ಸಾಂಬಾರ್‌ ಕೊಡಲು ಸೋಂಬೇರಿಯಾದ ಕ್ಯಾಂಟೀನ್‌ ಅಣ್ಣ, ಸಿಟ್ಟಾದ ಮಹಿಳೆ ಚಪ್ಪಲಿ ಎಸೆದಳಣ್ಣ!

Published : Jun 11, 2026, 04:41 PM IST

Mangalagiri aiims canteen sambar issue ಮೂರೇ ಬಾರಿ ಸಾಂಬಾರ್ ಕೊಟ್ಟಿದ್ದರೂ ಮತ್ತಷ್ಟು ಬೇಕೆಂದು ಒತ್ತಾಯಿಸಿದ ಮಹಿಳೆ, ಸಿಬ್ಬಂದಿ ನಿರಾಕರಿಸಿದ ಕಾರಣ ಕೋಪಗೊಂಡು ಚಪ್ಪಲಿ ಎಸೆದು ಹಲ್ಲೆ ನಡೆಸಲಾಗಿದೆ. 

PREV
14
ಏಮ್ಸ್ (AIIMS) ಕ್ಯಾಂಟೀನ್‌ನಲ್ಲಿ ಘಟನೆ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿರುವ ಏಮ್ಸ್ (AIIMS) ಕ್ಯಾಂಟೀನ್‌ನಲ್ಲಿ ನಡೆದ ಘಟನೆ ಒಂದು ಕ್ಷಣಕ್ಕೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೆಚ್ಚುವರಿ ಸಾಂಬಾರ್ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಕ್ಯಾಂಟೀನ್ ಸಿಬ್ಬಂದಿ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

24
ಸಾಂಬಾರ್ ವಿಷಯಕ್ಕೆ ಗಲಾಟೆ

ಲಭ್ಯ ಮಾಹಿತಿಯ ಪ್ರಕಾರ, ಮಹಿಳೆ ಊಟ ಮಾಡುತ್ತಿದ್ದ ವೇಳೆ ಮತ್ತೊಮ್ಮೆ ಸಾಂಬಾರ್ ಬಡಿಸುವಂತೆ ಕೇಳಿದ್ದಾರೆ. ಆದರೆ ಸಿಬ್ಬಂದಿ, ಈಗಾಗಲೇ ಮೂರು ಬಾರಿ ಸಾಂಬಾರ್ ನೀಡಲಾಗಿದೆ ಎಂದು ಹೇಳಿ ಮತ್ತೊಮ್ಮೆ ಬಡಿಸಲು ನಿರಾಕರಿಸಿದ್ದಾರೆ. ಈ ವಿಷಯಕ್ಕೆ ಇಬ್ಬರ ನಡುವೆ ವಾಗ್ವಾದ ಆರಂಭಗೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ.

34
ಸಿಬ್ಬಂದಿ ಮೇಲೆ ಮಹಿಳೆ ಆಕ್ರೋಶ

ಕೋಪಗೊಂಡ ಮಹಿಳೆ ಸಿಬ್ಬಂದಿಯೊಂದಿಗೆ ಜೋರಾಗಿ ವಾಗ್ವಾದ ನಡೆಸಿದ್ದು, ಬಳಿಕ ತನ್ನ ಚಪ್ಪಲಿಯನ್ನು ತೆಗೆದು ಸಿಬ್ಬಂದಿ ಮೇಲೆ ಎಸೆದಿದ್ದಾರೆ ಎನ್ನಲಾಗಿದೆ. ಅಲ್ಲಿದ್ದ ಇತರರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಮಹಿಳೆ ಆಕ್ರೋಶ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.

44
ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಈ ಸಂಪೂರ್ಣ ಘಟನೆ ಕ್ಯಾಂಟೀನ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಸಣ್ಣ ವಿಚಾರಕ್ಕೆ ಸಿಬ್ಬಂದಿ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿರುವ ಮಹಿಳೆಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories