ತಮಿಳು ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನದ ಸುದ್ದಿಯ ನಡುವೆ ನಟಿ ತ್ರಿಷಾ ಹೆಸರು ಕೇಳಿಬರುತ್ತಿದೆ. ತ್ರಿಷಾ ಅವರದ್ದು ಎನ್ನಲಾದ ವೈರಲ್ ಪೋಸ್ಟ್ ಇದಕ್ಕೆ ಕಾರಣ ಎನ್ನಲಾಗಿದ್ದು, ಅದು ಎಡಿಟ್ ಮಾಡಲಾದ ಸುಳ್ಳು ಪೋಸ್ಟ್ ಎಂಬುದು ಬಹಿರಂಗವಾಗಿದೆ.
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಹಾಗೂ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಸುದೀರ್ಘ ದಾಂಪತ್ಯ ಜೀವನವನ್ನು ಕೊನೆಗೊಳಿಸುತ್ತಿರುವ ಸುದ್ದಿಯ ನಡುವೆಯೇ, ನಟಿ ತ್ರಿಷಾ ಕೃಷ್ಣನ್ ಅವರ ಹೆಸರು ಮುನ್ನೆಲೆಗೆ ಬರುತ್ತಿದೆ.
26
ತ್ರಿಷಾ ಹೆಸರು ಮುನ್ನೆಲೆಗೆ
ಇವರ ಡಿವೋರ್ಸ್ಗೆ ಕಾರಣವಾಗಿರುವುದು ನಟಿ ತ್ರಿಷಾ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಜೋಡಿ ಅನೇಕ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಹೀಗಾಗಿ ವಿಜಯ್ ಡಿವೋರ್ಸ್ ಪಡೆಯಲು ಈ ನಟಿ ತ್ರಿಷಾ ಅವರೇ ಮುಖ್ಯ ಕಾರಣ ಎಂದು ಮಾತುಗಳು ಕೇಳಿಬರುತ್ತಿದೆ.
36
ತ್ರಿಷಾ ಪೋಸ್ಟ್ ವೈರಲ್
ಇದರ ನಡುವೆಯೇ, ತ್ರಿಷಾ ಅವರದ್ದು ಎನ್ನಲಾದ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಲ್ಚಲ್ ಸೃಷ್ಟಿಸುತ್ತಿದೆ. ಆ ಪೋಸ್ಟ್ನಲ್ಲಿ, ಏನೇ ಆಗಲಿ, ಎಷ್ಟೇ ವಿರೋಧ ಎದುರಾಗಲಿ ನಾವು ಎದರಿಸೋಣ. ಒಂದು ವೇಳೆ ಇಡೀ ಜಗತ್ತು ನಿನ್ನ ವಿರುದ್ಧ ನಿಂತರೆ, ನಾನೆಂದಿಗೂ ನಿನ್ನನ್ನು ಬಿಟ್ಟುಕೊಡುವುದಿಲ್ಲ ಎಂದು ಬರೆಯಲಾಗಿದೆ. ತ್ರಿಷಾ ಅವರು ವಿಜಯ್ ಉದ್ದೇಶಿಸಿಯೇ ಈ ಮಾತನ್ನು ಹೇಳಿದ್ದಾರೆಂದು ಹೇಳಲಾಗುತ್ತಿದೆ.
ಇದಕ್ಕೆ ಇದುವರೆಗೆ ನಟಿ ತ್ರಿಷಾ ಕೂಡ ಉತ್ತರ ಕೊಡದೇ ಇರುವುದು ಸಾಕಷ್ಟು ಗಾಳಿಸುದ್ದಿಗೂ ಕಾರಣವಾಗುತ್ತಿದೆ. ಆದರೆ ಈ ಪೋಸ್ಟ್ನ ಸಂಶೋಧನೆ ಮಾಡಿದ್ದಾರೆ ಅವರ ಅಭಿಮಾನಿಗಳು. ಅದರಲ್ಲಿ ಸಾಕಷ್ಟು ವ್ಯತ್ಯಾಸ ಇರುವುದನ್ನು ನೋಡಬಹುದಾಗಿದೆ. ಅವರ ಹೆಸರಿನ ಭಾಗದಲ್ಲಿ ಎಡಿಟ್ ಮಾಡಿರುವುದನ್ನೂ ನೋಡಬಹುದು.
56
ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯದ ಫೋಟೋ
ವಿಜಯ್ ದಳಪತಿ ಮತ್ತು ಸಂಗೀತಾ ಅವರ ವಿವಾಹ ವಾರ್ಷಿಕೋತ್ಸವದ ದಿನ ಹಂಚಿಕೊಂಡ ಶುಭಾಶಯಗಳ ಪೋಸ್ಟ್ ಅನ್ನೇ ತಿರುಚಿ ಈ ಲೈನ್ ಬರೆದಿರುವುದನ್ನು ಅವರ ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಅದೇ ಫೋಟೋ ಇರುವ ಪೋಸ್ಟ್ ಅನ್ನು ನೋಡಬಹುದಾಗಿದೆ.
66
ಎಲ್ಲವೂ ನಿಜ ಎಂದು ನಂಬುವ ಜನ
ತ್ರಿಷಾ ಅವರ ಅಧಿಕೃತ ಇನ್ಸ್ಟಾ ಅಕೌಂಟ್ ಸ್ಕ್ರೀನ್ಷಾಟ್ ತೆಗೆದುಕೊಂಡು ಅದರಲ್ಲಿ ಶಬ್ದಗಳನ್ನು ಎಡಿಟ್ ಮಾಡಿ ವಿಜಯ್ ದಳಪತಿ ಎಂದೆಂದೂ ನನ್ನವನೇ ಎನ್ನುವ ಅರ್ಥದಲ್ಲಿ ಬರೆದು ವೈರಲ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬರುವ ಎಲ್ಲವನ್ನೂ ನಂಬುವ ಜನ ಅದನ್ನೇ ನಿಜ ಎನ್ನುತ್ತಿದ್ದಾರೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.