Divorce Survey: ಡಿವೋರ್ಸ್ ಆದ್ಮೇಲೆ ಹಳೇ ಫೋಟೋಸ್ ಏನ್ ಮಾಡ್ತಾರೆ? ಇಲ್ಲಿದೆ ರಿಪೋರ್ಟ್

Published : Sep 29, 2026, 04:27 PM IST

Divorce survey facts: ಡಿವೋರ್ಸ್ ಆದ್ಮೇಲೆ ಮದುವೆ ಫೋಟೋಗಳನ್ನ ಏನ್ ಮಾಡ್ತಾರೆ? ಹಳೇ ಸಂಗಾತಿ ಜೊತೆಗಿನ ಎಲ್ಲಾ ಸಂಬಂಧ ಕಡಿದುಕೊಳ್ಳಲೇಬೇಕಾ? ವಿಚ್ಛೇದನದ ನಂತರ ಹೊಸ ಜೀವನ ಶುರು ಮಾಡುವಾಗ ಎಕ್ಸ್ ಜೊತೆ ಹೇಗಿರಬೇಕು ಅನ್ನೋದರ ಬಗ್ಗೆ ಹೊಸದೊಂದು ಸರ್ವೆ ಅಚ್ಚರಿಯ ವಿಚಾರಗಳನ್ನ ಬಿಚ್ಚಿಟ್ಟಿದೆ.

PREV
14
ಡಿವೋರ್ಸ್ ಆದ್ಮೇಲೆ ಮದುವೆ ಫೋಟೋ ಕಥೆ ಏನು?

ಡಿವೋರ್ಸ್ ಆದ್ಮೇಲೆ ಮದುವೆ ಫೋಟೋ ಕಥೆ ಏನು?
ಡಿವೋರ್ಸ್ ಆದ ತಕ್ಷಣ ಹಳೇ ನೆನಪುಗಳನ್ನೆಲ್ಲಾ ಅಳಿಸಿ ಹಾಕಬೇಕಾ? ಎಕ್ಸ್ ಜೊತೆಗಿನ ಸಂಬಂಧ ಸಂಪೂರ್ಣವಾಗಿ ಕಡಿದುಕೊಳ್ಳಬೇಕಾ? ಈ ಬಗ್ಗೆ ಇತ್ತೀಚೆಗೆ ನಡೆದ ಸರ್ವೆಯೊಂದು ಅಚ್ಚರಿಯ ವಿಚಾರಗಳನ್ನ ಹೊರಹಾಕಿದೆ. ವಿಚ್ಛೇದನ ಪಡೆದ 10 ಜನರಲ್ಲಿ 7 ಮಂದಿ ಈಗಲೂ ತಮ್ಮ ಮದುವೆ ಫೋಟೋಗಳನ್ನ ಜೋಪಾನವಾಗಿ ಇಟ್ಟುಕೊಂಡಿದ್ದಾರಂತೆ.

ಭಾರತದ ಮ್ಯಾಚ್‌ಮೇಕಿಂಗ್ ಆ್ಯಪ್ 'Rebounce' ಈ ಸರ್ವೆ ನಡೆಸಿದೆ. ಕನಿಷ್ಠ ಎರಡು ವರ್ಷಗಳ ಹಿಂದೆ ಡಿವೋರ್ಸ್ ಪಡೆದ, 30 ರಿಂದ 40 ವರ್ಷ ವಯಸ್ಸಿನ 9,283 ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಎಕ್ಸ್ ಜೊತೆಗಿನ ಬೌಂಡರಿ, ಹಳೇ ನೆನಪುಗಳು ಹಾಗೂ ಹೊಸ ರಿಲೇಷನ್‌ಶಿಪ್‌ನಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಇವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

24
ಸಂಪೂರ್ಣ ಸಂಬಂಧ ಕಡಿಯೋಕೆ ಆಗುತ್ತಾ?

ಸರ್ವೆ ರಿಪೋರ್ಟ್ ಪ್ರಕಾರ, 35 ವರ್ಷ ಮೇಲ್ಪಟ್ಟ ಡಿವೋರ್ಸಿಗಳಲ್ಲಿ ಶೇ.47 ರಷ್ಟು ಮಂದಿ ಎಕ್ಸ್ ಜೊತೆಗಿನ ಸಂಪರ್ಕ ಸಂಪೂರ್ಣವಾಗಿ ಕಡಿದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಅದರಲ್ಲೂ ಮಕ್ಕಳಿದ್ದಾಗ ಹಳೇ ಸಂಗಾತಿಯನ್ನ ಪೂರ್ತಿಯಾಗಿ ದೂರ ಇಡೋಕೆ ಸಾಧ್ಯವಿಲ್ಲ. ಶೇ.31 ರಷ್ಟು ಮಂದಿ ಈಗಲೂ ತಮ್ಮ ಎಕ್ಸ್ ಜೊತೆ ಆಗಾಗ ಮಾತನಾಡುತ್ತಾರಂತೆ. ಮಕ್ಕಳ ಸ್ಕೂಲ್ ವಿಚಾರ, ಆಸ್ತಿ ಅಥವಾ ಕಾನೂನು ಪ್ರಕ್ರಿಯೆಗಳು ಹಾಗೂ ಕೌಟುಂಬಿಕ ಸಂಬಂಧಗಳೇ ಇದಕ್ಕೆ ಮುಖ್ಯ ಕಾರಣ ಅಂತ ಸರ್ವೆ ಹೇಳಿದೆ.

34
ಮಕ್ಕಳಿಗಾಗಿ ಫೋಟೋ ಉಳಿಸಿಕೊಳ್ಳುವ ಪೋಷಕರು

ಮದುವೆ ಫೋಟೋಗಳ ವಿಚಾರಕ್ಕೆ ಬಂದರೆ, ಶೇ.70 ರಷ್ಟು ಮಂದಿ ಈಗಲೂ ಆ ಫೋಟೋಗಳನ್ನ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಆದರೆ, ಫೋಟೋ ಇಟ್ಟುಕೊಂಡ ತಕ್ಷಣ ಹಳೇ ಸಂಬಂಧವನ್ನ ಮುಂದುವರಿಸುವ ಉದ್ದೇಶ ಅವರಲ್ಲಿಲ್ಲ ಅಂತ ಸರ್ವೆ ಸ್ಪಷ್ಟಪಡಿಸಿದೆ. ಮುಖ್ಯವಾಗಿ ಮಕ್ಕಳು, ಕೌಟುಂಬಿಕ ನೆನಪುಗಳು ಹಾಗೂ ಒಟ್ಟಿಗೆ ಕಳೆದ ವರ್ಷಗಳ ಒಂದು ದಾಖಲೆಯಾಗಿ ಮಾತ್ರ ಅವರು ಈ ಫೋಟೋಗಳನ್ನ ಉಳಿಸಿಕೊಂಡಿದ್ದಾರೆ.

44
ಹೊಸ ಜೀವನದ ಮೇಲೆ ಹಳೇ ನೆನಪುಗಳ ಪ್ರಭಾವ

30 ರಿಂದ 40 ವರ್ಷದೊಳಗಿನ ಡಿವೋರ್ಸಿಗಳಲ್ಲಿ ಶೇ.36 ರಷ್ಟು ಮಂದಿ, ಹಳೇ ಜಾಗಗಳು, ಕಾರ್ಯಕ್ರಮಗಳು ಹಾಗೂ ನೆನಪುಗಳ ಬಗ್ಗೆ ಈಗಲೂ ಪಾಸಿಟಿವ್ ಭಾವನೆ ಹೊಂದಿದ್ದಾರೆ. ಆದರೆ, ಇವು ಅವರ ಪ್ರಸ್ತುತ ರಿಲೇಷನ್‌ಶಿಪ್ ಮೇಲೆ ಯಾವುದೇ ನೆಗೆಟಿವ್ ಪ್ರಭಾವ ಬೀರುತ್ತಿಲ್ಲ ಅಂತ ಅವರು ಹೇಳಿದ್ದಾರೆ.

ಡಿವೋರ್ಸ್ ಆದ್ಮೇಲೆ ಎಕ್ಸ್ ಜೊತೆ ಹೇಗಿರಬೇಕು ಅನ್ನೋದಕ್ಕೆ ಎಲ್ಲರಿಗೂ ಒಂದೇ ರೂಲ್ಸ್ ಅನ್ವಯ ಆಗಲ್ಲ. ಮಕ್ಕಳು, ಕುಟುಂಬ, ಆಸ್ತಿ ಹಾಗೂ ಹಳೇ ಬಾಂಧವ್ಯದ ಆಧಾರದ ಮೇಲೆ ಅವರ ಬೌಂಡರಿಗಳು ಬದಲಾಗುತ್ತವೆ. ಹೊಸ ಸಂಬಂಧದ ಮೇಲೆ ಹಳೇ ರಿಲೇಷನ್‌ಶಿಪ್ ಪ್ರಭಾವ ಬೀರದಂತೆ ನೋಡಿಕೊಳ್ಳುವುದೇ ಇಲ್ಲಿನ ಅತಿ ಮುಖ್ಯ ವಿಚಾರ ಅಂತ ಸರ್ವೆ ತಿಳಿಸಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories