ಕೆಎಲ್ ರಾಹುಲ್‌-ಆಥಿಯಾ ಶೆಟ್ಟಿಗೆ ದುಬಾರಿ ಗಿಫ್ಟ್‌, 2.17 ಕೋಟಿ ಮೌಲ್ಯದ ಕಾರು, 30 ಲಕ್ಷದ ವಾಚ್‌!

First Published | Jan 26, 2023, 11:21 AM IST

ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಅವರ ಪುತ್ರಿ ನಟಿ ಆಥಿಯಾ ಶೆಟ್ಟಿ, ಜನವರಿ 23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಗೆ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಆಥಿಯಾ ಶೆಟ್ಟಿ,  ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ವಿವಾಹವಾದರು. ಕೆಲವೇ ಅತಿಥಿಗಳ ಸಮ್ಮುಖದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿಯಾದ ಅಥಿಯಾ ಶೆಟ್ಟಿಯನ್ನು ಕೆಎಲ್ ರಾಹುಲ್ ವರಿಸಿದ್ದು, ಫೋಟೋಗಳು ಎಲ್ಲೆಡೆ ವೈರಲ್‌ ಆಗಿವೆ. ಮದುವೆ ಸಮಾರಂಭದಲ್ಲಿ ಬಾಲಿವುಡ್‌ನ ಪ್ರಸಿದ್ಧ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ವಧುವಿನ ತಂದೆ ಸುನೀಲ್ ಶೆಟ್ಟಿ, ದಂಪತಿಗೆ 50 ಲಕ್ಷ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಉಡುಗೊರೆಯಾಗಿ ನೀಡಿದ್ದಾರೆ. ಸುನೀಲ್ ಶೆಟ್ಟಿ ಅವರ ಆಪ್ತ ಸ್ನೇಹಿತ ಸಲ್ಮಾನ್ ಖಾನ್ ಅಥಿಯಾಗೆ 1.64 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. 

Tap to resize

ಸೆಲೆಬ್ರಿಟಿ ಜೋಡಿ ಸುಮಾರು ನಾಲ್ಕು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಆದರೆ, ವದಂತಿಗಳ ನಡುವೆಯೂ ಅವರು ಕಳೆದ ವರ್ಷದವರೆಗೂ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು. ಒಂದು ವರ್ಷದ ಹಿಂದೆ, ದಂಪತಿಗಳು ತಮ್ಮ ಸಂಬಂಧವನ್ನು ಬಹಿರಂಗಗೊಳಿಸಿದ್ದರು. ಮದುವೆಗೆ ಅಥಿಯಾ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದು, ಕ್ರಿಕೆಟಿಗ ಕೆ.ಎಲ್ ರಾಹುಲ್ ಬೀಜ್ ಶೇರ್ವಾನಿ ಧರಿಸಿದ್ದರು.

ನಟ ಜಾಕಿ ಶ್ರಾಫ್ ವಧುವಿಗೆ ಚೋಪರ್ಡ್ ವಾಚಸ್‌ನಿಂದ 30 ಲಕ್ಷ ರೂಪಾಯಿ ಮೌಲ್ಯದ ಗಡಿಯಾರವನ್ನು ಉಡುಗೊರೆಯಾಗಿ ನೀಡಿದರು ಮತ್ತು ಅರ್ಜುನ್ ಕಪೂರ್ ಅಥಿಯಾಗೆ 1.5 ಕೋಟಿ ರೂಪಾಯಿ ಬೆಲೆಯ ವಜ್ರದ ಬಳೆಯನ್ನು ಗಿಫ್ಟ್ ಮಾಡಿದರು.

ಚಿತ್ರರಂಗದವರಲ್ಲದೆ, ಕ್ರಿಕೆಟ್ ಲೋಕದ ಅನೇಕ ಸ್ನೇಹಿತರು ಉಡುಗೊರೆಗಳೊಂದಿಗೆ ದಂಪತಿಗೆ ತಮ್ಮ ಪ್ರೀತಿಯನ್ನು ತೋರಿಸಿದರು.
ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರು ರಾಹುಲ್ ಅವರಿಗೆ ಕ್ರಮವಾಗಿ 2.17 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಕಾರು ಮತ್ತು 80,00,000 ರೂಪಾಯಿ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜೋಡಿಯ ಸುಂದರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು.

Latest Videos

click me!