ಪ್ಯಾರೀಸ್ ಫೋಟೋ ರಹಸ್ಯ ಬಯಲಾಯ್ತು! Bigg Boss ಸ್ಪಂದನಾ ಜೊತೆಗಿನ ಆ ಹುಡುಗ ಯಾರು? ಮದುವೆ ಯಾವಾಗ

Published : Aug 17, 2026, 09:19 PM IST

ಬಿಗ್​ಬಾಸ್​ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ, ಪ್ಯಾರೀಸ್ ಪ್ರವಾಸದ ಫೋಟೋ ಹಂಚಿಕೊಂಡಿದ್ದು, ಅದರಲ್ಲಿರುವ ಹುಡುಗ ಸೂರಜ್ ಸಿಂಗ್ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅದು ಸೂರಜ್ ಅಲ್ಲ, ಶೀಘ್ರದಲ್ಲೇ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡುವುದಾಗಿ ಸ್ಪಂದನಾ ಸ್ಪಷ್ಟಪಡಿಸಿದ್ದಾರೆ.

PREV
16
ಸ್ಪಂದನಾ ಸೋಮಣ್ಣ ಫೋಟೊ

ಬಿಗ್​ಬಾಸ್​​ ಮೂಲಕ ಖ್ಯಾತಿ ಪಡೆದವರು ನಟಿ ಸ್ಪಂದನಾ ಸೋಮಣ್ಣ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇವರು, ಇತ್ತೀಚೆಗೆ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದುಕೊಂಡಿದ್ದರು.

26
ಸೂರಜ್​ ಸಿಂಗ್​ ಎಂದೇ ವೈರಲ್​

ಆ ಫೋಟೋ ನೋಡಿದವರು ಇವರು ಬಿಗ್​ಬಾಸ್​ ಸೂರಜ್​ ಸಿಂಗ್​ ಎಂದೇ ಹೇಳಿದ್ದರು. ಏಕೆಂದರೆ ಹಿಂದಿನಿಂದ ಅವರು ಹಾಗೆಯೇ ಕಾಣಿಸುತ್ತಿದ್ದರು. ಇದೀಗ ಸ್ಪಂದನಾ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ.

36
ಎದುರಾಯ್ತು ಪ್ರಶ್ನೆ

ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸ್ಪಂದನಾ ಅವರಿಗೆ ಇದೇ ಪ್ರಶ್ನೆ ಕೇಳಲಾಗಿದೆ. ಪ್ಯಾರೀಸ್​ನಲ್ಲಿ ಇರುವ ಹುಡುಗ ಸೂರಜ್​ ಸಿಂಗ್​ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ, ಇದು ನಿಜನಾ ಎಂದು ಪ್ರಶ್ನಿಸಲಾಗಿದೆ.

46
ತುಂಬಾ ತಿಂಗಳಾಗಿದೆ

ಅದಕ್ಕೆ ನಟಿ, ಇಲ್ಲಪ್ಪಾ, ನಾವಿಬ್ಬರೂ ಮಾತನಾಡದೇ ತುಂಬಾ ತಿಂಗಳುಗಳೇ ಆಗಿವೆ. ಮದುವೆಯ ಬಗ್ಗೆ ಅಪ್​ಡೇಟ್​ ಕೊಡುತ್ತೇನೆ. ಶೀಘ್ರದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

56
ನಾಚಿ ನೀರಾದ ನಟಿ

ಪ್ಯಾರೀಸ್​ ಟೂರಿನ ಬಗ್ಗೆ ಪ್ರಶ್ನಿಸಿದಾಗ ಸ್ಪಂದನಾ, ನಾಚಿ ನೀರಾದರು. ಟೂರ್​ ತುಂಬಾ ಚೆನ್ನಾಗಿತ್ತು. ಜನರು ನಮಗೆ ಇಷ್ಟೊಂದು ಪ್ರೀತಿ ಕೊಡುವಾಗ ಪರ್ಸನಲ್​ ಲೈಫ್​ ಬಗ್ಗೆಯೂ ಗೊತ್ತಿರಲಿ ಎಂದು ಫೋಟೋ ಹಾಕಿದ್ದೆ. ಆದರೆ ಅವರು ಸೂರಜ್​ ಸಿಂಗ್​ ಅಲ್ಲ. ಅವರ ಬಗ್ಗೆ ಶೀಘ್ರದಲ್ಲಿ ಹೇಳುವೆ ಎಂದಿದ್ದಾರೆ.

66
ಹೊಸ ನಗರಕ್ಕೆ ಸ್ಥಳಾಂತರ

ಅಂದಹಾಗೆ ಸ್ಪಂದನಾ ಈಚೆಗೆ ಇನ್ನೊಂದು ಪೋಸ್ಟ್​ ಶೇರ್​ ಮಾಡಿದ್ದರು. ಅದರಲ್ಲಿ ಅವರು, ನಾನು ಕೆಲಸಕ್ಕಾಗಿ ಹೊಸ ನಗರಕ್ಕೆ ಸ್ಥಳಾಂತರಗೊಂಡು 3 ವರ್ಷಗಳಾಗಿವೆ. ನನ್ನ ಸ್ವಂತ ಜೀವನವನ್ನು ನಿರ್ಮಿಸಲು ನಾನು ನನ್ನ ಮನೆ, ನನ್ನ ಜನರು ಮತ್ತು ಪರಿಚಿತ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ. ಇದು ಯಾವಾಗಲೂ ಸುಲಭವಾಗಿರಲಿಲ್ಲ, ಆದರೆ ಇದು ನನ್ನ ಬಗ್ಗೆ, ಸ್ವಾತಂತ್ರ್ಯ, ನನ್ನ ಸ್ವಂತ ಸಹವಾಸದಲ್ಲಿ ಸೌಕರ್ಯ ಮತ್ತು ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಬಗ್ಗೆ ನನಗೆ ತುಂಬಾ ಕಲಿಸಿದೆ ಎಂದು ನಟಿ ಶೇರ್​ ಮಾಡಿಕೊಂಡಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories