ಲೈಂಗಿಕ ಸಮಸ್ಯೆಗೆ ಪರಿಹಾರ ಕೇಳಲು ಬಂದ ಮಹಿಳೆಗೆ ತೃಪ್ತಿ ನೀಡ್ತೆನೆಂದ ಜ್ಯೋತಿಷಿ

Published : Mar 26, 2026, 05:43 PM IST

Astrologer harassment case woman shocked by obscene offer ಭವಿಷ್ಯ ತಿಳಿದುಕೊಳ್ಳಲು ಜ್ಯೋತಿಷಿಯ ಬಳಿ ಹೋದ ಮಹಿಳೆಗೆ ಕೆಟ್ಟ ಅನುಭವ. ಕುಂಡಲಿ ನೋಡುವ ಬದಲು ಏನ್‌ ಏನೋ ಕೇಳಿದ .

PREV
14
ಜ್ಯೋತಿಷಿ, ಅಸಭ್ಯ ಮಾತು

ಭವಿಷ್ಯ ತಿಳಿದುಕೊಳ್ಳುವ ಉದ್ದೇಶದಿಂದ ಜ್ಯೋತಿಷಿಯ ಬಳಿ ಹೋಗಿದ್ದ ಮಹಿಳೆಗೆ, ಜೀವನದಲ್ಲೇ ಮರೆಯಲಾಗದ ಕೆಟ್ಟ ಅನುಭವ ಎದುರಾಗಿದೆ. ಕುಂಡಲಿ ನೋಡಿ ಭವಿಷ್ಯ ಹೇಳಬೇಕಿದ್ದ ಜ್ಯೋತಿಷಿ, ಅಸಭ್ಯ ಮಾತುಗಳ ಮೂಲಕ ಆಕೆಯನ್ನು ತನ್ನ ಬಲೆಗೆ ಸೆಳೆಯಲು ಯತ್ನಿಸಿದ್ದಾನೆ.

24
ದೈಹಿಕ ತೃಪ್ತಿ

ನಗರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷಿಯನ್ನು ಭೇಟಿ ಮಾಡಿದ್ದಳು. ಆದರೆ ಆಕೆಯ ಕೈ ನೋಡಿ ಜ್ಯೋತಿಷಿ ಹೇಳಿದ ಮಾತು ಆಕೆಯನ್ನು ಬೆಚ್ಚಿಬೀಳುವಂತೆ ಮಾಡಿತು.

ನೀವು ಕಾಮುಕ ಸ್ವಭಾವದವರು… ದೈಹಿಕ ತೃಪ್ತಿ ಇಲ್ಲದೆ ನಿಮಗೆ ಮನಶಾಂತಿ ಸಿಗಲ್ಲ” ಎಂದು ಹೇಳಿ, “ನಾನು ಸಹಾಯ ಮಾಡಬಹುದು” ಎಂದು ನೇರವಾಗಿ ಅಸಭ್ಯ ಆಫರ್ ನೀಡಿದ್ದಾನೆ.

ಈ ಮಾತು ಕೇಳಿದ ಮಹಿಳೆ ತಕ್ಷಣ ಶಾಕ್ ಆಗಿ ಅಲ್ಲಿಂದ ಹೊರಟಿದ್ದಾಳೆ. ನಂತರ ಈ ಘಟನೆ ತನ್ನ ಸ್ನೇಹಿತೆಗೆ ಹೇಳಿಕೊಂಡು, ಮತ್ತೆ ಇಂತಹ ವ್ಯಕ್ತಿಗಳ ಬಳಿ ಹೋಗಬಾರದೆಂದು ನಿರ್ಧರಿಸಿದ್ದಾಳೆ.

34
30 ವರ್ಷ ಹಳೆಯ ಘಟನೆ ಮತ್ತೆ ವೈರಲ್!

ಈ ಘಟನೆ ಇತ್ತೀಚೆಗೆ ನಡೆದದ್ದಲ್ಲ. ಸುಮಾರು 30–35 ವರ್ಷಗಳ ಹಿಂದೆ ನಡೆದ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಸಮಾಜಮುಖಿ ವ್ಯಕ್ತಿಯೊಬ್ಬರು ಈ ವಿಷಯವನ್ನು ಹಂಚಿಕೊಂಡ ನಂತರ, ಜನರಲ್ಲಿ ಭಾರೀ ಚರ್ಚೆ ಮತ್ತು ಆಕ್ರೋಶ ಮೂಡಿದೆ.

44
ಭೋಂಡು ಬಾಬಾ

ಇದೇ ವೇಳೆ ಇತ್ತೀಚೆಗೆ ಬೆಳಕಿಗೆ ಬಂದ “ಭೋಂಡು ಬಾಬಾ” ಪ್ರಕರಣದ ಹಿನ್ನೆಲೆ ಈ ಘಟನೆ ಮತ್ತಷ್ಟು ಗಮನ ಸೆಳೆಯುತ್ತಿದೆ. ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಎಂದು ಹೇಳಲಾಗುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories