Bigg Boss ಕಾವ್ಯಾ ಶೈವ ಕ್ಯೂಟ್​ ಫೋಟೋಶೂಟ್​: ಏನಾದ್ರೂ ಗುಡ್​ ನ್ಯೂಸಾ? ನಟಿ ಸೈಲೆಂಟ್​

Published : Sep 23, 2026, 11:18 PM IST

ಬಿಗ್‌ಬಾಸ್ 12ರ ಸ್ಪರ್ಧಿ ಕಾವ್ಯಾ ಶೈವ ತಮ್ಮ ಹೊಸ ಫೋಟೋಶೂಟ್ ಹಂಚಿಕೊಂಡಿದ್ದು, ಅಭಿಮಾನಿಗಳು ಗುಡ್ ನ್ಯೂಸ್ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಬಿಗ್‌ಬಾಸ್ ವಿಜೇತ ಗಿಲ್ಲಿ ನಟ ಮತ್ತು ಕಾವ್ಯಾ ನಡುವಿನ ಆಪ್ತತೆ ಬಗ್ಗೆ ಹಲವು ವದಂತಿಗಳಿದ್ದರೂ, ತಾವು ಕೇವಲ ಸ್ನೇಹಿತರು ಎಂದು ಗಿಲ್ಲಿ ನಟ ಸ್ಪಷ್ಟಪಡಿಸಿದ್ದಾರೆ.

PREV
16
12ನೇ ಸೀಸನ್​ಗೆ ಡಿಮಾಂಡ್​

ಬಿಗ್​ಬಾಸ್​​ 12 (Bigg Boss 12) ಹವಾ ತಣ್ಣಗಾಗುತ್ತಾ ಬಂದು 13ನೇ ಸೀಸನ್​ ಆರಂಭ ಆಗಿದ್ದರೂ, 12ರ ಕೆಲವು ಸ್ಪರ್ಧಿಗಳಿಗೆ ಇನ್ನೂ ಸಕತ್​ ಡಿಮಾಂಡ್​ ಇದ್ದೇ ಇದೆ. ಕೆಲವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಥವರಲ್ಲಿ ಒಬ್ಬರು ಬಿಗ್​ಬಾಸ್​​ ವಿನ್ನರ್​ ಗಿಲ್ಲಿ ನಟ ಮತ್ತು ಅವರ ಜೊತೆ ಸಕತ್​ ಸೌಂಡ್​ ಮಾಡಿದ್ದ ಕಾವ್ಯಾ ಶೈವ.

26
ನಿಮಗ್ಯಾವುದು ಇಷ್ಟ

ಇದೀಗ ನಟಿ ಕ್ಯೂಟ್​ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಶೇರ್ ಮಾಡಿದ್ದಾರೆ. ನಿಮಗೆ ಯಾವ ಫೋಟೋ ಇಷ್ಟ ಆಯ್ತು ಎಂದು ನಟಿ ಪ್ರಶ್ನಿಸಿದ್ದು, ಇದಕ್ಕೆ ಫ್ಯಾನ್ಸ್​ ನೀವು ಹೇಗಿದ್ದರೂ ಚೆಂದ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಏನಾದರೂ ಗುಡ್​ನ್ಯೂಸಾ ಕೇಳಿದ್ದರೂ ನಟಿ ಯಾವುದಕ್ಕೂ ರಿಪ್ಲೈ ಮಾಡದೇ ಸೈಲೆಂಟ್​ ಆಗಿದ್ದಾರೆ.

36
ನಟಿಯ ಕುರಿತು

ಇನ್ನು ನಟಿ, ಕಾವ್ಯ ಶೈವ ಕುರಿತು ಹೇಳುವುದಾದರೆ, ಇವರು, ಸೀರಿಯಲ್​​ ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಮೂಲತಃ ಕೆ.ಆರ್.ಪೇಟೆಯವರಾದ ಕಾವ್ಯ ಶೈವ, ಮೈಸೂರಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ. 'ಭೂಮಿ ತಾಯಾಣೆ' ಕಾವ್ಯ ನಟನೆಯ ಮೊದಲ ಸೀರಿಯಲ್.

46
ಡಾನ್ಸ್​ ಷೋ

ಇದಾದ ಬಳಿಕ ಡಾನ್ಸ್‌ ಶೋನಲ್ಲಿಯೂ ಭಾಗವಹಿಸಿದರು. ನಟ ಯಶ್​ ಅವರ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಣದ ಕೊತ್ತಲವಾಡಿ ಚಿತ್ರದಲ್ಲಿಯೂ ಮಿಂಚುವ ಮೂಲಕ ಬಿಗ್​ಬಾಸ್​ನಲ್ಲಿ ಕಾಣಿಸಿಕೊಂಡಿದ್ದಾರೆ ಕಾವ್ಯಾ.

56
ಪ್ರೀತಿಯಲ್ಲಿ ಜೋಡಿ

ಇನ್ನು ಕಾವ್ಯಾ ಶೈವ ಎಂದಾಕ್ಷಣ ಕೇಳಿ ಬರುವ ಹೆಸರು ಬಿಗ್​ಬಾಸ್ 12ರ ವಿಜೇತ ಗಿಲ್ಲಿ ನಟ. ಆದರೆ ಬಿಗ್​ಬಾಸ್​ ಮನೆಯಲ್ಲಿ ಇವರ ಜೋಡಿ ನೋಡಿ ಇಷ್ಟಪಟ್ಟವರು ಹಲವರು. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಅಂದುಕೊಂಡವರೂ ಹಲವರು. ಇವರಿಬ್ಬರ ಬಾಂಡಿಂಗ್​ ಸಿಕ್ಕಾಪಟ್ಟೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಹಲವರು ಇವರಿಬ್ಬರ ಮದುವೆಯನ್ನೂ ಎಐ ಮೂಲಕ ಮಾಡಿಸಿ, ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ.

66
ಇಬ್ಬರೂ ಸ್ನೇಹಿತರಷ್ಟೇ

ಗಿಲ್ಲಿ ನಟ (Bigg Boss Gilli Nata) ಹೊರಕ್ಕೆ ಬಂದಾಗ ಕಾವ್ಯಾ ಶೈವ ಬಗ್ಗೆ ಕೇಳಿದ ಮಾತಿಗೆ, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅಂಥದ್ದೇನೂ ಇಲ್ಲ ಎಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಮಾತ್ರ ಬಿಡುತ್ತಿಲ್ಲ. ಕಾವ್ಯಾ ಶೈವ ನಮಗೆ ಇಷ್ಟ ಆಗಿದ್ದಾಳೆ. ಇಬ್ಬರನ್ನೂ ಮದುವೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories