Relationship Tips: ನೀವು ಹೀಗೆ ಮಾಡೋದ್ರಿಂದಾನೇ ಸಂಬಂಧ ಮುರಿದು ಬೀಳೋದು

Published : May 25, 2023, 02:37 PM IST

ಸಂಬಂಧವನ್ನು ಸುಂದರಗೊಳಿಸಲು ನಾವು ಎಷ್ಟೇ ಶ್ರಮಿಸಿದರೂ, ಮನಸ್ಸಿಗೆ ಬರುವ ಕೆಲವು ವಿಷಯಗಳು ನಂತರ ಯಾವುದೇ ರೀತಿಯ ಸಂಬಂಧವನ್ನು ಸುಲಭವಾಗಿ ಹಾಳುಮಾಡಬಹುದು. ಅವುಗಳ ಬಗ್ಗೆ ಗಮನ ಹರಿಸಿ, ಅದನ್ನು ಆರಂಭದಲ್ಲೇ ಸರಿ ಮಾಡಿಕೊಂಡ್ರೆ ಸಂಬಂಧ ಸುಮಧುರವಾಗಿರುತ್ತೆ.

PREV
18
Relationship Tips: ನೀವು ಹೀಗೆ ಮಾಡೋದ್ರಿಂದಾನೇ ಸಂಬಂಧ ಮುರಿದು ಬೀಳೋದು

ಯಾವುದೇ ರೀತಿಯಲ್ಲಿ ಸಂಬಂಧವನ್ನು ಪ್ರಾರಂಭಿಸುವುದು ತುಂಬಾ ಸುಲಭ, ಆದರೆ ಅದನ್ನು ನಿಜವಾದ ಹೃದಯದಿಂದ ಸಾಗಿಸುವುದು ತುಂಬಾ ಕಷ್ಟ. ದಾಂಪತ್ಯ ಜೀವನವು (married life) ತುಂಬಾ ವಿಶೇಷವಾಗಿರುತ್ತೆ ಮತ್ತು ಇದು ಖಂಡಿತವಾಗಿಯೂ ಅವರಿಬ್ಬರ ಜೀವನದಲ್ಲಿ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ತರುತ್ತೆ. ಅದೇ ಸಮಯದಲ್ಲಿ, ನಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಕೆಲವು ವಿಷಯಗಳು ನಮ್ಮ ನಡುವೆ ಬಿರುಕುಗಳನ್ನುಂಟು ಮಾಡುತ್ತೆ.
 

28

ಯಾವುದೇ ಸಂಬಂಧವನ್ನು ಸುಂದರಗೊಳಿಸಲು, ಪರಸ್ಪರ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ರಿಲೇಶನ್ಶಿಪ್ ಎಕ್ಸ್ಪರ್ಟ್ ಹೇಳುತ್ತಾರೆ. ಹೆಚ್ಚು ಜಗಳಗಳಿಂದಾಗಿ, ನಕಾರಾತ್ಮಕ ವಿಷಯಗಳು ಮನಸ್ಸಿಗೆ ಬರಲು ಪ್ರಾರಂಭಿಸುತ್ತೆ. ಹಾಗಿದ್ರೆ ಯಾವ ವಿಷಯದ ಕಡೆಗೆ ನಾವು ಗಮನ ಹರಿಸಬೇಕು ಅನ್ನೋದನ್ನು ನೋಡೋಣ.

38

ಪರಸ್ಪರ ಹೋಲಿಕೆ ಮಾಡೋದು (Comparing Each Other):  ಪ್ರತಿ ಸಂಬಂಧದಲ್ಲಿ ಏರಿಳಿತಗಳಿವೆ, ಆದರೆ ಇದರರ್ಥ ನೀವು ನಿಮ್ಮನ್ನು ಪರಸ್ಪರ ಅಥವಾ ನಿಮ್ಮ ಸಂಗಾತಿಯ ಸ್ನೇಹಿತರೊಂದಿಗೆ ಹೋಲಿಸಲು ಪ್ರಾರಂಭಿಸುತ್ತೀರಿ ಎಂದಲ್ಲ, ಹೋಲಿಕೆ ಮಾಡೋದು ದೊಡ್ಡ ತಪ್ಪು. ನೀವು ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ವಿಷಯಗಳನ್ನು ತರಬೇಕು ಮತ್ತು ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದರ ಬಗ್ಗೆ ಯೋಚಿಸಬೇಕು. 

48

ಪರಸ್ಪರ ಹೋಲಿಕೆ ಮಾಡಲು ಪ್ರಾರಂಭವಾದಾಗ ಯೋಚನೆಗಳು ಹೆಚ್ಚಾಗುತ್ತವೆ, ಅಲ್ಲದೇ ಇದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಲು ಆರಂಭವಾಗುತ್ತೆ. ಹಾಗಾಗಿ ಹೋಲಿಕೆ ಮಾಡೋದನ್ನು ಬಿಟ್ಟು, ಒಬ್ಬರನ್ನೊಬ್ಬರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿ. ಇದರಿಂದ ಸಂಬಂಧ ಸುಮಧುರವಾಗಿರುತ್ತೆ. 

58

ಮಾತನಾಡದೇ ಇರೋದು (Not Talking): ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ, ನಾವು ಮುಖಾಮುಖಿಯಾಗಿ ಮಾತನಾಡಲು ಹಿಂಜರಿಯುತ್ತೇವೆ, ಇದರಿಂದಾಗಿ ಸಂಭಾಷಣೆ ಕಡಿಮೆಯಾಗುತ್ತಿದೆ. ಅದೇ ಸಮಯದಲ್ಲಿ, ಅನೇಕ ಬಾರಿ ಕೆಲಸದಲ್ಲಿ ಬ್ಯುಸಿಯಾಗಿರೋದ್ರಿಂದ, ನಮ್ಮ ಸಂಗಾತಿಗೆ ಸಮಯ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಂಬಂಧ ಹದಗೆಡುತ್ತೆ

68

ಜೀವನದಲ್ಲಿ ಗುರಿಗಳು ಎಲ್ಲರಿಗೂ ಇರುತ್ತೆ. ಆದರೆ ಅದರ ಜೊತೆಗೆ ದಂಪತಿಗಳ ಜೀವನದಲ್ಲಿ ಅಗತ್ಯಗಳು ಸಹ ಹೆಚ್ಚಾಗಿರುತ್ತೆ. ನೀವು ರಿಲೇಶನ್ ಶಿಪ್ (relationship) ನಲ್ಲಿದ್ರೆ ಪರಸ್ಪರ ಸಮಯ ಕಳೆಯುವುದು ನಿಮ್ಮ ಜವಾಬ್ದಾರಿಯಾಗುತ್ತದೆ. ಮಾತನಾಡದಿರಲು ಮತ್ತೊಂದು ಕಾರಣವೆಂದರೆ ನನ್ನ ಸಂಗಾತಿಯು ನನ್ನ ಅಂಶವನ್ನು ಅರ್ಥಮಾಡಿಕೊಳ್ಳುತ್ತಾರೋ ಇಲ್ಲವೋ ಎಂದು ಅಂದುಕೊಂಡು ಸುಮ್ಮನಿರುತ್ತೇವೆ. ಆದ್ರೆ ಇದನ್ನೆಲ್ಲಾ ಮನಸಿಂದ ದೂರ ಮಾಡಿ, ಮನಸ್ಸು ಬಿಚ್ಚಿ ಮಾತನಾಡಿದ್ರೆ ಎಲ್ಲವೂ ಚೆನ್ನಾಗಿರುತ್ತೆ.
 

78

ಜಗಳ ಮಾಡೋದು (couple Fight): ಯಾವುದೇ ಸಂಬಂಧವನ್ನು ಬಲಪಡಿಸಲು, ಪರಸ್ಪರರ ನಡುವೆ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ್ರೆ ಈವಾಗ ಹೆಚ್ಚಿನ ಜೋಡಿಗಳು ಮುಂದಾಲೋಚನೆ ಮಾಡದೆ ಎಲ್ಲಾದಕ್ಕೂ ಜಗಳ ಮಾಡಿಕೊಂಡು ಕೂರುತ್ತಾರೆ. ಇದರಿಂದ ಸಂಬಂಧ ಹಾಳಾಗುತ್ತೆ. 

88

ದಾಂಪತ್ಯ ಜೀವನ ಚೆನ್ನಾಗಿ ಇರಬೇಕು ಅಂದ್ರೆ ಜಗಳ ಮಾಡೋದನ್ನು ಬಿಡಬೇಕು. ಜಗಳ ಮಾಡೋ ಬದಲಾಗಿ, ಕೂತು ಮಾತನಾಡಿ, ಯಾಕೆ ಸಮಸ್ಯೆ ಉಂಟಾಗಿದೆ ಅನ್ನೋದನ್ನು ತಿಳಿಯಿರಿ. ಇದರಿಂದ ಸಂಬಂಧ ಸುಧಾರಿಸುತ್ತೆ, ನೀವು ಪ್ರೀತಿ, ಸಹಬಾಳ್ವೆಯಿಂದ ಇರಲು ಸಾಧ್ಯವಾಗುತ್ತೆ. 
 

Read more Photos on
click me!

Recommended Stories