ಆಲ್ಕೋಹಾಲ್ ಸೇವಿಸಿ ರೊಮ್ಯಾನ್ಸ್‌ ಮಾಡಬೇಕು ಎಂದು ಯೋಚಿಸೋರು ಸ್ವಲ್ಪ ಇದನ್ನ ಓದಿ...

First Published Oct 11, 2020, 3:18 PM IST

ಆಹಾ!..ಹೊರಗೆ ತಂಪಾಗಿ ಬೀಸುವ ಗಾಳಿ, ಜೊತೆಗೆ ಸಂಗಾತಿಯ ಬೆಚ್ಚಗಿನ ಅಪ್ಪುಗೆ, ಇದರ ಜೊತೆ ಮದ್ಯ ಸೇವನೆ ಮಾಡಿದರೆ ಮಿಲನ ಮಹೋತ್ಸವ ತುಂಬಾ ಎಕ್ಸೈಟಿಂಗ್ ಆಗಿರುತ್ತದೆ ಎಂದ ಭಾವಿಸಿರುವವರು ಹುಷಾರ್!. ಆಲ್ಕೋಹಾಲ್ ಹಾಗೂ ಸೆಕ್ಸ್ ಎಂದೂ ಒಂದಾಗದ ಎರಡು ಹಳಿಗಳಿದ್ದ ಹಾಗೆ ಅಂತಾ ನೂತನ ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಸೆಕ್ಸ್ ಸಂದರ್ಭದಲ್ಲಿ ಒಂಚೂರು ಮದ್ಯ ಇದ್ರೆನೆ ರೊಮ್ಯಾಂಟಿಕ್ ಮೂಡ್ ಬರೋದು ಅಂತಾ ಭಾವಿಸಿರುವವರು, ಅತ್ಯಂತ ಅಪಾಯಕಾರಿಯಾದ ತಪ್ಪು ಕಲ್ಪನೆಗೆ ಒಳಗಾಗಿದ್ದಾರೆ ಎಂಬುದನ್ನು ನೂತನ ಸಂಶೋಧನೆ ತಿಳಿಸಿದೆ.
undefined
ನ್ಯೂಯಾರ್ಕ್‌‌ನ ಸಂಶೋಧನೆಯೊಂದು ತಿಳಿಸಿದಂತೆ ಸೆಕ್ಸ್ ವೇಳೆ ಮದ್ಯ ಸೇವಿಸುವುದು ತುಂಬಾನೇ ಅಪಾಯಕಾರಿ ಎಂದು ತಿಳಿಸಿದೆ. ಡ್ರಿಂಕ್ಸ್ ಮಾಡಿ ಸೆಕ್ಸ್ ಮಾಡುವುದರಿಂದ ಏನಾಗುತ್ತದೆ. ಸಂಶೋಧನೆ ಏನು ಹೇಳುತ್ತೆ. ಇಲ್ಲಿದೆ ಮಾಹಿತಿ...
undefined
ನ್ಯೂಯಾರ್ಕ್‌‌‌ನ 18-20 ವರ್ಷದ ಒಳಗಿನ 228 ಯುವತಿಯರನ್ನು ಸಂಶೋಧನೆಗೆ ಒಳಪಡಿಸಿದಾಗ, ಮದ್ಯ ಸೇವಿಸಿದ ಬಳಿಕ ಇವರ ಸೆಕ್ಸ್ ಅನುಭವ ಒಳ್ಳೆಯದಾಗಿರಲಿಲ್ಲ ಎಂದು ಹೇಳಲಾಗಿದೆ.
undefined
ಬಹುತೇಕ ಪ್ರಕರಣಗಳಲ್ಲಿ ಅನೈಸರ್ಗಿಕ ಸಂಭೋಗಗಳೇ ಬೆಳಕಿಗೆ ಬಂದಿವೆ ಎಂದು ಸಂಶೋಧನೆ ತಿಳಿಸಿದೆ. ಆದುದರಿಂದ ಇನ್ನು ಮುಂದೆ ಸೆಕ್ಸ್‌ ಸಂದರ್ಭ ಡ್ರಿಂಕ್ಸ್‌ ಮಾಡಬೇಕೆಂದು ಯೋಚನೆ ಮಾಡುವ ಮುನ್ನ ಈ ವಿಚಾರ ನೆನಪಿಸಿಕೊಳ್ಳಿ. ಕಿಕ್‌ಗಿಂತ ನಿಮ್ಮ ಆರೋಗ್ಯ ಮುಖ್ಯ ಅನ್ನೋದು ನೆನಪಿರಲಿ...
undefined
ಆಲ್ಕೊಹಾಲ್ ಕುಡಿಯುವುದರಿಂದ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗುತ್ತದೆ. ಈ ಪುರುಷ ಲೈಂಗಿಕ ಹಾರ್ಮೋನ್ ಲೈಂಗಿಕ ಆಸೆಯಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. ಹೆಣ್ಣುಮಕ್ಕಳು ಡ್ರಿಂಕ್ಸ್ ಮಾಡುವುದರಿಂದ ಹೆಚ್ಚು ಲೈಂಗಿಕ ಬಯಕೆ ಹೊಂದುತ್ತಾರೆ ಎಂದು ತಿಳಿದುಬಂದಿದೆ. ಇದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ.
undefined
ಆಲ್ಕೋಹಾಲ್ ಸೇವನೆ ಮಾಡುವುದರಿಂದ ಹೆಚ್ಚು ಹೆಚ್ಚು ಕಾಮಾಸಕ್ತಿ ಬೆಳೆಯುವುದಿಲ್ಲ. ಇದರಿಂದ ಸೆಕ್ಸ್ ಎಂಜಾಯ್ ಮಾಡಲು ಸಾಧ್ಯವಿಲ್ಲ.
undefined
ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುವುದರಿಂದ ಟೆಸ್ಟೋಸ್ಟೆರಾನ್ ಲೆವೆಲ್ ಕಡಿಮೆಯಾಗುತ್ತದೆ. ಇದರಿಂದ ಲಿಬಿಡೊ ಅಂದರೆ ರೋಮ್ಯಾನ್ಸ್ ಕಡಿಮೆಯಾಗುತ್ತದೆ. ಆದುದರಿಂದ ಡ್ರಿಂಕ್ಸ್ ಮಾಡೋದು ಕಡಿಮೆ ಮಾಡಿ.
undefined
ಟೆಸ್ಟೋಸ್ಟೆರಾನ್ ಕಡಿಮೆಯಾದರೆ ಸ್ಪರ್ಮ್ ಕೌಂಟ್ ಕಡಿಮೆಯಾಗುತ್ತದೆ. ಇದರಿಂದ ಫರ್ಟಿಲಿಟಿ ಕಡಿಮೆಯಾಗುತ್ತದೆ. ಮಹಿಳೆಯರು ಮತ್ತು ಪುರುಷರು ಇಬ್ಬರೂ ಸಹ ಆಲ್ಕೋಹಾಲ್ ಸೇವಿಸಿ ಸೆಕ್ಸ್ ಮಾಡುವುದರಿಂದ ಫರ್ಟಿಲಿಟಿ ಕಡಿಮೆಯಾಗುತ್ತದೆ.
undefined
ಮದ್ಯಪಾನವು ಸ್ತ್ರೀಯರಲ್ಲಿ ಪ್ರಚೋದನೆ, ಬಯಕೆ, ಸ್ಪಂದಿಸುವಿಕೆ ಮತ್ತು ಲೈಂಗಿಕ ನಡವಳಿಕೆಯ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ.
undefined
click me!