Relationship Tips: ಸಂಗಾತಿ ಮೇಲೆ ಸಂದೇಹನಾ? ಸಂಬಂಧ ಚೆನ್ನಾಗಿರ್ಬೇಕು ಅಂದ್ರೆ ಇದನ್ನೋದಿ

First Published May 27, 2023, 5:29 PM IST

ಸಂದೇಹವು ಯಾವುದೇ ಸಂಬಂಧವನ್ನು ಅಲುಗಾಡಿಸಬಹುದು. ಸಣ್ಣ ವಿಷಯಗಳ ಬಗ್ಗೆ ನಿಮ್ಮ ಸಂಗಾತಿಯನ್ನು ಅನುಮಾನಿಸಲು ನೀವು ಬಯಸದಿದ್ದರೆ, ನೀವು ಈ ಸಲಹೆಗಳನ್ನು ಅನುಸರಿಸಬೇಕು.

ವಿಶ್ವಾಸವು ಯಾವುದೇ ಸಂಬಂಧದ ಅಡಿಪಾಯವಾಗಿದೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದ ಬಗ್ಗೆ ಮಾತನಾಡೋದಾದ್ರೆ, ಅದರಲ್ಲಿ ನಂಬಿಕೆ ಅನ್ನೋದು ಬಹಳ ಮುಖ್ಯ. ಪ್ರೀತಿ ಮತ್ತು ಗೌರವದೊಂದಿಗೆ, ಈ ಸಂಬಂಧದಲ್ಲಿ ನಂಬಿಕೆಯೂ ಇರಬೇಕು. ಯಾವುದೇ ಸಂಬಂಧವು ಸಮಯದೊಂದಿಗೆ ಸ್ಟ್ರಾಂಗ್ (strong bonding) ಆಗ್ತಾ ಹೋಗುತ್ತೆ, ಆದರೆ, ಸಂಬಂಧದಲ್ಲಿ ಸಂದೇಹವಿದ್ದರೆ, ಅದು ಬಲವಾಗುವ ಬದಲು ದುರ್ಬಲವಾಗುತ್ತದೆ. 

ಅನುಮಾನದಿಂದಾಗಿ, ಸಂಬಂಧವು ಹದಗೆಡುತ್ತದೆ ಮತ್ತು ಕೆಲವೊಮ್ಮೆ ಬ್ರೇಕಪ್, ಡಿವೋರ್ಸ್ ಹಂತಕ್ಕೆ ತಲುಪುತ್ತದೆ. ನೀವು ನಿಮ್ಮ ಸಂಗಾತಿಗೆ ಸಮಯ ನೀಡಬೇಕು, ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು, ಇದರ ಜೊತೆಗೆ ಸ್ಟ್ರಾಂಗ್ ರಿಲೇಶನ್ ಶಿಪ್ (relationship) ನಿಮ್ಮದಾಗಲು ಈ ಡೌಟ್ ಅನ್ನೋದು ಇರಲೇಬಾರದು.

ಸಣ್ಣ ವಿಷಯಗಳ ಬಗ್ಗೆ ನಿಮ್ಮ ಸಂಗಾತಿಯನ್ನು ಅನುಮಾನಿಸಲು (doubting partner) ನೀವು ಬಯಸದಿದ್ದರೆ ಮತ್ತು ಈ ಕಾರಣದಿಂದಾಗಿ, ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಬರುತ್ತಿದ್ದರೆ, ನೀವು ಈ ಸಲಹೆಗಳನ್ನು ಅನುಸರಿಸಬೇಕು. ಇಲ್ಲಿ ನೀಡಿರೋ ಸಲಹೆಗಳನ್ನ ಪಾಲಿಸಿದ್ರೆ ಖಂಡಿತವಾಗಿಯೂ ನಿಮ್ಮ ಸಂಬಂಧ ಚೆನ್ನಾಗಿರುತ್ತೆ. 

ಸಂಗಾತಿಗೆ ಸ್ಪೇಸ್ ನೀಡಿ (give space to partner): ಗಂಡ ಮತ್ತು ಹೆಂಡತಿಯ ಸಂಬಂಧದಲ್ಲಿ ಯಾವುದೇ ಗೌಪ್ಯತೆ ಇರಬಾರದು ಅನ್ನೋದನ್ನು ಕೇಳಿರುತ್ತೇವೆ, ಆದರೆ ಇದು ತಪ್ಪು. ಪ್ರತಿ ಸಂಬಂಧದಂತೆ, ಈ ಸಂಬಂಧದಲ್ಲೂ ಗೌಪ್ಯತೆ ಇರಬೇಕು. ನಿಮ್ಮ ಸಂಗಾತಿ ಯಾವಾಗಲೂ ನಿಮ್ಮೊಂದಿಗೆ ಇರಬೇಕು, ಎಲ್ಲವನ್ನೂ ನಿಮಗೆ ಹೇಳಬೇಕು ಅನ್ನೋದು ಶುದ್ಧ ತಪ್ಪು, ಕೆಲವು ವಿಷಯಗಳು ವೈಯಕ್ತಿಕವಾಗಿರಬೇಕು.

ಸಂಗಾತಿ ಫೋನ್ ನಲ್ಲಿ ಚಾಟ್ ಮಾಡುವುದನ್ನು, ಏನನ್ನಾದರೂ ಮರೆಮಾಚುವುದನ್ನು ನೀವು ಅನುಮಾನಿಸಿದರೆ, ಇದನ್ನು ಮಾಡಬೇಡಿ. ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ಪೇಸ್ ಇದೆ ಎಂದು ಅರ್ಥಮಾಡಿಕೊಳ್ಳಿ ಮತ್ತು ನೀವು ನಿಮ್ಮ ಸಂಗಾತಿಗೆ ಪರ್ಸನಲ್ ಸ್ಪೇಸ್ (personal space) ನೀಡದಿದ್ದರೆ, ನಿಮ್ಮ ಸಂಬಂಧವು ಹದಗೆಡಬಹುದು.

ಹೆಚ್ಚು ಯೋಚಿಸಬೇಡಿ (Do not Think much): ಹೆಚ್ಚಾಗಿ ಹುಡುಗಿಯರು ಮದುವೆಯ ನಂತರ ತಮ್ಮ ಗಂಡನ ಜಗತ್ತನ್ನು ತಮ್ಮದೇ ಆದ ಜಗತ್ತನ್ನಾಗಿ ಮಾಡಿಕೊಳ್ಳುತ್ತಾರೆ. ಸ್ನೇಹಿತರೊಂದಿಗೆ ಕಡಿಮೆ ಮಾತನಾಡುವುದು, ನಿಮಗೆ ಸಂತೋಷವನ್ನುಂಟುಮಾಡುವ ವಿಷಯಗಳಿಗೆ ಸಮಯ ನೀಡದಿರುವುದು, ಎಲ್ಲವೂ ತಪ್ಪು. ನಿಮ್ಮ ಸಂಗಾತಿಯು ತನ್ನದೇ ಆದ ಗುಂಪನ್ನು, ತನ್ನದೇ ಆದ ಪರ್ಸನಲ್ ಸ್ಪೇಸ್ ಹೊಂದಿರುವಂತೆ, ನೀವೂ ಸಹ. ನಿಮಗಿಷ್ಟ ಬಂದ ಕೆಲಸ ಮಾಡಿ. ಅತಿಯಾಗಿ ಯೋಚನೆ ಮಾಡೋದಕ್ಕೆ ಬ್ರೇಕ್ ಹಾಕಿ. ಕೆಲವೊಮ್ಮೆ ಅತಿಯಾಗಿ ಯೋಚಿಸುವುದು ಸಹ ಅನುಮಾನಕ್ಕೆ ಕಾರಣವಾಗುತ್ತದೆ.

ನಿಮ್ಮ ಮನಸ್ಸಿನಿಂದ ಭಯ ದೂರ ಮಾಡಿ (Remove insecurity or inner fear): ಹೆಚ್ಚಿನ ಮಹಿಳೆಯರ ಮನಸ್ಸಿನಲ್ಲಿ ತಮ್ಮ ಸಂಗಾತಿ ತಮ್ಮಿಂದ ದೂರ ಆಗ್ತಾರೆ ಎಂಬ ಭಯವಿರುತ್ತೆ. ಈ ಕಾರಣದಿಂದಾಗಿ, ಅವರ ಮನಸ್ಸಿನಲ್ಲಿ ಸಂದೇಹಗಳು ಸಹ ಬರುತ್ತವೆ. ಸಂಗಾತಿಯು ಸ್ನೇಹಿತ, ಆಫೀಸ್ ಕಲೀಗ್ ಜೊತೆ ಮಾತನಾಡೋದನ್ನ ನೋಡಿ, ಅವರು ತಮ್ಮ ಮನಸ್ಸಿನಲ್ಲೇ ಭಯ ಪಡ್ತಾರೆ. ಈ ಭಯವನ್ನು ಮನಸ್ಸಿನಿಂದ ತೆಗೆದುಹಾಕಿ. ನಿಮ್ಮ ಮೇಲೆ ವಿಶ್ವಾಸವಿಡಿ. ಆವಾಗ ಎಲ್ಲವೂ ಸರಿಯಾಗಿರುತ್ತೆ. 

ಮಾತನಾಡುವುದು ಅವಶ್ಯಕ (Communicate): ಸಂಗಾತಿಯ ಬಗ್ಗೆ ನಿಮಗೆ ಏನಾದರೂ ಸಮಸ್ಯೆ ಇದ್ದರೆ, ಮನಸ್ಸಿನಲ್ಲಿ ಏನಾದರೂ ಅನುಮಾನಗಳನ್ನು ಉಂಟುಮಾಡಿದರೆ, ಅದರ ಬಗ್ಗೆ ಸಂಗಾತಿಯೊಂದಿಗೆ ಮಾತನಾಡಿ. ವಿಷಯಗಳನ್ನು ಹೃದಯದಲ್ಲಿ ಇಡುವುದು ಇಬ್ಬರ ನಡುವೆ ಅಂತರವನ್ನು ಹೆಚ್ಚಿಸುತ್ತೆ. ಅನೇಕ ಬಾರಿ ಸಣ್ಣ ವಿಷಯದ ಬಗ್ಗೆ ಕೆಲವು ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರುತ್ತವೆ ಮತ್ತು ಆ ಪ್ರಶ್ನೆಗಳ ಬಗ್ಗೆ ಮಾತನಾಡದ ಕಾರಣ, ಮನಸ್ಸಿನಲ್ಲಿ ಅನುಮಾನಗಳು ಉದ್ಭವಿಸುತ್ತವೆ.

click me!