ಕಣ್ಣು.. ಕಣ್ಣು ಕಲೆತಾಗ… ಮುಂದೆ ಏನೇನು ಆಗುತ್ತೆ ಗೊತ್ತಾ?

Published : Jan 24, 2023, 05:13 PM IST

ಹುಡುಗ - ಹುಡುಗಿ ಪ್ಲರ್ಟ್ ಮಾಡೋದು ಸಾಮಾನ್ಯ. . ವಿಶೇಷವಾಗಿ ನೀವು ಕಣ್ಣುಗಳಲ್ಲಿ ಸರಸವಾಡಲು ಪ್ರಯತ್ನಿಸಿದಾಗ ಅದು ಇನ್ನೂ ಚೆನ್ನಾಗಿರುತ್ತೆ ಅಲ್ವಾ?. ಈಗ ಸ್ವಲ್ಪ ಯೋಚಿಸಿ, ನೀವು ಎಂದಾದರೂ ನಿಮ್ಮ ಪ್ರೇಮಿಯನ್ನು ಅಥವಾ ಸಂಗಾತಿಯನ್ನು ದೂರದಿಂದಲೇ ನೋಡುತ್ತಾ ಕಣ್ಣಲ್ಲಿ ಸರಸ ಆಡಿದ್ದೀರಾ?  ದೂರದಿಂದ ಅವನೊಂದಿಗೆ ಕಣ್ಣಿನ ಸಂಪರ್ಕ ಸಾಧಿಸಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ? ಎದುರಿಗಿದ್ದವರು ನಾಚಿ ನೀರಾಗುವವರೆಗೆ ಕಣ್ಣಲ್ಲೇ ಪ್ರೀತಿ ಮಾಡಿ ನೋಡಿ… 

PREV
18
ಕಣ್ಣು.. ಕಣ್ಣು ಕಲೆತಾಗ… ಮುಂದೆ ಏನೇನು ಆಗುತ್ತೆ ಗೊತ್ತಾ?

ಪ್ರೀತಿಯಲ್ಲಿ ಫ್ಲರ್ಟಿಂಗ್ (flirting) ಸಾಮಾನ್ಯ. ಆದರೆ ನೀವು ಎಂದಾದರೂ ಕಣ್ಣುಗಳನ್ನೇ ನೋಡುತ್ತಾ ಫ್ಲರ್ಟ್ ಮಾಡಿದ್ದೀರಾ ಅಯ್ಯಯ್ಯೋ ಕಣ್ಣುಗಳನ್ನೇ ನೋಡಿ ಫ್ಲರ್ಟ್ ಮಾಡೋದಾ? ಇಲ್ಲಾಪ್ಪಾ ಎಂದು ನೀವು ಹೇಳಬಹುದು. ನಿಮ್ಮಂತಹ ಅನೇಕ ಜನರಿಗೆ ತಮ್ಮ ಕ್ರಶ್ ಅನ್ನು ಒಮ್ಮೆಗೇ ನೋಡಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ, ಇತರರ ಕಣ್ಣುಗಳನ್ನು ನೋಡುವುದು ಒಂದು ಅದ್ಭುತ ಫೀಲಿಂಗ್ ಆಗಿದೆ. ಹಾಗಿದ್ರೆ ಕಣ್ಣುಗಳಲ್ಲೇ ಫ್ಲರ್ಟ್ ಮಾಡೋದ್ರ ಹಿಂದಿರೋ ವಿಜ್ಞಾನದ ಬಗ್ಗೆ ತಿಳಿಯೋಣ.

28

ಕಣ್ಣುಗಳೊಂದಿಗೆ (eye contact) ಸರಸವಾಡುವುದು ಆಸಕ್ತಿದಾಯಕ ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪರಿಣಾಮಕಾರಿಯಾಗಿದೆ. ನೀವು ಕಣ್ಣುಗಳಲ್ಲಿ ಸರಸವಾಡದಿದ್ದರೆ, ನಿಮ್ಮ ಸಂಬಂಧವನ್ನು ಮುಂದಕ್ಕೆ ತೆಗೆದುಕೊಂಡು ಹೋಗೋದು ಕಷ್ಟವಾಗಬಹುದು. ಈ ಲೇಖನದಲ್ಲಿ, ಕಣ್ಣುಗಳಲ್ಲಿ ಸರಸವಾಡುವುದರ ಹಿಂದೆ ಅಡಗಿರುವ ವಿಜ್ಞಾನದ ಬಗ್ಗೆ ತಿಳಿಯೋಣ

38

ಸಕಾರಾತ್ಮಕ ಪರಿಣಾಮ ಬೀರುತ್ತೆ: ನೀವು ಫ್ಲರ್ಟ್ ಮಾಡ್ತೀರೋ ಇಲ್ಲವೋ, ಅನ್ನೋದು ಬೇರೆ ಪ್ರಶ್ನೆ. ಆದರೆ ನಿಮ್ಮ ಪ್ರೇಮಿಯನ್ನು ನೀವು ನಗುವಿನೊಂದಿಗೆ ನೋಡಿದರೆ, ಅದು ಅವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಅವರನ್ನು ಸಂತೋಷಪಡಿಸುವ ಒಂದು ಮಾರ್ಗವಾಗಿದೆ. ಇದು ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುವಂತೆ ಮಾಡುತ್ತೆ. ಜೊತೆಗೆ ಅವರು ನಿಮಗೆ ಮತ್ತಷ್ಟು ಹತ್ತಿರವಾಗುತ್ತಾರೆ..
 

48

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯ: ಕಣ್ಣು-ಕಣ್ಣು ಬೆರೆಸಿ ಸರಸವಾಡೋ ಮೂಲಕ, ಇಬ್ಬರೂ ಪರಸ್ಪರ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಮಾತ್ರವಲ್ಲ, ಅವರು ಪರಸ್ಪರರ ಬಗ್ಗೆ ಭಾವನೆಗಳನ್ನು ಹೊಂದಲು ಸಹಾಯವಾಗುತ್ತೆ. ನಿಮಗೆ ಗೊತ್ತಾ? ಮನಸ್ಸಿನಲ್ಲಿ ಕಳ್ಳತನವಿದ್ದರೆ, ಖಂಡಿತವಾಗಿಯೂ ಪ್ರೇಮಿಯ ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಲು ಸಾಧ್ಯವಿಲ್ಲ. ನಿಜವಾದ ಪ್ರೇಮವಿದ್ದರೆ ಮಾತ್ರ ಕಣ್ಣಲ್ಲಿ ರೊಮ್ಯಾನ್ಸ್ ಮಾಡಲು ಸಾಧ್ಯ. 

58

ವಿಶ್ವಾಸವನ್ನು ಹೆಚ್ಚಿಸುತ್ತೆ: ನೀವು ಪ್ರೀತಿಸುವ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅಥವಾ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಇದರಿಂದ ಇಬ್ಬರ ಆತ್ಮವಿಶ್ವಾಸವೂ ಹೆಚ್ಚುತ್ತೆ., ನೀವು ನಿಮ್ಮ ಪ್ರೇಮಿಯನ್ನು ನೋಡಿದಾಗ,ಅವರ ಮೇಲೆ ನಿಮಗೆ ಆಸಕ್ತಿ ಇದೆ ಅನ್ನೋದು ಅವರಿಗೆ ತಿಳಿಯುತ್ತೆ ಪ್ರೀತಿ ಮಾಡುವಾಗ ಒಬ್ಬರ ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಿದರೆ ಪ್ರೀತಿ ಹೆಚ್ಚುತ್ತೆ.

68

ಒಬ್ಬ ನಾಯಕನನ್ನು ರೂಪಿಸುತ್ತೆ: ಕಣ್ಣು ಮಿಟುಕಿಸದೆ ನಿಮ್ಮ ಸಂಗಾತಿಯನ್ನು ನೋಡಿದರೆ, ನೀವು ನಾಯಕನಾಗುವ ಗುಣಗಳನ್ನು ಹೊಂದಿದ್ದೀರಿ ಎಂದು ಅರ್ಥಮಾಡಿಕೊಳ್ಳಿ. ಇದರರ್ಥ ನೀವು ಅವಳನ್ನು ನೋಡುವಾಗ ಆಕೆಗೆ ಅನ್ ಕಂಫರ್ಟೇಬಲ್ ಫೀಲ್ ಮಾಡಿಸುತ್ತೀರಿ ಎಂದಲ್ಲ. ಪ್ರಪಂಚದ ಎಲ್ಲಾ ದೊಡ್ಡ ನಾಯಕರು ಯಾವಾಗಲೂ ಕಣ್ಣುಗಳಲ್ಲಿ ಕಣ್ಣಿಟ್ಟು ಮಾತನಾಡುತ್ತಾರೆ ಎಂದು ಬಹುಶಃ ನಿಮಗೆ ತಿಳಿದಿಲ್ಲ. ಕಣ್ಣುಗಳಲ್ಲಿ ಕಣ್ಣನ್ನಿಟ್ಟು ಮಾತನಾಡುವುದು ಉತ್ಸಾಹವನ್ನು ಹೆಚ್ಚಿಸುತ್ತದೆ, ಮುಂದೆ ಸಾಗಲು ಪ್ರೇರೇಪಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.  

78

ಇದೊಂದು ಆಯುಧವೂ ಆಗಿದೆ: ಕಣ್ಣುಗಳನ್ನು ನೋಡುವ ಮೂಲಕ, ನೀವು ಇತರ ವ್ಯಕ್ತಿಯ ವಿಶ್ವಾಸವನ್ನು ಅಲುಗಾಡಿಸಬಹುದು. ಯಾರಾದರೂ ನಿಮ್ಮನ್ನು ಕೆಟ್ತ ಕಣ್ಣುಗಳಿಂದ ನೋಡುತ್ತಿದ್ದರೆ ಅಥವಾ ಅವರು ನಿಮ್ಮನ್ನು ಗೇಲಿ ಮಾಡಲು ಪ್ರಯತ್ನಿಸುತ್ತಿದ್ದರೆ, ನೀವು ಸಹ ಸ್ವಲ್ಪ ಸಮಯದವರೆಗೆ ಅವರನ್ನೇ ದಿಟ್ಟಿಸಿ ನೋಡಿ. ನಿಮ್ಮ ಕಣ್ಣುಗಳಲ್ಲಿ ವಿರೋಧ, ಆಕ್ರಮಣಕಾರಿ ಮತ್ತು ಕೋಪ ಇರಬೇಕು. ನಿಮ್ಮ ಕಣ್ಣುಗಳಲ್ಲಿ ಕರುಣೆ ಅಥವಾ ಹೆದರಿದ ಭಾವನೆ ಇದ್ದರೆ, ಅವರು ನಿಮ್ಮನ್ನು ನೋಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ, ಆದರೆ ಅವನ ಧೈರ್ಯವು ಮತ್ತಷ್ಟು ಹೆಚ್ಚಾಗುತ್ತದೆ.  ಆದುದರಿಂದ ಧೈರ್ಯದಿಂದ ನೋಡಿ, ನೀವು ಅದನ್ನು ವಿರೋಧಿಸುತ್ತೀರಿ ಅನ್ನೋದನ್ನು ತಿಳಿಸಿ.

88

ಸಿಹಿ ನೆನಪುಗಳು: ಕಣ್ಣುಗಳಲ್ಲಿ ಸರಸವಾಡುವುದು ಸಹ ಕೆಲವು ಸಿಹಿ ನೆನಪುಗಳನ್ನು ಸೇರಿಸುತ್ತದೆ. ಹೌದು! ಕಣ್ಣುಗಳಲ್ಲಿ ಸರಸವಾಡುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ವಿಶ್ವಾಸವನ್ನು ಹೆಚ್ಚಿಸುತ್ತದೆ, ಗೌರವವನ್ನು ಹೆಚ್ಚಿಸುತ್ತದೆ, ಮತ್ತೊಂದೆಡೆ, ಕೆಲವು ಸಿಹಿ ನೆನಪುಗಳನ್ನು ಸಹ ನೀಡುತ್ತೆ. ಮೊದಲ ಬಾರಿ ಪ್ರೇಮಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, ತುಂಟಾಟವಾಡುತ್ತಾ, ರೊಮ್ಯಾನ್ಸ್ ಮಾಡಿದ್ದರೆ, ಆ ನೆನಪು ಯಾವಾಗಲೂ ಹಚ್ಚ ಹಸುರಾಗಿರುತ್ತೆ.

Read more Photos on
click me!

Recommended Stories