೋಗುತ್ತಿದ್ದಾರೆ. ಅದರಲ್ಲಿಯೂ ಕೆಮಿಕಲ್​ನಿಂದ ಅಮಲೇರಿಸಿಕೊಳ್ಳಲು ಯುವಕರು ಹೆಚ್ಚಾಗಿ ಇದನ್ನು ಖರೀದಿ ಮಾಡುತ್ತಿದ್ದಾರೆ ಎಂದು ಮೆಡಿಕಲ್ ಸ್ಟೋರ್‌ನ ಅಂಗಡಿಯವರೊಬ್ಬರು ಬಹಿರಂಗಪಡಿಸಿದ್ದರು.

ಕಾಂಡೋಮ್‌ ಮಾದಕ ವ್ಯಸನಕ್ಕೆ ಹೇಗೆ ಕಾರಣವಾಗಬಹುದು?
ರಸಾಯನಶಾಸ್ತ್ರದ ಶಿಕ್ಷಕರ ಪ್ರಕಾರ, ಸುವಾಸನೆಯ ಕಾಂಡೋಮ್‌ನ್ನು ದೀರ್ಘಕಾಲದವರೆಗೆ ಬಿಸಿನೀರಿನಲ್ಲಿ ನೆನೆಸಿದರೆ, ಸುವಾಸನೆಯಲ್ಲಿರುವ ದೊಡ್ಡ ರಾಸಾಯನಿಕ ಅಣುಗಳು ಒಡೆದು ಆಲ್ಕೊಹಾಲ್ಯುಕ್ತ ಸಂಯುಕ್ತಗಳನ್ನು ರೂಪಿಸುತ್ತವೆ. ಈ ಸಂಯುಕ್ತವು ಒಡೆದ ನಂತರ, ಸುಗಂಧ ಮತ್ತು ಹೊಗೆಯನ್ನು ಉಂಟುಮಾಡುತ್ತದೆ, ಇದು ಮಾದಕತೆಯನ್ನು ಉಂಟು ಮಾಡುತ್ತದೆ. 

ಕೆಮ್ಮಿನ ಸಿರಪ್, ಸ್ನಿಫಿಂಗ್ ಅಂಟು ಮತ್ತು ಕೈಗಾರಿಕಾ ಅಂಟುಗಳು ಸಹ ಇದೇ ರೀತಿಯ ಮಾದಕತೆಯನ್ನು ಉಂಟು ಮಾಡುತ್ತವೆ. ಆದರೆ, ಇವುಗಳು ಪ್ರಮುಖ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಅದರಲ್ಲೂ ಬೆಳವಣಿಗೆಯ ಹಂತದಲ್ಲಿದ್ದರೆ ಅಪಾಯ ಹೆಚ್ಚು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

condom

ಕುದಿಸಿದಾಗ ಸುವಾಸನೆಯ ಕಾಂಡೋಮ್‌ಗಳಿಂದ ಉಂಟಾದ ಈ ಹೊಗೆಯು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಶಾಶ್ವತವಾಗಿ ಮೆದುಳಿನ ಹಾನಿ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಾತ್ರವಲ್ಲ ಜೊತೆಗೆ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಕಲಿಕೆಯಲ್ಲಿ ಅಸಮರ್ಥತೆಯನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ.

condom

ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಎಂಬುವರು ಮಾತನಾಡಿ, ಕಾಂಡೋಮ್​ನಲ್ಲಿ ಆರೊಮ್ಯಾಟಿಕ್ ಸಂಯುಕ್ತಗಳು ಇರುತ್ತವೆ. ಇದು ತಂಬಾ ವ್ಯಸನಕಾರಿಯಾಗಿದೆ. ಅದನ್ನು ಮದ್ಯವನ್ನು ತಯಾರಿಸಲು ಬಳಸಲಾಗುತ್ತದೆ.  ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಸಹ ಬಳಸುತ್ತಾರೆ ಎಂದು ತಿಳಿಸಿದ್ದರು.

Latest Videos

click me!