Wedding Night Tips: ಮೊದಲ ರಾತ್ರಿಯ ಮಧುರತೆಯನ್ನು ಹಾಳು ಮಾಡುತ್ತೆ ಪುರುಷರ ಈ 5 ತಪ್ಪುಗಳು

Published : Jun 18, 2025, 01:03 PM ISTUpdated : Jun 18, 2025, 01:10 PM IST

ಮದುವೆಯ ನಂತರ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಮೊದಲ ರಾತ್ರಿಗಾಗಿ ಕಾಯುತ್ತಾರೆ, ಆದರೆ ಆ ಸಮಯದಲ್ಲಿ ಅನೇಕ ಪುರುಷರು ಮಾಡುವಂತಹ ಕೆಲವು ತಪ್ಪುಗಳು ಅವರ ಮೊದಲ ರಾತ್ರಿಯನ್ನೆ ಹಾಳು ಮಾಡುತ್ತೆ ಅಂತಹ ತಪ್ಪುಗಳು ಯಾವುವು ನೋಡೋಣ.

PREV
17

ಮದುವೆಯ ನಂತರದ ಮೊದಲ ರಾತ್ರಿಯ (first night) ಬಗ್ಗೆ ಬೇರೆಯದೇ ರೀತಿಯ ಕ್ರೇಜ್ ಇರುತ್ತದೆ. ಈ ಸಮಯದಲ್ಲಿ ಪುರುಷರು ಯಾವ ರೀತಿಯಾಗಿ ರಾತ್ರಿಯನ್ನು ಕಳೆಯಬೇಕು ಎನ್ನುವ ಒತ್ತಡದಲ್ಲಿರುತ್ತಾರೆ, ಆದರೆ ಮಹಿಳೆಯರು ತಮ್ಮ ಎಲ್ಲಾ ನಿರೀಕ್ಷೆಗಳನ್ನು ಒಬ್ಬ ವ್ಯಕ್ತಿಯ ಮೇಲೆ ಹಾಕಿ ಆ ರಾತ್ರಿಯನ್ನು ಕಳೆಯುತ್ತಾರೆ. ಮೊದಲ ರಾತ್ರಿ ಇಬ್ಬರ ಪಾಲಿಗೂ ಸುಂದರವಾದುದು, ಆದರೆ ಪುರುಷರು ಮಾಡುವ ತಪ್ಪುಗಳಿಂದ ಆ ಸುಂದರ ರಾತ್ರಿ ಹಾಳಾಗುತ್ತೆ. ಹಾಗಿದ್ರೆ ಪುರುಷರು ಮಾಡುವಂತಹ ಆ ತಪ್ಪುಗಳು ಯಾವುವು ಅನ್ನೋದನ್ನು ನೋಡೋಣ.

27

ಕೆಲವು ಪುರುಷರು ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ತುಂಬಾ ತಾಳ್ಮೆ ಕಳೆದುಕೊಳ್ಳುತ್ತಾರೆ. ಗಮನಿಸಬೇಕಾದ ವಿಷಯವೆಂದರೆ ಈ ರೀತಿಯ ಆತುರವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು ಮತ್ತು ನಿಮ್ಮ ಮೊದಲ ರಾತ್ರಿಯನ್ನು ಹಾಳು ಮಾಡಬಹುದು. ಆ ಸಮಯದಲ್ಲಿ, ನೀವು ತುಂಬಾ ಶಾಂತ ಮತ್ತು ಸುಸಂಸ್ಕೃತರಾಗಿ ವರ್ತಿಸಬೇಕಾಗುತ್ತೆ.

37

ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ತಮ್ಮ ಮೊದಲ ರಾತ್ರಿಯನ್ನು ತಾವು ನೋಡಿರುವ ಸಿನಿಮಾಗಳ ದೃಶ್ಯಗಳಿಗೆ (don't compare real life to film) ಹೋಲಿಸಲು ಪ್ರಾರಂಭಿಸುತ್ತಾರೆ, ಆದರೆ ಹಾಗೆ ಮಾಡುವುದು ತಪ್ಪು. ಯಾಕಂದ್ರೆ ಸಿನಿಮಾದಲ್ಲಿ ತೋರಿಸಿರುವ ವಿಷಯಗಳು ವಾಸ್ತವವಲ್ಲ, ಆದರೆ ಅದನ್ನೇ ನಿರೀಕ್ಷಿಸುವುದು ನಿಮ್ಮ ಮೊದಲ ರಾತ್ರಿಯನ್ನು ಹಾಳುಮಾಡಬಹುದು.

47

ನೀವು ಗಮನಿಸಬೇಕಾದ ಮುಖ್ಯವಾದ ವಿಷಯವೆಂದರೆ ಯಾವುದೂ ಪರ್ಫೆಕ್ಟ್ ಆಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಿತಿಗಳಿಗೆ ಅನುಗುಣವಾಗಿ ನಿಮ್ಮ ನಿರೀಕ್ಷೆಗಳನ್ನು ಮಿತಿಗೊಳಿಸುವುದು ಮುಖ್ಯ. ಅಪರಿಪೂರ್ಣತೆಯಲ್ಲಿ ಪೂರ್ಣತೆಯನ್ನು (perfection in imperfection) ಕಾಣುವುದು ಅಗತ್ಯ.

57

ಪುರುಷರು ತಮ್ಮ ಫಸ್ಟ್ ನೈಟ್ ಗೆ ಬಹಳ ಮುಂಚಿತವಾಗಿಯೇ ಯೋಜನೆ ಹಾಕಿಕೊಳ್ಳುತ್ತಾರೆ, ಇದರಿಂದಾಗಿ ಅವರು ಆಗಾಗ್ಗೆ ಒತ್ತಡಕ್ಕೆ (stress) ಒಳಗಾಗುತ್ತಾರೆ. ಆದರೆ ಮೊದಲ ರಾತ್ರಿಯ ಬಗ್ಗೆ ನಿಮ್ಮ ಮೇಲೆ ಒತ್ತಡ ಹೇರುವ ಅಗತ್ಯವಿಲ್ಲ, ಏಕೆಂದರೆ ಅದು ನಿಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಈ ತಪ್ಪು ನಿಮ್ಮ ಮದುವೆಯ ಮೊದಲ ರಾತ್ರಿಯನ್ನು ಹಾಳುಮಾಡಬಹುದು.

67

ಯಾವುದೇ ಮದುವೆ ಪರಿಪೂರ್ಣವಲ್ಲ. ಎಲ್ಲೆಡೆ ಏನಾದರೂ ತಪ್ಪಾಗುತ್ತದೆ ಮತ್ತು ವ್ಯವಸ್ಥೆಗಳು ತಪ್ಪಾಗಬಹುದು. ಇದಲ್ಲದೆ, ಅನೇಕ ಮದುವೆಗಳಲ್ಲಿ ವಾದಗಳು ನಡೆಯುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಪುರುಷರು ತಮ್ಮ ನವ ವಧುವಿನ (bride) ಮೇಲೆ ತಮ್ಮ ಕೋಪವನ್ನು ಹೊರಹಾಕಲು ಪ್ರಾರಂಭಿಸುತ್ತಾರೆ, ಅದು ತಪ್ಪು.

77

ಮದುವೆಯ ಮೊದಲ ರಾತ್ರಿಯಲ್ಲಿ ಮದುವೆಯ ಸರಿ ತಪ್ಪುಗಳ ವಿಷಯಗಳನ್ನು ನಿರ್ಲಕ್ಷಿಸಬೇಕು, ಏಕೆಂದರೆ ಮದುವೆ ಅಥವಾ ಸಮಾರಂಭದಲ್ಲಿ ನ್ಯೂನತೆಗಳು (mistakes) ಇರುವುದು ಸಾಮಾನ್ಯ, ಆದರೆ ಅದರ ಪರಿಣಾಮವು ಭವಿಷ್ಯದ ಜೀವನದ ಮೇಲೆ ಉಂಟಾಗಬಾರದು. ಅಂತಹ ತಪ್ಪುಗಳು ನಿಮ್ಮ ಮೊದಲರಾತ್ರಿಯನ್ನು ಹಾಳುಮಾಡಬಹುದು.

Read more Photos on
click me!

Recommended Stories