ಬಿಗ್ ಬಾಸ್ ನಂತರವೂ ಸ್ನೇಹ ಉಳಿಸಿಕೊಂಡಿರುವ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಜೋಡಿಯ ಬಗ್ಗೆ ಸದಾ ಚರ್ಚೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಐಶ್ವರ್ಯರನ್ನು 'ತಂಗಿ' ಎಂದು ಶಿಶಿರ್ ಕರೆದಿರುವ ವಿಡಿಯೋ ವೈರಲ್ ಆಗಿದ್ದು, ಆ ಹೇಳಿಕೆಯ ಹಿಂದಿನ ನಿಜವಾದ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ಲವ್, ರೊಮಾನ್ಸ್ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ (Aishwarya Sindhogi) ಮತ್ತು ಶಿಶಿರ್ ಶಾಸ್ತ್ರಿ (Shishir Shastry)
26
ಸಾಕಷ್ಟು ಬಾರಿ ಜೊತೆ
ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರಿಂದ ಇವರಿಬ್ಬರ ಬಾಂಡಿಂಗ್ ಬೇರೆಯದ್ದೇ ಹೇಳುತ್ತಿದೆ ಎಂದು ಸಕತ್ ಚರ್ಚೆಯಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅದೇ ರೀತಿ, ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಲೇ ಸಾಗಿದೆ.
36
ಜೋಡಿಯ ಫೋಟೋಶೂಟ್
ಇಂತಿಪ್ಪ ಜೋಡಿ ಇದಾಗಲೇ ಹಲವು ಬಾರಿ ಒಟ್ಟಿಗೇ ಕಾಣಿಸಿಕೊಂಡಿದ್ದಿದೆ. ಮೈ ಚಳಿ ಬಿಟ್ಟು ಸ್ಟೆಪ್ ಹಾಕಿದ್ದು ಇದೆ. ಇದೀಗ ಈ ಜೋಡಿಯ ಮತ್ತೊಂದು ಫೋಟೋಶೂಟ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಮೇಲೂ ಏನಿಲ್ಲ, ಏನಿಲ್ಲ ಹೇಳ್ತೀರಾ ಎಂದು ಅಭಿಮಾನಿಗಳು ಕೇಳ್ತಿದ್ದಾರೆ.
ಇಂತಿಪ್ಪ ಜೋಡಿ, ಈಗ ಏಕಾಏಕಿಯಾಗಿ ಅಣ್ಣ-ತಂಗಿ ಎಂದುಬಿಟ್ಟರೆ ಹೇಗಿರುತ್ತೆ? ಆದ್ರೆ ಶಿಶಿರ್ ಅವರ ಬಾಯಿಯಿಂದ ನಿಜಕ್ಕೂ ಆ ಮಾತು ಬಂದಿದೆ. ಆದ್ರೆ ಅವರು ಹಾಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ಸಾರ್ವಭೌಮ ಎನ್ನುವ ಚಾನೆಲ್ನವರು ಶಿಶಿರ್ ಅವರನ್ನು ಮಾತನಾಡಿಸಿದ್ದಾರೆ. ಸೀರೆ ಅಂಗಡಿಯೊಂದರ ಕಾರ್ಯಕ್ರಮಕ್ಕೆ ಬಂದಾಗ, ಅವರಿಗೆ ಮಾತನಾಡಿಸಿದ್ದಾರೆ.
56
ಅಲ್ಲಿ ಅಸಲಿಗೆ ಆಗಿದ್ದೇನು?
ಆಗ, ಅವರಿಗೆ ನಾನು ಪ್ರಶ್ನೆ ಕೇಳ್ತೇನೆ. ನೀವು ಅದಕ್ಕೆ ತಪ್ಪು ಉತ್ತರ ಕೊಡಬೇಕು ಎಂದು ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ಬಳಿಕ ಕೊನೆಯದಾಗ ಐಶ್ವರ್ಯ ನಿಮಗೆ ಏನು ಆಗಬೇಕು ಎಂದು ಪ್ರಶ್ನಿಸಿದಾಗ ತಪ್ಪು ಉತ್ತರದ ರೂಪದಲ್ಲಿ ತಂಗಿ ಎಂದು ಹೇಳಿ ತಾವೇ ಜೋರಾಗಿ ನಕ್ಕಿದ್ದಾರೆ ಅಷ್ಟೇ. ಆದರೆ ಐಶ್ವರ್ಯ ನನಗೆ ತಂಗಿ ಆಗಬೇಕು ಎನ್ನುವ ಕ್ಲಿಪ್ ಅಷ್ಟೇ ಕಟ್ ಮಾಡಿ ಅದು ಸೋಷಿಯಲ್ಮೀಡಿಯಾದಲ್ಲಿ ಶೇರ್ ಆಗ್ತಿದೆ!
66
ಮದುವೆಯ ಬಗ್ಗೆ ಮಾತನಾಡದ ಜೋಡಿ
ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್ ಪಾರ್ಟನರ್ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.