ಹೊಸ ಹೆಂಡ್ತಿ ಜೊತೆ ಹಳೆ ಹೆಂಡ್ತಿನೂ ಕರ್ಕೊಂಡು 100 ಕೋಟಿ ಬಂಗ್ಲೆಗೆ 'ಬೆಂಗಳೂರು ಅಳಿಯ' ಆಮೀರ್​ ಶಿಫ್ಟ್​

Published : Jul 11, 2026, 05:07 PM IST

ನಟ ಆಮೀರ್ ಖಾನ್ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಮದುವೆಯಾಗುವ ಮೂಲಕ ಬೆಂಗಳೂರು ಅಳಿಯಾಗಿದ್ದಾರೆ. ಈ ದಂಪತಿ ಮುಂಬೈನಲ್ಲಿ 100 ಕೋಟಿ ಮೌಲ್ಯದ ಹೊಸ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದು, ಕುತೂಹಲ ಎಂದರೆ ಮಾಜಿ ಪತ್ನಿ ಕಿರಣ್ ರಾವ್ ಕೂಡ ಅದೇ ಕಟ್ಟಡದಲ್ಲಿ ವಾಸಿಸಲಿದ್ದಾರೆ.

PREV
16
ಬೆಂಗಳೂರು ಅಳಿಯ

60 ವರ್ಷದ ನಟ ಆಮೀರ್​ ಖಾನ್​ ಈಚೆಗಷ್ಟೇ ತಮ್ಮ 3ನೇ ಮದುವೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಹಿಂದೆ ಎರಡು ಬಾರಿಯಂತೆ ಈ ಬಾರಿಯೂ ಹಿಂದೂ ಮಹಿಳೆಯನ್ನೇ ಆಯ್ಕೆ ಮಾಡಿಕೊಂಡು ದಾಖಲೆ ಬರೆದಿರುವ ನಟ, ಈಗ ಮೂರನೆಯ ಮದುವೆಯ ಮೂಲಕ ಬೆಂಗಳೂರು ಅಳಿಯ ಆಗಿದ್ದಾರೆ. ಇದಕ್ಕೆ ಕಾರಣ, ಇವರು ಈಗ ಮದ್ವೆಯಾಗಿರೋದು ಬೆಂಗಳೂರಿನ ಗೌರಿ ಸ್ಪ್ರಾಟ್ ಅವರೊಂದಿಗೆ.

26
ನಟನ ಹೊಸ ಅಧ್ಯಾಯ

ಈಗ 3ನೇ ಪತ್ನಿಯ ಜೊತೆ ನಟ ಆಮೀರ್​ ಖಾನ್​, ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಜುಲೈ 5 ರಂದು ವಿವಾಹವಾದ ದಂಪತಿ ಈಗ 100 ಕೋಟಿಯ ಹೊಸ ಬಂಗ್ಲೆಗೆ ಶಿಫ್ಟ್​ ಆಗಲು ತಯಾರಿ ನಡೆಸುತ್ತಿದ್ದಾರೆ. ಆಮೀರ್ ಮತ್ತು ಗೌರಿ ಹೊರತುಪಡಿಸಿ ಈ ಹೊಸ ಬಂಗ್ಲೆಗೆ ಯಾರು ಹೋಗುತ್ತಿದ್ದಾರೆ ಎನ್ನುವುದು ಕೂಡ ಕುತೂಹಲವಾಗಿದೆ.

36
ಎಲ್ಲಿದೆ ಅಪಾರ್ಟ್​ಮೆಂಟ್​?

ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ, ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಹೊಸ ಮನೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಈ ಹೊಸ ಬಂಗಲೆ ಮುಂಬೈನ ಖಾರ್‌ನಲ್ಲಿರುವ ಯೂನಿಯನ್ ಪಾರ್ಕ್‌ನಲ್ಲಿರುವ ಕನ್ಯಾರಾಶಿ ಸಹಕಾರ ಸಂಘದಲ್ಲಿರುವ ಮರೀನಾ ಅಪಾರ್ಟ್‌ಮೆಂಟ್‌ ಆಗಿದ್ದು ಇದರ ಬೆಲೆ 100 ಕೋಟಿ ಎನ್ನಲಾಗಿದೆ.

46
100 ಕೋಟಿ ಪಾವತಿ

ಪ್ರಸ್ತುತ ಮರೀನಾ ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಮೀರ್ ತಮ್ಮ ಐಷಾರಾಮಿ ಮನೆಗೆ ಈಗಾಗಲೇ 100 ಕೋಟಿ ರೂಪಾಯಿ ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅದು ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ವರ್ಷ ಬೇಕಿರುವ ಕಾರಣ,ಸಂಪೂರ್ಣ ಕಟ್ಟಡ ನಿರ್ಮಾಣವಾದ ಮೇಲೆ ಶಿಫ್ಟ್​ ಆಗಲಿದ್ದಾರೆ ಎನ್ನಲಾಗಿದೆ. ಸದ್ಯ ಆಮೀರ್​ ಖಾನ್​, ಕುಟುಂಬದೊಂದಿಗೆ ಪಾಲಿ ಹಿಲ್‌ನ ವಿಲ್ನೋಮೋನಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

56
ನಟನ ಜೊತೆ ಯಾರು ಇರಲಿದ್ದಾರೆ?

ಆಮೀರ್​ ಖಾನ್​ ಹೊಸ ಅಪಾರ್ಟ್​ಮೆಂಟ್​ನ ಮೇಲಿನ ಮೂರು ಮಹಡಿಗಳಲ್ಲಿ ತನ್ನ ಪತ್ನಿ ಮತ್ತು ಗೌರಿ ಅವರ ಮೊದಲ ಮದುವೆಯಿಂದ ಹುಟ್ಟಿರುವ ಏಳು ವರ್ಷದ ಮಗ ಕ್ವಿನ್ ಜೊತೆ ವಾಸಿಸಲಿದ್ದಾರೆ. ಇವರ ಜೊತೆಗೆ ಆಮೀರ್​ ಸಹೋದರಿಯರಾದ ಫರ್ಹತ್ ದತ್ತಾ ಮತ್ತು ನಿಖತ್ ಮತ್ತು ನಟನ ತಾಯಿ ಕೂಡ ಅದೇ ಅಪಾರ್ಟ್ಮೆಂಟ್ನಲ್ಲಿ ವಾಸಿಸಲಿದ್ದಾರೆ.

66
2ನೇ ಪತ್ನಿಯೂ ಇಲ್ಲೇ ವಾಸ

ಕುತೂಹಲ ಎಂದರೆ, ಆಮೀರ್​ ಖಾನ್​ ಅವರ ಎರಡನೇ ಮಾಜಿ ಪತ್ನಿ ಕಿರಣ್ ರಾವ್ ಮತ್ತು ನಟನ ಮಗ ಜುನೈದ್ ಖಾನ್ ಕೂಡ ಅಪಾರ್ಟ್​ಮೆಂಟ್​ನಲ್ಲಿ ವಾಸಿಸಲಿದ್ದಾರೆ. ಆಮೀರ್ ತಮ್ಮ ಮಗ ಜುನೈದ್ ಗಾಗಿ ಒಂದು ಮಹಡಿಯನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories