Best City for Dating: ಭಾರತದಲ್ಲಿ ಪ್ರೀತಿಸಲು, ಡೇಟಿಂಗ್ ಮಾಡಲು ಬೆಸ್ಟ್‌, ಕೆಟ್ಟ ನಗರ ಯಾವುದು; ಸರ್ವೇ ಏನು ಹೇಳುತ್ತದೆ?

Published : Jun 20, 2025, 04:08 PM ISTUpdated : Jun 20, 2025, 04:22 PM IST

ಎಷ್ಟೋ ಜನರು ಪ್ರೀತಿ ಸಿಗ್ತಿಲ್ಲ ಅಂತ ಕನವರಿಸುತ್ತಾರೆ. ಭಾರತದಲ್ಲಿ ಯಾವ ನಗರ ಡೇಟ್‌ ಮಾಡಲು ಬೆಸ್ಟ್?‌ ಯಾವ ನಗರ ಡೇಟ್‌ ಮಾಡಲು ಚೆನ್ನಾಗಿಲ್ಲ ಎಂದು ಚರ್ಚೆ ನಡೆಯುತ್ತಿದೆ. ಹೀಗೊಂದು ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

PREV
17

ಇತ್ತೀಚೆಗೆ ಭಾರತದಲ್ಲಿ ಡೇಟಿಂಗ್ ಮಾಡಲು, ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಅತ್ಯಂತ ಕೆಟ್ಟ ನಗರ ಎಂದರೆ ಅದು ಪುಣೆ ಎನ್ನಲಾಗ್ತಿದೆ, ಈ ಮೂಲಕ ಇದು ದೆಹಲಿ ಮತ್ತು ಮುಂಬೈ ನಗರಗಳನ್ನು ಮೀರಿಸಿದೆ. ನಗರಗಳಲ್ಲಿರುವ ಡೇಟಿಂಗ್‌ ವ್ಯವಸ್ಥೆ, ವಾತಾವರಣದ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆಯಂತೆ.

27

ಪುಣೆಯಲ್ಲಿ ನೈಟ್‌ ಲೈಫ್‌ ಜಾಸ್ತಿ ಇದೆ, ಜನಸಂಖ್ಯೆ ಜಾಸ್ತಿ ಇದೆ, ಶಿಕ್ಷಿತರೂ ಇದ್ದಾರೆ. ಹೀಗಿದ್ದಾಗ್ಯೂ ಪುಣೆ ನಗರದಲ್ಲಿ ಭಾವನಾತ್ಮಕ ಸಂಪರ್ಕ ಕಡಿಮೆ ಇದೆಯಂತೆ. ಅನೇಕರು ಡೇಟಿಂಗ್‌ ಮಾಡುವ ಮನಸ್ಥಿತಿ ಹೊಂದಿಲ್ಲ, ಇದರಿಂದ ಅವರಿಗೆ ಯಾವುದೇ ತೃಪ್ತಿಯೂ ಸಿಗ್ತಿಲ್ಲವಂತೆ.

37

ಇಂದು Zen C ಪೀಳಿಗೆ ಸಿಚುವೇಶನ್‌ಶಿಪ್‌ಗಳು ಮತ್ತು ಹುಕಪ್ ಸಂಸ್ಕೃತಿ ಮೊರೆ ಹೋಗಿದೆ. ಲವ್‌ನಲ್ಲಿ ಕಮಿಟ್‌ಮೆಂಟ್‌ ಇಲ್ಲ. ಇವರ ಲವ್‌ ಲೈಫ್‌ ಯಾವ ರೀತಿ ಇದೆ ಎಂದು ಹೇಳಲು ಆಗೋದಿಲ್ಲ.

47

ಇದರಿಂದಾಗಿ ಗೊಂದಲ ಆಗುತ್ತದೆ, ಭಾವನಾತ್ಮಕ ಸ್ಟ್ರೆಸ್‌ ಆಗುವುದು, ನಂಬಿಕೆ, ವಿಶ್ವಾಸ ಕೂಡ ಇರೋದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅನೇಕ ಜನರು ಈ ನಗರದಲ್ಲಿ ನಿಜವಾದ ಕಾಂಟ್ಯಾಕ್ಟ್‌ ಅಥವಾ ಸಂಬಂಧ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ.

57

ಈ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಕೆಲವರು ಇದು ಆಧುನಿಕ ಯುಗದ ಸಮಸ್ಯೆ ಎಂದರೂ ಕೂಡ, ಇನ್ನೂ ಕೆಲವರು ಪೀಳಿಗೆಯ ಪ್ರಭಾವ ಎನ್ನುತ್ತಿದ್ದಾರೆ.

67

ಲವ್‌ ಮಾಡಲು, ಡೇಟ್‌ ಮಾಡಲು ಮುಂಬೈ ವಿಶ್ವದ ಅತ್ಯುತ್ತಮ ನಗರ ಎನ್ನಲಾಗಿದೆ. ಇಲ್ಲಿ ಯಾರನ್ನಾದರೂ ಭೇಟಿಯಾಗಿ ಪ್ರೀತಿಯಲ್ಲಿ ಬೀಳುವುದು, ಬೀಳಿಸಿಕೊಳ್ಳುವುದು ಸುಲಭ ಎಂದು ಶೇಕಡಾ 72 ರಷ್ಟು ಸ್ಥಳೀಯರು ಹೇಳಿದ್ದಾರೆ. ವ್ಯಾಲೆಂಟೈನ್ಸ್ ಡೇಗೆ ಮುಂಚಿತವಾಗಿ ನಡೆಸಲಾದ ಸಮೀಕ್ಷೆಯು, ವಿಶ್ವಾದ್ಯಂತ ಸಾವಿರಾರು ಜನರಿಗೆ ತಮ್ಮ ನಗರಗಳಲ್ಲಿ ಡೇಟಿಂಗ್ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಏಷ್ಯಾದ ನಗರಗಳು ಉನ್ನತ ಅಂಗ ಕಳಿಸಿದವು. ಬೀಜಿಂಗ್, ಜಕಾರ್ತಾ ಮತ್ತು ಶಾಂಘೈ ಮುಂಬೈ ಹಿಂದಿನ ಸ್ಥಾನ ಪಡೆದಿವೆ.

77

ಇನ್ನು ಬಿಲ್ಬಾವೊ, ಟೋಕಿಯೊ, ಹಾಂಗ್ ಕಾಂಗ್‌ನಂತಹ ನಗರಗಳು ರೊಮ್ಯಾಂಟಿಕ್ ರಿಲೇಶನ್‌ಶಿಪ್‌ ಹೊಂದಲು ಅತ್ಯಂತ ಕೆಟ್ಟ ನಗರ ಎಂದು ಬಿಂಬಿಸಲ್ಪಟ್ಟಿವೆ.

Read more Photos on
click me!

Recommended Stories