ಶಿವಶ್ರೀ ಅಧ್ಯಯನದಲ್ಲೂ ಮುಂಚೂಣಿ: ಶಿವಶ್ರೀ ಅವರು SASTRA ವಿಶ್ವವಿದ್ಯಾಲಯದಿಂದ ಜೈವಿಕ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅವರು ಸಂಸ್ಕೃತದ ವಿದ್ಯಾರ್ಥಿನಿ ಮತ್ತು ಪಿವಿಎ ಆಯುರ್ವೇದ ಆಸ್ಪತ್ರೆಯಿಂದ ಆಯುರ್ವೇದ ಕಾಸ್ಮೆಟಾಲಜಿಯಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೈಕ್ಲಿಂಗ್ ಕೂಡ ಅವರಿಗೆ ಇಷ್ಟ ಎಂಬುದು ತಿಳಿದುಬಂದಿದೆ.